Monday, November 29, 2010

Tarale 3 murthigalu

ಬೀದರಿನ ತರಲೆ ತ್ರಿಮೂತರ್ಿಗಳು...
‘College life is golden life and it’s include many golden memories’ ಎನ್ನುವ ಮಾತು ಎಷ್ಟು ಅರ್ಥಗಭರ್ಿತ ಅಲ್ವಾ?
ನಾನು 2007-08 ನೇ ವರ್ಷದಲ್ಲಿ ಬೀದರ್ನ ಕನರ್ಾಟಕಾ ಕಾಲೇಜ್ನಲ್ಲಿ ಬಿಎ ಪದವಿಯನ್ನು ಮುಗಿಸಿದೆ. ಪಿಯುಸಿಯಲ್ಲೆನೋ ಕಾಲೇಜ್ ಲೈಫ್ನ ಮೊದಲ ಮೆಟ್ಟಿಲೆಂದು ಯಾರ ತಂಟೆಗೂ ಹೋಗದೆ ಕೋಲೆ ಬಸವನಂತೆ ಸುಮ್ಮನಾಗಿ, ಇನೋಸೆಂಟ್ ಬಾಯ್ ಎಂಬ ಬಿರುದನ್ನು ಪಡೆದುಕೊಂಡೆ, ನಂತರ ಡಿಗ್ರಿಯಲ್ಲಿ ಭಂಟ ಸ್ನೇಹಿತರೋಡಗೂಡಿ ತುಂಟಾಟಗಳ ವರಸೆಯನ್ನೆ ನಿಲ್ಲಿಸಿದೆ. ಆ ತುಂಟಾಟಗಳ ಲಿಸ್ಟ್ ಮಾಡಿದರೆ ಗಿನ್ನಿಸ್ ದಾಖಲೆಯಾಗಬಹುದೇನೋ(!)
ಕ್ಲಾಸ್ನಲ್ಲಿ ಕುಳಿತಾಗ ಸಂತೋಷ ಎನ್ನುವ ಸ್ನೇಹಿತ ಬಂದರೆ ಸಾಕು 'ಕ್ರಿಷ್....' ಎಂಬ ಅಡ್ಡಹೆಸರು ಪ್ಲೇ ಬ್ಯಾಕ್ ಮ್ಯೂಸಿಕ್ ಆಗಿ ಹೊರಹೋಮ್ಮುತಿದ್ದಾಗ ಮೇಷ್ಟ್ರು ಕೂಡ ದಂಗು ಬಡಿದು ನಿಲ್ಲುತ್ತಿದ್ದರು. ಸ್ಟ್ಯಾಟಿಸ್ಟಿಕ್ಸ್ ಕ್ಲಾಸ್ ನಡೆದಾಗ ಹಿಂದೆ ಕೂತು ಎಕಾನಾಮಿಕ್ಸ್ ನೋಟ್ಸ್ ಬರೆಯುವುದು ರೂಢಿಯಾಗಿ ಬಿಟ್ಟಿತ್ತು. ಒಂದ್ಸಲ ಸ್ಟ್ಯಾಟಿಸ್ಟಿಕ್ಸ್ ಮೇಷ್ಟ್ರಿಂದ ಉಗಿಸಿ ಕೊಂಡುದ್ದುಂಟು. ಹಾಗು ಎಕಾನಾಮಿಕ್ಸ್ ಮೇಷ್ಟ್ರು ಬಂದು ಕೊರೆಯುವಾಗ ಬಾಲಕೋನಿಯಲ್ಲಿ ಕುಳಿತು ಎಂಪಿ3 ಹಾಡು, ಮೊಬೈಲ್ನಲ್ಲಿ ಗೇಮ್ ಆಡುತ್ತಿದ್ದುದ್ದು, ಆಮೇಲೆ ಚಿಟಿಥಿ ಡಣಜಣಠಟಿ ಎಂದಾಗ ಮೂರು ತರಲೆ ಪ್ರಶ್ನೆಗಳು ಹೊರಹೊಮ್ಮುತ್ತಿದ್ದವು. ಇದರಿಂದ ಇಂಪ್ರೇಸ್ ಆದ ಹುಡುಗಿಯರು ಗ್ರೀನ್ ಸಿಗ್ನಲ್ ಕೂಡ ನೀಡಿದ್ದುಂಟು.
 ಇವೆಲ್ಲಾ ಇಂಡೋರ್ ತುಂಟಾಟಗಳಾದರೆ ಜೌಟ್ಡೋರ್ ತುಂಟಾಟಗಳೆ ಬೇರೆ, ಎನ್ಎಸ್ಎಸ್ ಕ್ಯಾಂಪ್ನಲ್ಲಿ ವರಕ್ಕಾಗಿ ಕಾಯುವ ಮುನಿಯಂತೆ ಸರ್ ಬರುವವರೆಗೆ ಬಿಸಿಲುಕುದುರೆಯಂತೆ ಅಂಡಲೆದು ಎನ್ಎಸ್ಎಸ್ ಸರ್ ಬರುವ ಮುನ್ನ ಗೌಂಡ್ಗೆ ಹಾಜರ್, ಅಟೆಂಡೆನ್ಸ್ ಟೈಮ್ನಲ್ಲಿ ಇದ್ದವರು ನಂತರ ಕಾಣಿಸೋದು ಊಟದ ಸಮಯದಲ್ಲೇ ಎನ್ನಬಹುದು. ಆಮೇಲೆ ಸರ್ ಕೆಲಸ ತುಂಬಾ ಆಯ್ತು ಊಟ ಎಲ್ಲಿ ಅಂತಾ ರಾಜಾರೋಷವಾಗಿ ಕೇಳ್ದಾಗ ಡೋಳ್ಳು ಹೊಟ್ಟೆಯ; ಕುಬ್ಜ ಕಾಯದ ಮೇಷ್ಟ್ರು ಆಯ್ತಪ್ಪಾ ನಡೀರಿ ಅಂತಾ ಹೇಳಿದ್ದೆ ತಡ ಎಲ್ಲಾ ಕೆಲಸ ಬಿಟ್ಟು ಊಟಕ್ಕೆ ಧಾವಿಸುತ್ತಿದ್ದೆವು. ಆ ತರೆಲೆ-ತುಂಟಾಟದ ದಿನಗಳೆ ಹಾಗೆ ಎಂದಿಗೂ ಮರೆಯಲಾಗದು.
ಗ್ರಂಥಾಲಯದ ಮೇಡಂಗಂತೂ ಅಟ್ಟದ ಮೇಲೆ ಕೂರಿಸಿ ಪುಸ್ತಕ ಗಿಟ್ಟಿಸಿಕೊಳ್ಳುವ ವಿದ್ಯೆ ನಮ್ಮಿಂದ ಕಲಿಯಬೇಕು. ಅವರಿಂದ ಪುಸ್ತಕ ಗಿಟ್ಟಿಸಿಕೊಳ್ಳುವುದೆಂದರೆ ನಮಗೆ ನೀರು ಕುಡಿದಷ್ಟು ಸುಲಭ. ಇನ್ನೊಂದು ವಿಷಯ ಹೇಳುವುದು ಮರೆತೆ ಅನ್ಸುತ್ತೆ ನಮ್ಮ ನೋಟ್ಸ್ಗಳಿಗೆ ಸರ್ ಸಹಿ ಹಾಕದೆ ಹೋದಾಗ ಅವರ ಸಿಗ್ನೇಚರ್ ಕಾಪಿ ಕೂಡ ಮಾಡಿದ್ದುಂಟು. ಒಮ್ಮೆ ಸರ್ ಅನುಮತಿ ಇಲ್ಲದೆ ಹೈದ್ರಾಬಾದ್ ಟೂರ್ಗೆ ಹೋಗಿ ಮುಖಕ್ಕೆ ಮಂಗಳಾರತಿ ಮಾಡಿಸಿಕೊಳ್ಬೆಕಾಯ್ತು. ಹೀಗೆ ತ್ರಿಮೂತರ್ಿ ತರಲೆಗಳ ತುಂಟಾಟದ ಬಗ್ಗೆ ಹೇಳುತ್ತಾ ಹೋದರೆ ಪುಸ್ತಕವೇ ಆಗಬಹುದು, ಅದಕ್ಕೆ ಇಲ್ಲಿಗೆ ನಿಲ್ಲಿಸುತ್ತೇನೆ. ನೆನೆಪುಗಳನ್ನು ರಿಫ್ರೇಶ್ ಮಾಡಿಕೋಳ್ಳುವ ಅವಕಾಶ ನೀಡಿದಕ್ಕೆ ಯುವಜನಕ್ಕೆ ತುಂಬಾ ಧನ್ಯವಾದಗಳು.
ಆತೀಶ ಬಿ ಕನ್ನಾಳೆ

No comments:

Post a Comment