Monday, November 29, 2010

ಯುಸ್ಲೆಸ್ ಅಲ್ಲ, ಯುಸ್ಡ್ಲೆಸ್'.....!

`ನಮ್ಮ ಯುವಕರು ಯುಸ್ಲೆಸ್ ಅಲ್ಲ, ಯುಸ್ಡ್ಲೆಸ್' ಎಂಬ ವಿವೇಕಾನಂದರ ಮಾತು ಎಷ್ಟು ಅರ್ಥಗಭರ್ಿತ ಅಲ್ಲವೆ?
ಇಂದು ಅಮೇರಿಕಾ, ಆಸ್ಟ್ರೇಲಿಯಾ, ಬ್ರೆಜಿಲ್, ಚೀನಾ ಮುಂತಾದ ದೇಶಗಳಿಗೆ ಸಾಫ್ಟ್ವೇರ್ ಇಂಜಿನಿಯರ್ಗಳನ್ನು, ಸಂಶೋಧಕರನ್ನು ಬಹುಪಾಲು ನೀಡುತ್ತಿರುವುದು ನಮ್ಮ ಭಾರತ ಎಂದು ಹೆಮ್ಮೆಯಿಂದ ಹೇಳಬಹುದು. ಅವರು ಭಾರತೀಯರಾದರೂ ಇತರೆ ರಾಷ್ಟ್ರಗಳಲ್ಲಿ ತಮ್ಮ ನಿರಂತರ ಪ್ರಯತ್ನ ಹಾಗೂ ಕಠಿಣ ಪರಿಶ್ರಮದಿಂದ ಹಲವು ಸಾಧನೆಗಳನ್ನು ಮಾಡುತ್ತಿದ್ದಾರೆ. ಅದೇ ಯುವಕರು ಭಾರತದಲ್ಲಿ ತಮ್ಮ ಜ್ಞಾನ, ಚಾತುರ್ಯಗಳಿಗೆ ಶೆಡ್ಡು ಹೊಡೆದು ಆಕುಂಚನಗೊಂಡು ಕುಳಿತಿರುವುದನ್ನು ನೋಡಿದರೆ ವಿಪಯರ್ಾಸ ಎನಿಸುತ್ತದೆ.

ಅದಕ್ಕಾಗಿಯೇ ವಿವೇಕಾನಂದರು, ನಮ್ಮ ಯುವಕರಲ್ಲಿ ಕಾರ್ಯ ಸಾಧಿಸುವ ಬಲ, ಜ್ಞಾನ, ಎದೆಗಾರಿಕೆ ಎಲ್ಲವು ಇದೆ. ಅಂದರೆ ಇದರರ್ಥ ಅವರು ಣಜಟಜ ಅಲ್ಲ, ಬದಲಿಗೆ ಣಜಜ ಟಜ ಆಗಿದ್ದಾರೆ ಎಂದರ್ಥ.
ಇದಕ್ಕೆ ಹಲವು ಉದಾಹರಣೆಗಳನ್ನು ನಮ್ಮೆದುರಿಗಿವೆ, ಪರೀಕ್ಷೆಗಳನ್ನು ರಾತ್ರೋರಾತ್ರಿ ಓದಿ 60-70 ಶೇಕಡವಾರು ಫಲಿತಾಂಶವನ್ನು ಗಳಿಸುವಷ್ಟು ಚಾಕಚಕ್ಯತೆ ಹೊಂದಿರುವ ಇವರಿಗೆ ಯಾರು ತಾನೆ ಣಜಟಜ ಅನ್ನಲು ಸಾಧ್ಯ. ಅದೇ ಸ್ವಲ್ಪ ಪರಿಶ್ರಮಪಟ್ಟು ಮೊದಲಿನಿಂದಲೇ ಓದಿ ಪರೀಕ್ಷೆಗೆ ಸಿದ್ಧವಾದರೆ, ನೀವೇ ಯೋಚಿಸಿ ಅವರು ಎಂಥ ಸಾಧನೆಗಳನ್ನು ಮಾಡಬಹುದಲ್ಲವೆ?

ಈ ಎಲ್ಲಾ ವಿಷಯಗಳನ್ನು ಕೊಂಚ ಬದಿಗೊತ್ತಿ ಯೋಚಿಸುವುದಾದರೆ, ಯುವಕರು ಇಂದು ಯಾಕೆ ಕಡಿಮೆ ಉಪಯೋಗಿಸಲ್ಪಡುತ್ತಿದ್ದಾರೆ. ಇದೇನು ಆಷರ್ೇಯವೋ? ಜಾಢ್ಯವೋ? ಅಥವಾ ಮಾರ್ಗದರ್ಶನದ ಕೊರತೆಯೋ? ಇದಕ್ಕೆ ಸೂಕ್ತ ಸಲ್ಯೂಷನ್ ಕೂಡ ವಿವೇಕಾನಂದರೆ ನೀಡುತ್ತಾರೆ. ಅದೇನೆಂದರೆ, 'ನಮ್ಮ ಯುವಕರಿಗೆ ಬೇಕಾದದ್ದು ಸರಿಯಾದ ಮಾರ್ಗದರ್ಶನ' ಅದೊಂದು ದೊರೆತರೆ ಸಾಕು, ನಾವು ಏನನ್ನು ಬೇಕಾದರೂ ಸಾಧಿಸಬಹುದಗಿದೆ.
ನಮ್ಮ ರಾಷ್ಟ್ರದ ಐತಿಹ್ಯವನ್ನು ಕೆದಕಿ ನೋಡಿದಾಗ, ಯುವಕರ ಪಾತ್ರ ಮಹತ್ವದ್ದಾಗಿದೆ. ಸ್ವಾತಂತ್ರ್ಯ ಹೋರಾಟದಲ್ಲಿ ತಮ್ಮ ಜೀವವನ್ನೇ ಒತ್ತೆ ಇಟ್ಟು ಬ್ರಿಟೀಷರ ವಿರುದ್ಧ ಹೋರಾಡಿದವರು ಯುವಕರೆ, ಕಾಗರ್ಿಲ್ ಯುದ್ಧದಲ್ಲಿ ವೈರಿಗಳ ಗುಂಡಿಗೆ ಎದೆಯೊಡ್ಡಿ ಭಾರತವನ್ನು ರಕ್ಷಿಸಿದವರು ಈ ಯುವಕರೆ, ಅಷ್ಟೆ ಯಾಕೆ ಮುಂಬೈ ದಾಳಿಯಲ್ಲಿ ಉಗ್ರವಾದಿಗಳನ್ನು ಸೇದೆಬಡಿದ ಎನ್ಎಸ್ಜಿ ಕಮಾಂಡೊ ಸಂದೀಪ್ ಉನ್ನಿಕೃಷ್ಣನ್ ಕೂಡ ಒಬ್ಬ ಯುವಕನೆ ಅಲ್ಲವೆ? ಹೀಗಿರುವಾಗ ಇಂದಿನ ಯುವಕರಿಗೆ ಏನಾಗಿದೆ, ಅವರು ಏಕೆ ಡ್ರಗ್ಸ್, ಅಫೀಮು, ಮಧ್ಯಪಾನ ಹಾಗೂ ರಾಜಕೀಯ ವ್ಯಕ್ತಿಗಳ ಕೈಗೊಂಬೆಗಳಾಗಿ ಮಾರ್ಪಡುತ್ತಿದ್ದಾರೆ? ಇವುಗಳೇನು ಯಕ್ಷಪ್ರಶ್ನೆಗಳಲ್ಲ!

ಹೀಗೆ ನಮ್ಮ ಯುವಜನತೆ ಅಂಡೆಪಿಕರ್ಿಗಳಂತೆ ವತರ್ಿಸಲು ಮೂಲ ಕಾರಣ ಅವರಿಗೆ ಸೂಕ್ತ ಮಾರ್ಗದರ್ಶನ ಇಲ್ಲದಿರುವುದೆ ಎಂದು ಕಡ್ಡಿ ಮುರಿದಷ್ಟು ಸುಲಭವಾಗಿ ಹೇಳಬಹುದು.  ಅದಕ್ಕಾಗಿಯೇ ನಮ್ಮ ಯುವಕರಿಗೆ ಬೇಕಾದದ್ದು ಸರಿಯಾದ ಮಾರ್ಗದರ್ಶನ ಎಂಬ ವಿವೇಕಾನಂದರ ಮಾತು  ನಾವು ನಂಬಿ ಅದರಂತೆ ಪಾಲಕರು ತಮ್ಮ ಮಕ್ಕಳ ಭವ್ಯ ಭವಿಷ್ಯತ್ತಿಗೆ ನಾಂದಿ  ಹಾಡಬೇಕಾದಲ್ಲಿ ಅವರು ಎಷ್ಟೇ ಛಣಥಿ ಆಗಿದ್ದರೂ ಸಹ ಮಾರ್ಗದರ್ಶನ ನೀಡಲೇಬೇಕು ಇಲ್ಲವಾದಲ್ಲಿ ಯುವಜನತೆ ಣಜಜ ಟಜ ಆಗುವುದರಲ್ಲಿ ಯಾವುದೇ ಸಂದೇಹ ಇಲ್ಲ. ಏನಂತಿರಾ.....? 

ಆತೀಶ ಬಿ ಕನ್ನಾಳೆ

No comments:

Post a Comment