Monday, November 29, 2010

ಪ್ರೀತಿಯ ಬಂಗಲೆಗೆ ಧರ್ಮದ ತಳಹದಿ
ನೋಡಮ್ಮ ಈಗ ತಾನೇ ಕಾಲೇಜ್ ಎಂಟರ್ ಆಗಿದಿಯಾ, ನಿನ್ ಹೈಸ್ಕೂಲ್ ಬುದ್ಧಿ ಎಲ್ಲಾ ಬಿಟ್ಟು ಡಿಸೆಂಟ್ ಆಗಿರಬೇಕು. ಓದಿನ ಕಡೆಗೆ ಹೆಚ್ಚು ಗಮನ ಹರಿಸಬೇಕು. ಎನ್ನುವುದು ಪ್ರತಿಯೊಂದು ಮನೆಯಲ್ಲಿ ಕೇಳಿಬರುವ ಕಾಳಜಿಯ ಕಿವಿಮಾತಾಗಿದೆ.
ಹುಡುಗಿಯರಲ್ಲಿ ಈ 16 ಎನ್ನುವ ವಯಸ್ಸು ಚಿಟ್ಟೆಯಲ್ಲಿ ಆಗುವ ಬದಲಾವಣೆಯಂತೆ ಅವರಲ್ಲಿ ಅನೇಕ ಹಾಮರ್ೋನ್ಗಳ ಬದಲಾವಣೆಯಿಂದಾಗಿ ಅವರ ಉಡುಗೆ-ತೊಡುಗೆ, ಭಾವನೆ, ಮಾತಿನ ಶೈಲಿ ಎಲ್ಲಾ ಬದಲಾಗಿ ವಿರುದ್ಧ ಲಿಂಗಗಳ ಕಡೆಗೆ ಆಕಷರ್ಿಸುತ್ತದೆ. ಈ ಸಮಯದಲ್ಲಿ ಅವರು ಇನ್ಫ್ಯಾಕ್ಚ್ಯುಯೇಷನ್ ಲವ್ಗೆ ಸುಲಭವಾಗಿ ಒಳಗಾಗುತ್ತಾರೆ.
ಸಾಮಾನ್ಯವಾಗಿ 10 ವರ್ಷಗಳ ಹಿಂದಿನ ಕಾಲೇಜು ಯುವತಿಯರ ಕಡೆಗೆ ಕಣ್ಣು ಹಾಯಿಸುವುದಾದರೆ ಅವರು ಒಬ್ಬ ಹುಡುಗನನ್ನು ಕಣ್ಣೆತ್ತಿ ನೋಡುತ್ತಿರಲಿಲ್ಲ. ಒಂದು ವೇಳೆ ನೋಡಿದರು ಅವನನ್ನು ಪರೀಕ್ಷಿಸಿ ಅವನ ಬೇಕು-ಬೇಡಗಳನ್ನು, ಎಲ್ಲಾದಕ್ಕಿಂತ ಹೆಚ್ಚಾಗಿ ನಡತೆಯನ್ನು ಸಾಣೆಗಲ್ಲಿಗೆ ಹಾಕಿ ತಿಕ್ಕುತ್ತಿದ್ದರು. ಒಂದು ವೇಳೆ ಆ ಹುಡುಗನ ಗುಣ ಅಪ್ಪಟ ಚಿನ್ನ ಎಂದು ಖಾತ್ರಿಯಾದ್ದಲ್ಲಿ ಪ್ರೇಮ ಪತ್ರಕ್ಕೆ ರುಜುಹಾಕುತ್ತಿದ್ದರು. ಹಾಗೂ ಆ ಪ್ರೀತಿ ಇಬ್ಬನಿಯಷ್ಟು ಪರಿಶುದ್ಧವಾಗಿರುತ್ತಿತ್ತು. ಅಲ್ಲಿ ಭಾವನೆಗಳ ಸಮಾಗಮವಿರುತ್ತಿತ್ತೆ ಹೊರತು ಲೈಂಗಿಕ ತೃಷೆಯಲ್ಲ. ಸಮಾಜವನ್ನು ದೃಷ್ಟಿಕೋನದಲ್ಲಿಟ್ಟುಕೊಂಡು, ಮನೆಯ ಪರವಾನಗಿ ಪಡೆದು ಮದುವೆಯ ನಂತರವೇ ಆ ಪ್ರೀತಿ ಬೆಡ್ರೂಂ ಪ್ರಣಯಕ್ಕೆ ನಾಂದಿ ಹಾಡುತ್ತಿತ್ತು.
ಆದರೆ ಇಂದಿನ 21 ನೇ ಶತಮಾನದ ಪ್ರೀತಿ ಯಂತ್ರಗಳಷ್ಟೇ ಭಾವನಾರಹಿತ ಹಾಗೂ ನಿಸ್ಸಾರಗೊಂಡಿದೆ. ಇಲ್ಲಿ ಪ್ರೀತಿ ಆರಂಭವಾಗುವುದೆ (ದೈಹಿಕ) ಚರಮ ಸುಖಕ್ಕಾಗಿ. ಇಂದು ಪ್ರೀತಿ ಎಂದರೆ ಬೆಡ್ರೂಂ ಎನ್ನುವಷ್ಟರ ಮಟ್ಟಿಗೆ ಪ್ರೀತಿಯ ವ್ಯಾಖ್ಯೆ ಅಗ್ಗವಾಗಿದೆ.
ಇಂಥ ಅವಕಾಶಗಳನ್ನು ಉಪಯೋಗಿಸಿಯೇ ಕೆಲವು ಧಮರ್ಾಂಧರು ಲವ್ ಅನ್ನು ಜಿಹಾದ್ ಆಗಿಸಿದ್ದಾರೆ. ಇಂದಿನ ಹುಡುಗಿಯರು ಹೊರಗಿನ ಸೌಂದರ್ಯ ನೋಡುವುದರ ಮೂಲಕ ಹುಡುಗರನ್ನು ಪ್ರೀತಿಸುತ್ತಾರೆ. ಹಾಗೂ ಅದು ಮುಂದೆ ಬಾರ್, ರೆಸ್ಟೋರೆಂಟ್ ಮತ್ತು ಲಾಡ್ಜ್ಗಳವರೆಗೆ ಮುಂದುವರಿಯುತ್ತದೆ. ಇದರ ಪ್ರತಿಫಲ ಎಷ್ಟುದಿನ ಮುಚ್ಚಿಡಲು ಸಾಧ್ಯ. ಕೊನೆಗೆ ಸಮಾಜದ ದೃಷ್ಟಿಯಲ್ಲಿ ಹೇಯವಾದ ಕೃತ್ಯಮಾಡಿದ ಯುವತಿಯರು ವಾಸ್ತವಕ್ಕೆ ಮರುಳುತ್ತಾರೆ. ಆಗ ಅವರ ತಲೆಯ ಪಿತ್ತ ಕಾಲಿಗಿಳಿಯುತ್ತದೆ. ಇದಕ್ಕಾಗಿಯೇ ಬಕಪಕ್ಷಿಯಂತೆ ಕಾಯುವ ಜಿಹಾದಿಗಳು ಬಲವಂತವಾಗಿ ಮಂತಾತರ ಮಾಡುತ್ತಾರೆ. ಇಂಥ ಎಷ್ಟೋ ಘಟನೆಗಳು ಇಂದು ಮಾಧ್ಯಮದಲ್ಲಿ ಸುದ್ದಿ-ಗದ್ದಲವನ್ನು ಎಬ್ಬಿಸಿವೆ. ಈ ನಿಟ್ಟಿನಲ್ಲಿ ಧಮರ್ಾಂಧ ಜನರಿಗಿಂತ ಮೋಸ ಹೋಗಿರುವ ಯುವತಿಯರದ್ದೂ ತಪ್ಪೆನ್ನಬಹುದು. ತಮ್ಮ ವಾಂಛೆಗಳನ್ನು ಪೂರೈಸಿಕೊಳ್ಳುವ ಯುವಕರು ನೂರುಜನ ನಿಂತರು. ತಾನು ಸಂಯಮ ಕಳೆದುಕೊಳ್ಳದೆ ಇದ್ದಲ್ಲಿ ಇಂಥ ಮತಾಂತರ ಪ್ರಕರಣಗಳಾಗಲು ಸಾಧ್ಯವೇ ಇಲ್ಲ.

ಪ್ರೀತಿ ಎಂಬ ಬಂಗಲೆಗೆ, ಧರ್ಮವೆಂಬ ತಳಹದಿಯನ್ನು ಹಾಕಿಕೊಂಡಿರುವುದು ಎಷ್ಟು ಸೂಕ್ತ? ಇದು ಕುರಿಯ ವೇಷದಲ್ಲಿರುವ ತೋಳಗಳ ಹೊಸ ಅವತಾರವೇ ಆಗಿದೆ. ಅವರನ್ನು ಹಿಡಿಯುವುದು ತುಂಬಾ ಕಷ್ಟ. ಆದರೆ ಹುಡುಗಿಯರೇ ನೀವು ಪ್ರೀತಿಯ ಮತ್ತಿನಿಂದ ಕೆಳಗಿಳಿದು, ವಾಸ್ತವಿಕತೆಯ ಕಡೆಗೆ ಚಿತ್ತ ಕೇಂದ್ರಿಕರಿಸಿ, ಪ್ರೀತಿಸುವ ಮುನ್ನ ಯೋಚಿಸಬೇಕು. ಬಾಹ್ಯ ಸೌಂದರ್ಯವನ್ನಲ್ಲದೆ ಆಂತರಿಕ ಸೌಂದರ್ಯವನ್ನು ಒರೆಹಚ್ಚುವುದಾದರೆ ಇವರ ಮೇಲೆ ಅಂಕುಶವಿಡಲು ಸಾಧ್ಯ. ಆದ್ದರಿಂದ ಪ್ರೀತಿ ಎಂಬ ಭವ್ಯ ಬಂಗಲೆಗೆ ಪ್ರವೇಶಿಸುವ ಮುನ್ನ ಅದರ ತಳಹದಿಯನ್ನು ಪರೀಕ್ಷಿಸಿ ತಾಳೆಹಾಕಿ. ಇಲ್ಲವಾದ್ದಲದಲ್ಲಿ, ನಿಮ್ಮ ಜೀವನ ನೀರು ಪಾಲಾಗಬಹುದು. ಏನಂತಿಯಾ ಸಖಿ..?
ಆತೀಶ ಬಿ ಕನ್ನಾಳೆ

No comments:

Post a Comment