Monday, November 29, 2010

ಯುಪಿ ಸಕರ್ಾರವೇನು ಮಲಗಿದೆಯೇ? 
(IS UP GOVERNMENT SLEEPING.....?)

'ಅತಿಥಿ ದೇವೋಭವ' ಎನ್ನುವ ಮಾತೊಂದಿದೆ ನಮ್ಮಲ್ಲಿಗೆ ಯಾವ ದೇಶ ಜನ ಬಂದರೂ, ಸತ್ಕರಿಸುವ ಶ್ರೀಮಂತ ಸಂಸ್ಕೃತಿ ನಮ್ಮದು. ಆದರೆ, ಇಂಥ ಸಂಸ್ಕೃತಿಗೆ ಮಸಿ ಬಳಿಯುವ ಕೆಲಸ ನಡೆಯುತ್ತಿರುವುದನ್ನು ನೋಡಿದರೆ ನಿಜಕ್ಕೂ ಖೇದವೆನಿಸುತ್ತದೆ.
ಜುಲೈ 2009 ರಲ್ಲಿ ನಾನು ಮತ್ತು ನನ್ನ ಸ್ನೇಹಿತ ದೆಹಲಿ ಪ್ರವಾಸಕ್ಕೆ ಹೋಗಿದ್ದೆವು. ತಿರುಗಿ ಬರುವಾಗ ತಾಜ್ಮಹಲ್ ನೋಡಬೇಕೆನ್ನುವ ಆಸೆ ನಮ್ಮದಾಗಿತ್ತು. ಹಾಗೆ ಪರಿಚಿತರಿಗೆ ಹೋಗಬೇಕಾದ ಮಾರ್ಗವನ್ನು ಕೇಳಿದೆವು. ಅವರು ಸರಿ ಮಾಹಿತಿ ನೀಡಿ, ಮಧ್ಯವತರ್ಿಗಳಿಂದ ಸ್ವಲ್ಪ ಎಚ್ಚರ ವಹಿಸಬೇಕೆಂದು ಹೇಳಿದರು.
ರೈಲಿನ ಮೂಲಕ ಆಗ್ರಾ ರೈಲು ನಿಲ್ದಾಣದಲ್ಲಿ ಇಳಿದಿದ್ದೆ ತಡ ಅಲ್ಲಿದ್ದ ಕೆಲವು ಮಧ್ಯವತರ್ಿಗಳು ಸತ್ತ ಹೆಣವನ್ನು ಹದ್ದುಗಳು ಆಕ್ರಮಿಸುವಂತೆ ನಮ್ಮನ್ನು ಸುತ್ತುವರೆದರು. ಏನನ್ನು ವಿಚಾರಿಸದೆ ಅಸಭ್ಯವಾಗಿ ವರ್ತನೆ ಮಾಡಲಾರಂಭಿಸಿದರು. ನಮ್ಮ ಕೈಗಳಲ್ಲಿದ್ದ ಬ್ಯಾಗ್ಗಳನ್ನು ಕಿತ್ತುಕೊಂಡು ಯಂಹಾ ಪೇ ದೇಖನೆಕೆ ಲಿಯೆ 5-6 ಜಗಹ ಹೇ, ಆಪಕೊ ಹಮ್ ಸಬ್ ದಿಖಾದೆಂಗೆ ಚಲಿಯೆ ಎಂದು ಒತ್ತಡ ಹೇರಲು ಆರಂಭಿಸಿದರು. ನಾವು ಅವರಿಂದ ತಪ್ಪಿಸಿಕೊಳ್ಳಬೇಕೆಂದು, ಒಂದೆರಡು ಕಿ.ಮಿ. ಕಾಲ್ನಡಿಗೆಯಲ್ಲಿಯೆ ಕ್ರಮಿಸಿದೆವು. ಆದರೂ ಅವನು ನಮ್ಮ ಬೆನ್ನು ಬಿಡದೆ ಹಿಂದೆಯೇ ಬಿದ್ದಿದ್ದ. ಮತ್ತು ಹಿಂದಿಯಲ್ಲಿ ಅಸಹ್ಯವಾಗಿ ಬೈಯಲಾರಂಬಿಸಿದ, ಹೇಗಾದರೂ ಮಾಡಿ ಅವನಿಂದ ತಪ್ಪಿಸಿಕೊಳ್ಳಬೇಕೆಂದು ರಿಕ್ಷಾ ಹಿಡಿದು ತಾಜ್ಮಹಲ್ ಕಡೆಗೆ ಹೊರೆಟೆವು. ಅಬ್ಬಾ! ಅಂತೂ ಶನೇಶ್ವರನ ಕಾಟ ತಪ್ಪಿತು ಎನ್ನುವಷ್ಟರ ಹೊತ್ತಿಗೆ 'ಹೋದೆ ಗವಾಕ್ಷಿ ಎಂದರೆ ಬಂದೆ ಕಾಮಾಕ್ಷಿ' ಎನ್ನುವ ಮಾತಿನಂತೆ ರಿಕ್ಷಾದವನು ಒಂದು ಮನೆಯ ಮುಂದೆ ನಿಲ್ಲಿಸಿ, ನಿಮ್ಮ ಬ್ಯಾಗ್ಗಳನ್ನು ಇಲ್ಲೆ ಇಡಿ ಎಂದು ಧಿಮಾಕಿನ ಧಾಟಿಯಲ್ಲಿ ಹೇಳಿದ. ಆದರೆ ನಾವು ರಾತ್ರಿ ಹೊಗಬೇಕಾದುದ್ದರಿಂದ ನಿರಾಕರಿಸಿದೆವು. ಆದರೆ ಅವನು ಹಿಟ್ಲರ್ನಂತೆ ಸವರ್ಾಧಿಕಾರ ಮಾಡಲಾರಂಭಿಸಿದ. ನಾವೂ ಸಹ ಖಡಾಖಂಡಿತವಾಗಿ ತಿರಸ್ಕರಿಸಿದ್ದರಿಂದ ನಮ್ಮನ್ನು ಅರ್ಧ ದಾರಿಯಲ್ಲೆ ಇಳಿಸಿ ಅಲ್ಲಿಂದ ಅವನು ಪಾರಾದ. ಆದರೆ ಧರ್ಮಸಂಕಟಕ್ಕೆ ನಾವು ಸಿಕ್ಕಿಬಿದ್ದೆವು. ನಂತರ ಆಟೋ ಹಿಡಿದು ತಲುಪಬೇಕಾದ ಸ್ಥಳ ಅನತಿ ದೂರದಲ್ಲಿರುವುದನ್ನು ನೋಡಿ ನಿಟ್ಟುಸಿರು ಬಿಟ್ಟೆವು.
ಮುಂದೆ ತಾಜ್ಮಹಲ್ ಕಡೆಗೆ ಹೋಗುತ್ತಿರುವಾಗಲೆ ಮತ್ತೊಬ್ಬ ಮಧ್ಯವತರ್ಿ ಬಂದು ಲಗೇಜ್ ಇಲ್ಲೆ ಇಡಿ, ಒಳಗೆ ಪ್ರಮುಖ ಸ್ಥಳಗಳನ್ನು ತೊರಿಸುತ್ತೇನೆಂದು ಹೇಳಿದ, ಅಲ್ಲೇ ಪಕ್ಕದಲ್ಲಿ ಪ್ರೇಕ್ಷಕರಿಗಾಗಿ ಸಕರ್ಾರದಿಂದ ಲಾಕರ್ ವ್ಯವಸ್ಥೆ ಮಾಡಲಾಗಿದೆ. ಆದರೆ ಅವನು ನಮಗೆ ಆ ಕಡೆಗೆ ಹೋಗಲು ಬಿಡುತ್ತಿಲ್ಲ. ಈ ಸಮಸ್ಯೆಯಿಂದ ಯಾವ ರೀತಿ ಪಾರಾಗಬೇಕೆಂದು ಯೋಚಿಸುತ್ತಿರುವಾಗಲೆ ಅಲ್ಲೊಬ್ಬ ಪೊಲೀಸ್ ಅಧಿಕಾರಿ ಕಾಣಿಸಿದ ಇವರಿಗೆಲ್ಲಾ ಖಾಕಿಯೇ ಸರಿಯಾದ ಮದ್ದು ಎಂದು ಪೊಲೀಸ್ ಕಡೆಗೆ ಹೋಗಿ ಎಲ್ಲಾ ವಿವರಿಸಿದೆ. ವಿಪಯರ್ಾಸವೆಂದರೆ ಅವನು ಕೂಡ ಮಧ್ಯವತರ್ಿಯನ್ನು ಬೆಂಬಲಿಸತೊಡಗಿದ ಕೊನೆಗೆ ಚಕಾರವೆತ್ತದೆ ಅಲ್ಲಿಂದ ಲಾಕರ್ ಕಡೆಗೆ ಧಾವಿಸಿದೆ. ಅಂತು ಇಂತು ಹೇಗೋ ಮಾಡಿ ಅಲ್ಲಿಂದ ಪಾರಾದೆವು.
ನೀವೆ ಯೋಚಿಸಿ... ದಿನಕ್ಕೆ ನೂರಾರು ಜನ ಬಂದು ಹೋಗುವ ಇಂತಹ ಪ್ರಮುಖ ಐತಿಹಾಸಿಕ ಸ್ಥಳಗಳಲ್ಲಿ ಮಧ್ಯವತರ್ಿಗಳ ಹಾವಳಿ ಇಷ್ಟೊಂದು ರಾಜಾರೋಷವಾಗಿ ನಡೆಯುತ್ತಿರುವಾಗ, ಉತ್ತರ ಪ್ರದೇಶ ಸಕರ್ಾರವೇನು ಮಲಗಿದೆಯೇ? ಒಂದು ವೇಳೆ ಇಂಥ ಕೃತ್ಯಗಳಿಗೆ ಸೊಪ್ಪು ಹಾಕುವ ಕೆಲಸ ಹೀಗೆ ಮುಂದುವರಿದರೆ ಐತಿಹಾಸಿಕ ಸ್ಥಳಗಳು ಮಧ್ಯವತರ್ಿಗಳ ತಾಣಗಳಾಗಬಹುದು, ಎಚ್ಚರಿಕೆ.
ಆತೀಶ ಬಿ ಕನ್ನಾಳೆ

No comments:

Post a Comment