Saturday, July 16, 2011

Direct Word...

ಮತ್ತೆ ನಲುಗಿದ ಮುಂಬೈ...

ಹೈ ಸೋನೆ ಕಿ ಚಿಡಿಯಾ, ಅಬ್ ತೇರೆ ಬೇಟೆ ಹೋಗಯೆ ಹೈ ರಾಜನೀತಿಕಿ ಗುಡಿಯಾ(ಕೈಗೊಂಬೆ)!!!
"ನಾರೀಮನ್ ನರಳಾಟ, ತಾಜ್ ತಾಂಡವ ಇನ್ನೂ ಹಸಿ-ಬಿಸಿ. ಹೀಗಿರುವಾಗಲೇ ಏದುಸಿರು. ಲೆಟ್ಸ್ ಟುಗೆದರ್ ಇದು ಸರ್ವ ಭಾರತೀಯರು ಒಂದಾಗಲೇಬೇಕಾದ ಸಮಯ. ಈಗ ಒಂದಾಗದಿದ್ದಲ್ಲಿ ಮುಂದೆ ಅವಕಾಶ ದೊರಕದೆ ಹೋಗದಿರುವಲ್ಲಿ ಸಂದೇಹವಿಲ್ಲ. ಕಾರಣವಿಷ್ಟೆ, ಮುಂದೆ ಕಸಬ್ ನಿಮ್ಮ ಮನೆಗೂ ಬರಬಹುದು! ಅಲ್ಲಿಯೂ ರಕ್ತದೋಕುಳಿ ಹರಿಸಬಹುದು. ಇಲ್ಲಿ ರಾವಣನ ನಿನರ್ಾಮ ಖಚಿತ... (ರಾವಣ ಯಾರು ಎನ್ನುವುದು ಇನ್ನೂ ನಿಗೂಢ ಎನ್ನುವುದು ನಮ್ಮ ರಾಜಕೀಯ ವ್ಯಕ್ತಿಗಳ ಅಭಿಪ್ರಾಯ..!!)"
ಪದೇ-ಪದೆ ರಕ್ತದೋಕುಳಿಯಾಡುತ್ತಿರುವ ಈ ನರಹಂತಕರರಿಗೆ ಮೂಗುದಾರ ಹಾಕುವ ಸಾಮಥ್ರ್ಯ ಭಾರತಕ್ಕಾಗಲೀ, ವಿಶ್ವದ ಹಿರಿಯಣ್ಣನ ಸ್ಥಾನದಲ್ಲಿರುವ ಅಮೆರಿಕಕ್ಕಾಗಲಿ ಅಷ್ಟೇ ಯಾಕೆ ಖುದ್ದು ಪಾಕಿಸ್ತಾನಕ್ಕೇ ಇಲ್ಲ. ಅದರ ಪರಿಣಾಮವೇ ಈ ತ್ರಿವಳಿ ಬಾಂಬ್ ಸ್ಫೋಟಗಳು.
26/11 ಇನ್ನೂ ಕಣ್ಣೆದುರು ಹಸಿಹಸಿಯಾಗಿದೆ. ಅಷ್ಟರಲ್ಲೇ 13/7 ನಡೆದು ಪರದೆಯತ್ತ ಸರಿಯಿತು. ಈ ಪಾತಕಿಗಳ ಪಾಪಕೃತ್ಯಕ್ಕೆ 17 ಜನ ಬಲಿಯಾಗಿದ್ದಾರೆ. 131 ಜನ ಜೀವನ್ಮರಣದ ನಡುವೆ ಸೆಣಸುತ್ತಿದ್ದಾರೆ. ಇಂಥ ಕ್ರೌರ್ಯದಲ್ಲಿಯೇ ಸಂತೃಪ್ತಿ ಪಡುವ ಪಾಕಿಸ್ತಾನಿಗಳು ಜಿಹಾದ್ ಹೆಸರಿನಲ್ಲಿ ಇದೆಲ್ಲಾ ನಡೆಸುತ್ತಿರುವುದಕ್ಕೆ ಕಾರಣ ಹಲವಾದರೆ, ಉದ್ದೇಶ ಒಂದೇ ಅದು ಭಯ+ಉತ್ಪಾದನೆ. ಕಂಪನಿಯಲ್ಲಿ ವಸ್ತುಗಳ ಉತ್ಪಾದನೆ ಹಾಗೂ ಟಾಗರ್ೆಟ್ಗಳಿರುವಂತೆ ಇಲ್ಲಿಯೂ ಅವರಿಗಿರುವುದು ಭಯ ಹುಟ್ಟಿಸಲೇಬೇಕೆಂಬ ಟಾಗರ್ೆಟ್.
ಇಂಡಿಯನ್ ಮುಜಾಹಿದ್ದೀನ್, ಲಷ್ಕರ್ ಕೃತ್ಯ ಎಂದು ಹೇಳಲಾಗುತ್ತಿದೆ. ಆದರೂ ಇನ್ನೂ ಯಾರೂ ಇದರ ಹೊಣೆಹೊತ್ತುಕೊಂಡಿಲ್ಲ. ಯಾರು ಹೊಣೆ ಹೊತ್ತುಕೊಂಡರೆಷ್ಟು ಬಿಟ್ಟರೆಷ್ಟು ಏನೂ ಬದಲಾಗದು ಎಂಬ ಮಾತು ಮಾತ್ರ ಸ್ಪಟಿಕದಷ್ಟು ಸ್ಪಷ್ಟ.
ಈ ಘಟನೆಗಳನ್ನು ಗಮನಿಸುತ್ತಿರುವಾಗ ಒಂದು ಮಾತು ನೆನಪಾಗುತ್ತೆ, "ಹಿಂಸೆ ಕೊಡುವವರಿಗಿಂತ ಸಹಿಸಿಕೊಳ್ಳುವವನೇ ಹೆಚ್ಚು ಅಪರಾಧಿ..." ಹಾಗೇ ಇಲ್ಲಿಯೂ ಅಷ್ಟೆ. ಬೆಣ್ಣೆ ಕೈಲಿಟ್ಟುಕೊಂಡು ತುಪ್ಪಕ್ಕಾಗಿ ಅಲೆದಾಡಿದಂತಾಗಿದೆ. ನಮ್ಮೀ ರಾಷ್ಟ್ರದ ಸ್ಥಿತಿ, ಪರಿಸ್ಥಿತಿ... ಇದರ ಫಲಶ್ರುತಿ ಅಮಾಯಕರ ಪ್ರಾಣತ್ಯಾಗ.
ಈ ಉದಾಹರಣೆಗೆ ಇಷ್ಟೇ ಕಾರಣ, ಕಸಬ್ ಸಿಕ್ಕು ತಿಂಗಳುಗಳು ಸವೆಯುತ್ತಿವೆ. ವರ್ಷಗಳು ಘಟಿಸುತ್ತಿವೆ. ಆದರೆ, ಬೆಳವಣಿಗೆ ಮಾತ್ರ ಶೂನ್ಯ! ಬದಲಿಗೆ `ಪಾತಕಿಗಳ ಪತಿ'ಗೆ ರಾಜ ಸತ್ಕಾರ ಹಾಗೂ ಭೋಗದ ಜೀವನ ನೀಡಲಾಗುತ್ತಿದೆ. ಇರುವುದಕ್ಕೆ ಜೈಲು, ಓದುವುದಕ್ಕೆ ಪುಸ್ತಕಗಳು, ಸಮಯ-ಸಮಯಕ್ಕೆ ಬೇಕಾದ ಎಲ್ಲಾ ವಸ್ತುಗಳು ಹಾಗೂ ಇಲ್ಲಿಯವರೆಗೆ ಇವನ ಜೀವನ ನಿರ್ವಹಣೆಗೆ ಭಾರತ (ಅ)ಸಕರ್ಾರ ಕೋಟಿ ಕ್ರಾಸ್ ಮಾಡಿದೆ. ಬಹುಶಃ ಬೆಂಗಳೂರಿನಂಥ ನಗರದಲ್ಲಿ ದಿನವಿಡೀ ದುಡಿಯುವ ಕೂಲಿಯಾಳಿಗೂ ಆ ಜೀವನ ಅಲಭ್ಯವಾಗಿದೆ. ಇದನ್ನು ನಮ್ಮ ದೌಭರ್ಾಗ್ಯವೆಂದರೆ ಉತ್ಪ್ರೇಕ್ಷೆಯೇನಲ್ಲ.
ವಿಷಯವಸ್ತು ಇಷ್ಟೆ, 13 ಜುಲೈ ಮಿಸ್ಟರ್ ಪರಮ ಪಾತಕಿಯ ಹುಟ್ಟು ಹಬ್ಬ. ಆ ಹುಟ್ಟು ಹಬ್ಬದ ಉಡುಗೊರೆಯಾಗಿ ಅವನಿಗೆ ಭಾರತೀಯರ ರಕ್ತದ ಹವ್ವಿಸ್ಸು. ವಾಹ್ಹ ಎಂಥಾ `ದೇಶ ಪ್ರೇಮ.' ಅವರಿಗಾಗಿ ತಾಜ್ನಲ್ಲಿ ತಕರಾರಿಲ್ಲದೆ ತರಾತುರಿಯಲ್ಲಿ ಬುಲೆಟ್ ಸುರಿಸಿದ ಕಸಬ್ ಇಂದು (ನಿ)ರ್ಬಂಧಿ. ಅಂಥವನಿಗಾಗಿ ಇಂಥದ್ದೊಂದು ಕೊಡುಗೆ ನೀಡುವ ಉ(ದಾರ)ದ್ರಿ  ಮನೋಭಾವ. ಇವರ ತಮ್ಮ ಸ್ವಾರ್ಥಕ್ಕಾಗಿ, ಸೀಟು ರಕ್ಷಣೆಗಾಗಿ ತಿಪ್ಪರಲಾಗ ಹಾಕುವ ರಾಜಕೀಯ ಧುರಿಣರು.
ಇಷ್ಟೇಲ್ಲಾ ಹೇಳೋದರ ಪ್ರಮುಖ ಉದ್ದೇಶ ಒಂದೆ, ಸಾಯಂಕಾಲದ ಸುಂದರ ಗಾಳಿಯಲ್ಲಿ ಕುಟುಂಬದೊಂದಿಗೆ ಏನೋ ಖರೀದಿ ಮಾಡಬೇಕೆಂದು ಬಂದ ಮಕ್ಕಳು, ಪಾಲಕರು ಹೀಗೆ ಹತ್ತು ಹಲವಾರು ವರ್ಗದ ಜನ ನಿಭರ್ಿಡೆಯಿಂದ (ಬಹುಶಃ ಇದು ತಮ್ಮ ಮನೆಯೆಂದು) ತಿಳಿದೋ ಏನೋ ತಿರುಗಾಡುತ್ತಿದ್ದರು. ಅಂಥ ವೇಳೆ ನಡೆದುದ್ದೇ ಈ ನರಮೇಧ....
ಜಸ್ಟ್ ಈ ನರಮೇಧದ ಕಡೆ ಮೆಲುಕು ಹಾಕೋಣ:
mugdha aakrandana
ಅಪೇರಾ ಹೌಸ್, ಜವೇರಿ ಬಜಾರ್, ಚನರ್ಿರಸ್ತೆ ಹಾಗೂ ದಾದರ್ ಮತ್ತಿತರ ಸ್ಥಳಗಳಲ್ಲಿ ಒಟ್ಟು 9 ನಿಮಿಷಗಳಲ್ಲಿ ಅಂದರೆ, 6.51-7 ಆಸುಪಾಸಿನವರೆಗೆ ನಡೆದ ಈ ಡೀಲಿಂಗ್ ಮತ್ತೆ ಜನರಲ್ಲಿ ಎಲ್ಲಿಲ್ಲದ ಭಯ ಮೂಡಿಸಿದೆ. ವಿಶೇಷವೆಂದರೆ ಈ ಮೂರೂ ಸ್ಥಳಗಳು ಜನನಿಬಿಡ. ಇಂಥ ಸ್ಥಳದಲ್ಲಿ ಸ್ಫೋಟ ನಡೆಯಬೇಕಾದ್ದಲ್ಲಿ ಸಾಮಾನ್ಯವಾದುದ್ದೇನಲ್ಲ. ಇದೊಂದೆ ಅಲ್ಲ, ಯಾವ ಸ್ಫೋಟ ನಡೆಯಬೇಕಾದರೂ ಹಿಂದೆ ಪ್ರಭಾವಿ ವ್ಯಕ್ತಿಗಳ ಕೈ ಇರಲೇಬೇಕು. ಹೀಗಿದ್ದಾಗ ಮಾತ್ರ ಇದು ಸಾಧ್ಯ. ಈಗ ಪ್ರತಿಯೊಂದು ಪ್ರಾಬ್ಲಮ್ಗಳ ಎದುರಿರುವುದು ಒಂದೇ ಸವಾಲು, ಅದು ಈ ರಕ್ತದೋಕುಳಿ ಹಿಂದಿರುವ ಕೈಗಳನ್ನು ಪತ್ತೆ ಹಚ್ಚುವ ಕೆಲಸವಾಗಬೇಕು.
ಈ ವಿಷಯಗಳು ಸೈಡ್ಗಿಟ್ಟು, ಸರಣಿ ಸ್ಫೋಟಗಳ ಕುರಿತು ನಮ್ಮ ರಾಷ್ಟ್ರದ ಹೊಣೆಹೊತ್ತವರ ಅಭಿಪ್ರಾಯಗಳನ್ನು ನೋಡೋಣ;

"ಈ ವಿಧ್ವಂಸಕ ಕೃತ್ಯದ ಹಿಂದಿರುವವರ ಹೆಸರು ಹೇಳಲಾರೆ ಹಾಗೂ ಇದರ ಹಿಂದಿರುವವರ ಸುಳಿವು ಸಿಕ್ಕಿಲ್ಲ"
ಪಿ. ಚಿದಂಬರಂ, ಗೃಹ ಸಚಿವ
"ಭಯೋತ್ಪಾದನೆಯನ್ನು ಬೇರು ಸಹಿತ ಕಿತ್ತೊಗೆಯಲು ಸಕರ್ಾರ ನೀತಿಯನ್ನು ರೂಪಿಸಬೇಕು. ವಿಫಲವಾಗಿರುವುದು ಗುಪ್ತಚರ ಸಂಸ್ಥೆಯಲ್ಲ ಸಕರ್ಾರ"
ಲಾಲ್ಕೃಷ್ಣ ಅಡ್ವಾಣಿ, ಬಿಜೆಪಿ ಹಿರಿಯ ನಾಯಕ.
ಉಗ್ರರ ಎಲ್ಲ ದಾಳಿಗಳನ್ನು ತಡೆಯುವುದು ಕಠಿಣ. ಅಮೆರಿಕದಲ್ಲೂ ಉಗ್ರರ ದಾಳಿಗಳು ನಡೆದಿದ್ದು, ಅದನ್ನು ತಡೆಯಲು ಅವರಿಂದಲೂ ಸಾಧ್ಯವಾಗಲಿಲ್ಲ."
ರಾಹುಲ್ ಗಾಂಧಿ, ಎಐಸಿಸಿ ಕಾರ್ಯದಶರ್ಿ.

ಹೀಗೆ ಹಲವರು ಹಲವು ರೀತಿಯಲ್ಲಿ ತಮ್ಮ ಅಭಿಪ್ರಾಯಗಳನ್ನು ತಿಳಿಸಿದ್ದಾರೆ. ಇದರಲ್ಲಿ ಕೆಲವರದ್ದು ಪಕ್ಷ ಉಳಿಸಿಕೊಳ್ಳುವ ಪ್ರಯತ್ನವಾದರೆ, ಇನ್ನೂ ಕೆಲವರದ್ದು ಪಕ್ಷ ಬೀಳಿಸುವುದಾಗಿದೆ. ಅವರ ಅಭಿಪ್ರಾಯಗಳಲ್ಲಿ ಪಾರದರ್ಶಕತೆ ಎನ್ನುವುದು ಮೈಲಿ ದೂರ!
ಸತ್ತವರು ಸುಮಾರು. ಆದರೆ ಆ ಸ್ಫೋಟದಲ್ಲಿ ಯಾರೂ ಪ್ರಭಾವಿ ವ್ಯಕ್ತಿಗಳಿಲ್ಲ. (ಇದು ಇಂಥರಾ ಗುಬ್ಬಿ ಮೇಲೆ ಬ್ರಹ್ಮಾಸ್ತ್ರ ಬಿಟ್ಟಂತೆ ಎಂದೆನ್ಸಲ್ವಾ?) ಇದರ ಒಳಾರ್ಥ ಸುಸ್ಪಷ್ಟ, ಕಸಬ್ ಬುಲೆಟ್ಗೆ ಕಾಣುವುದು ಕೇವಲ ಬಡವರು, ಅಬ್ಬೇಪಾರಿಗಳು ಹೊರತು ಪ್ರಭಾವಿ(ಸ್ಟ್ರಾಂಗ್) ವ್ಯಕ್ತಿಗಳಲ್ಲ. ಇದೆಲ್ಲಾ ಗಮನಿಸಿವುದಾದರೆ ಕಿತ್ತೂರು ರಾಣಿ ಚೆನ್ನಮ್ಮಳ ರಾಜ್ಯದಲ್ಲಾದ ದಗೇಬಾಜಿ ಏನಾದರೂ ನಮ್ಮಲ್ಲಿಯೂ ನಡೆಯುತ್ತಿರಬಹುದೇ ಎಂಬ ಪ್ರಶ್ನೆ ಏಳುವುದು ಸಾಮಾನ್ಯ... ಅಷ್ಟೆ ಯಾಕೆ ಇದು ಪ್ರತಿಯೋರ್ವ ಭಾರತೀಯನ ಆಂತರ್ಯದ ಕೂಗು.
ಆತೀಶ್ ಬಿ ಕೆ.