Thursday, November 24, 2011

ಟ್ರಾಫಿಕ್ ಪ್ರಾಬ್ಲಂ

ನೀರಿಗಿಳಿಯದ ಹೊರತು ಆಳ ಅರ್ಥವಾದೀತೆ..?
ಯಾವುದೇ ಮೆಟ್ರೋಪಾಲಿಟನ್ ಹಾಗೂ ಕಾಸ್ಮಾಸಿಟಿಗಳಲ್ಲಿ `ಟ್ರಾಫಿಕ್' ಕಾಮನ್ ಫಿನಾಮಿನಾ, ಅಂಥದ್ರಲ್ಲಿ ಇದನ್ನು ಒಂದು ಸಮಸ್ಯೆ ಎಂದು ಹೇಳಲಾದೀತೆ..?
ಖಂಡಿತ ಎಂದು ಕೆಲವರ ವಾದ. ಇನ್ನು ಕೆಲವರು ಇದು ಸಾಮಾನ್ಯ ವಿಷಯ ಎಂದು ನುಂಗುತ್ತಾರೆ. ಮತ್ತೆ ಕೆಲವರು ಲಾವಾ(ಸಿಟ್ಟು) ಹೊರಹಾಕುತ್ತಾರೆ. ಬೆಂಗಳೂರಿನ ಟ್ರಾಫಿಕ್ ಕುರಿತು ಆಲೋಚಿಸುತ್ತಾ ಹೋದರೆ, ಇದು ನಮ್ಮ ರಾಷ್ಟ್ರದ ಜನಸಂಖ್ಯೆಯಷ್ಟೇ ವಿರಳ. ಹುಟ್ಟು ಬೆಳವಣಿಗೆ ಎರಡೂ ಕಾಮನ್... ಹುಟ್ಟಿಸಿದ ದೇವರು ಹುಲ್ಲಂತೂ ಮೇಯಿಸೋದಿಲ್ಲ ಎಂಬ ಖಾತ್ರಿ ನಮ್ಮೀ ಜನರಿಗೆ(ಸಮಜಾಯಿಷಿ ಎಂದರೂ ತಪ್ಪಾಗದು)!
ಯಾವುದೇ ಒಂದು ವಿಷಯ, ಅದನ್ನು ಸಮಸ್ಯೆ ಎಂದು ಕರೆಯಲಾಗದು. ಹಾಗೆಂದು ಕರೆಯಬೇಕಾದರೆ ಅದರಿಂದ ಕನಿಷ್ಠ ಪಕ್ಷ ಕೆಲವರಿಗೆ ತೊಂದರೆಯಾಗಬೇಕು. ಅಂದ್ರೆ ಟ್ರಾಫಿಕ್ ಎಂದಿಗೂ ಸಮಸ್ಯೆಯಲ್ಲ. ಅದು ನಾಲ್ಕು ಜನರಿಗೆ ತೊಂದರೆಯಾದಾಗ ಮಾತ್ರ ಸಮಸ್ಯೆಯ ರೂಪ ತಳೆಯುತ್ತದೆ. ಇದನ್ನು ಇನ್ನೊಂದು ಅರ್ಥದಲ್ಲಿ ಟ್ರಾಫಿಕ್ ನಿಯಮ ಪಾಲನೆಯಲ್ಲಿನ ವೈಫಲ್ಯ ಎಂದು ಕಡ್ಡಿ ಮುರಿದ ಹಾಗೆ ಹೇಳಬಹುದಲ್ಲವೆ?
ಮೊನ್ನೆ ರಾಜ್ಯದ ರಾಜಧಾನಿಯ ಪ್ರತಿಷ್ಠಿತ ರಿಚ್ಮಂಡ್ ಟೌನ್ ಹತ್ತಿರದ ರಸ್ತೆಯಲ್ಲಿ ಒಬ್ಬ ಟ್ರಾಫಿಕ್ ರೂಲ್ಸ್ ಮುರಿದು ಹೋಗುತ್ತಿದ್ದ, ಬಹುಶಃ ಅವನು ಬೆಂಗಳೂರಿಗೆ ಹೊಸಬ ಎನಿಸುತ್ತಿತ್ತು. ಅಷ್ಟರಲ್ಲೇ ಅದೆಲ್ಲಿಂದಲೋ ಟ್ರಾಫಿಕ್ ಪೊಲೀಸ್ ನುಸುಳಿಕೊಂಡು ಬಂದುದ್ದೇ ಹಣ ವಸೂಲು ಮಾಡಿದ. ಅದು ನಿಯಮದಡಿ ಇದ್ದಿದ್ರೆ, ಯಾವ ಸಮಸ್ಯೆನೂ ಇರ್ತಿರ್ಲಿಲ್ಲ. ಆದರೆ, ಅವನು ಜೋಬಲ್ಲಿರೋ ದುಡ್ಡೆಲ್ಲ ಕಿತ್ತುಕೊಂಡು ಅಲ್ಲಿಂದ ಅವನನ್ನು ಓಡಿಸಿದ ಪಾಪ ಆತ ಹಿಂದಿರುಗಿ ನೋಡದೆ ಪರಾರಿ ಆದ.
ಈ ಹಿಂದೆ ಹೇಳಿರುವಂತೆ ಒಬ್ಬ ವ್ಯಕ್ತಿಗೆ ಯಾವ ವಿಷಯಗಳ ಕುರಿತು ತೊಂದರೆಗಳಾಗುವುದಿಲ್ಲವೋ ಅಲ್ಲಿಯವರೆಗೂ ಅದು ಅವರ ದೃಷ್ಟಿಯಲ್ಲಿ ತೊಂದರೆಯಾಗಿ ಕಾಣಿಸುವುದಿಲ್ಲ. ಮೊನ್ನೆ ಅಂದ್ರೆ ಬರೋಬ್ಬರಿ ಒಂದು ತಿಂಗಳಾಗಿರಬಹುದು. ನೆರೆ ರಾಜ್ಯದ ಮುಖ್ಯಮಂತ್ರಿ ಜಯಲಲಿತಾ ಬೆಂಗಳೂರಿನ `ಪರಪ್ಪನ ಅಗ್ರಹಾರ' ಜೈಲಿಗೆ ವಿಚಾರಣೆ ಹಿನ್ನೆಲೆಯಲ್ಲಿ ಭೇಟಿ ನೀಡಿದ್ದರು. ಆಗ ಇಡೀ ಹೊಸೂರು ರಸ್ತೆಯಲ್ಲೆಲ್ಲಾ ನೀರವ ಮೌನ. ಆಕಡೆ ಜನ ಈಕಡೆ ಹೋಗುವಂತಿಲ್ಲ, ಈಕಡೆಯಿಂದ ಆಕಡೆಗೆ ಹೋಗುವಂತಿಲ್ಲ. ಯಡಿಯೂರಪ್ಪ ಅವರನ್ನು ಬಂಧಿಸಿದಾಗಲೂ ಅದೇ ಕಿರಿಕಿರಿ. ಅಷ್ಟೇ ಯಾಕೆ ನಮ್ಮ ಶಾಸಕರು, ಸಚಿವರು, ಪೊಲೀಸ್ ಅಧಿಕಾರಿಗಳು ಯಾರೇ ಹೋಗಬೇಕಾದರೂ ರಸ್ತೆಯಲ್ಲಿ ಯಾರೂ ಓಡಾಡುವಂತಿಲ್ಲ. ಅವರ ವಾಹನ ಮುವ್ ಆಗುವವರೆಗೂ 144 ಜಾರಿ! ಥರ ಫಿಲ್ ಆಗುತ್ತೆ. ಪರಿಸ್ಥಿತಿ ಹೀಗಿರುವಾಗ ನಮ್ಮ ರಾಜಕೀಯ ವ್ಯಕ್ತಿಗಳಿಗೆ ಟ್ರಾಫಿಕ್ ಒಂದು ಸಮಸ್ಯೆಯಾಗಿ ಕಾಣಲು ಸಾಧ್ಯವೇ? ಅವರೂ ಒಂದು ವೇಳೆ ನಿಮ್ಹ್ಯಾನ್ಸ್, ಫೋರಂ, ಬನಶಂಕರಿ ಮತ್ತಿತರ ರೋಡ್ಗಳಲ್ಲಿ ಗಂಟೆಗಟ್ಟೆಲೆ ಸಾಲುಗಟ್ಟಿ ನಿಲ್ಲುವುದಾದರೆ ಟ್ರಾಫಿಕ್ ಪ್ರಾಬ್ಲಂ ಅಂದ್ರೆ ಏನು, ಜನಸಮಾನ್ಯರ ನೋವೇನು ಎಂದೆಲ್ಲಾ ಅರ್ಥವಾಗುತಿತ್ತು. ಆದರೆ, ನಮ್ಮ ರಾಷ್ಟ್ರದ ದೌಭರ್ಾಗ್ಯವೆಂದರೆ, ಒಬ್ಬ ವ್ಯಕ್ತಿ ನೋಟು ನೀಡಿ, ಓಟು ಗಳಿಸಿ ಅಧಿಕಾರದ ಚುಕ್ಕಾಣಿ ಹಿಡಿದ ಮೇಲೆ ಅವರು ಹಿಟ್ಲರ್ ಮಾದರಿಯಲ್ಲಿ ವತರ್ಿಸುತ್ತಾರೆ. ಅವರು ಜನಸಾಮಾನ್ಯರು ಅಡ್ಡಾಡುವಂತೆ ಅಡ್ಡಾಡುವ ಹಾಗಿಲ್ಲ. ತಿರುಗಾಡಲು ಗಾಡಿ, ಅದಕ್ಕೆ ಯಾವುದೇ ಟ್ರಾಫಿಕ್ ನಿರ್ಬಂಧಗಳಿಲ್ಲ. ಅದೇನೊ ಅಂತಾರಲ್ಲ `ಜಿಸ್ಕಿ ಲಾಠಿ ಉಸೀಕಿ ಭೈಂಸ್' ಹೀಗಿದೆ ನಮ್ಮ ಟ್ರಾಫಿಕ್ ನಿಯಮ. ಇವತ್ತು ಜನಸಾಮಾನ್ಯರಿಗೆ ಇರುವ ಕಾನೂನು ಟ್ರಾಫಿಕ್ ನಿಯಮಗಳು ಪೊಲೀಸರಿಗೆ ಹಾಗೂ ಪ್ರಭಾವಿ ವ್ಯಕ್ತಿಗಳಿಗೆ ಅನ್ವಯಿಸುವುದಿಲ್ಲ!
ಹಲವು ಬಾರಿ ಗೂಟದ ಕಾರುಗಳು ಅತ್ತಿಂದಿತ್ತ ಚಲಿಸುತ್ತಿರುತ್ತವೆ. ಅವರೇನೋ ರೊಂಯ್.... ಎಂದು ಹೋಗುತ್ತಾರೆ. ಆದರೆ, ಕ್ಷಣ ತಡವಾದರೆ ಜೀವ ಜವರಾಯನ ಪಾಲಾಗುತ್ತೆ ಎಂದು ಜೀವವನ್ನು ಕೈಯಲ್ಲಿ ಹಿಡಿದುಕೊಂಡು ಅಂಬ್ಯೂಲೆನ್ಸ್ನಲ್ಲಿ ಚಿಕಿತ್ಸೆಗಾಗಿ ಹೋಗುವ ಜನರ ಬಗ್ಗೆ ಯಾರು ಯೋಚಿಸುತ್ತಾರೆ. ಒಂದು ವೇಳೆ ವ್ಯಕ್ತಿ ರಸ್ತೆ ಮಧ್ಯೆ ಕೊನೆಯುಸಿರೆಳೆದರೆ ಅಂಬ್ಯೂಲೆನ್ಸ್ನಲ್ಲಿರುವವರಿಗೆ ಕುತ್ತು. ಸಂಬಂಧಿಕರ ಆಕ್ರೋಶಕ್ಕೆ ಅವರೇ ತಾನೆ ಬಕ್ರಾ. ಇದೆಲ್ಲಾ ನಮ್ಮ ರಾಜಕೀಯ ವ್ಯಕ್ತಿಗಳಿಗೆ ಯಾಕೆ ತಿಳಿಯುತ್ತಿಲ್ಲ.
ಅವರು ಇಷ್ಟೊಂದು ಸ್ವಾಥರ್ಿಗಳಾದರೂ ಯಾಕಾದರು? ಇದಕ್ಕೆಲ್ಲ ಪರಿಹಾರವೇ ಇಲ್ವಾ? ಬಹುಶಃ ಇದಕ್ಕೆಲ್ಲಾ ಉತ್ತರ, ನಿರುತ್ತರ. ಈ ಕುರಿತು ದನಿ ಎತ್ತುವ ಹಾಗಿಲ್ಲ, ಒಂದು ವೇಳೆ ಎತ್ತಿದರೂ ಶಮರ್ಿಳಾಳಂತೆ ಉಪವಾಸವೇ ಇದ್ದು, ಹಣ್ಣುಗಾಯಿ ನೀರುಗಾಯಿ ಆಗಬೇಕಾಗುತ್ತದೆ. ಅಣ್ಣಾ ಹಜಾರೆ ಹಾಗೆ ಎಲ್ಲರಿಗೂ ಜಯ ದೊರಕಲ್ಲ. ಬಾಬಾ ರಾಮದೇವ್ ಹಾಗೇ ಪ್ರಚಾರವೂ ಸಿಗಲ್ಲ. ಇದೆಲ್ಲಾ ಆಲೋಚಿಸುವಾಗ ನಾವು ಸ್ವತಂತ್ರ್ಯರಾಗಿದ್ದೇವಾ ಅನ್ನುವ ಅನುಮಾನ ಆಗಂತುಕವಾಗಿ ಉದ್ಭವಿಸುತ್ತದೆ.
ಒಟ್ಟಲ್ಲಿ ನಮ್ಮ ರಾಷ್ಟ್ರದ ಪ್ರಜ್ಞಾವಂತ ಪ್ರಜೆಗಳೇ ನೀವೇ ಹೇಳಿ, ಇದಕ್ಕೆ ಮುಕ್ತಿನೇ ಇಲ್ವಾ? ಮತ್ತು ಟ್ರಾಫಿಕ್ ಎನ್ನುವ ಪೆಡಂಭೂತ ಜನಸಾಮಾನ್ಯರ ಪಾಲಿಗೆ ಮಾತ್ರ ಸಮಸ್ಯೆ. ಅದು ವಿಐಪಿಗಳಿಗೆ ಅನ್ವಯಿಸುವುದಿಲ್ಲ. ಹೀಗಾದಾಗ ಅದು ಬಗೆಹರಿಸುವ ಪ್ರಯತ್ನಕ್ಕೆ ಯಾರೂ ಇಳಿಯುವುದಿಲ್ಲ..
ನೀರಲ್ಲಿ ಇಳೀದಾಗ ತಾನೆ ಅದರ ಆಳ ಅರ್ಥ, ಉಸಿರುಗಟ್ಟುವ ಅನುಭವವಾಗೋದು.

ಪರಿಹಾರಗಳು:
ಟ್ರಾಫಿಕ್ ಸಮಸ್ಯೆಯೆನೋ ಓಕೆ ಆದರೆ, ಬೆಂಗಳೂರಿಗರಿಗೆ ಇದರಿಂದ ಮುಕ್ತಿಯೇ ಇಲ್ವಾ? ಇದರ ಸಲ್ಯೂಷನ್ ಆದ್ರೂ ಏನು? ಖಂಡಿತ ಇದೆ. ಆದರೆ, ಸಕರ್ಾರ ಹಾಗೂ ಆಡಳಿತಾರೂಢರು ಮನಸು ಮಾಡಬೇಕಷ್ಟೆ.
ಸಲಹೆಗಳು:
ಮರಗಳ ಮಾರಣ ಹೋಮವಾಗದಂತೆ ರಸ್ತೆ ಅಗಲೀಕರಣ ಹಾಗೂ ಅಂಡರ್ಗ್ರೌಂಡ್ಗಳ ನಿಮರ್ಾಣ.
ಜೌಟರ್ ರಿಂಗ್ರೋಡ್ ಮಾಡುವುದು. ಈಗಾಗಲೇ ಇರುವ ವತರ್ುಲ ರಸ್ತೆಯನ್ನು ಸಮರ್ಪಕವಾಗಿ ಬಳಸುವುದು.
ಸರಕು ತುಂಬಿದ ಭಾರಿ ವಾಹನಗಳು ಸಿಟಿ ಹೊರಗಡೆಯಿಂದ ಚಲಿಸಬೇಕು.
ಜೆಸಿ ರೋಡ್ನಿಂದ ಕಾಪರ್ೊರೇಷನ್ವರೆಗೆ ಫ್ಲೈಓವರ್ ನಿಮರ್ಿಸಬೇಕು.
ದ್ವಿಚಕ್ರ ಹಾಗೂ ತ್ರಿಚಕ್ರ ವಾಹನಗಳಿಗೆ ಪ್ರತ್ಯೇಕ ರಸ್ತೆ ನಿಮರ್ಾಣ ಹಾಗೂ ಕಟ್ಟುನಿಟ್ಟಾಗಿ ಬಳಸುವಂತೆ ಸೂಚನೆ ನೀಡುವುದು.
ಟ್ರಾಫಿಕ್ ನಿಯಮ ಪಾಲಿಸುವುದು.
ಮಾನೋ ರೈಲ್ ಆರಂಭಿಸುವುದು.
ಚರಂಡಿ ವ್ಯವಸ್ಥೆ ಹಾಗೂ ರಸ್ತೆಗಳ ಸುಧಾರಣೆ.
ಸಲ್ಯೂಷನ್ ಸಾರ್ವಜನಿಕರ ಮಾತಲ್ಲಿ...
ನಮ್ಮ ರಾಜಕಾರಣಿಗಳಲ್ಲಿ ದೂರ ದೃಷ್ಟಿಯ ಕೊರತೆಯಿಂದಾಗಿಯೇ ಟ್ರಾಫಿಕ್ ತೊಂದರೆ ಉಲ್ಭಣಿಸಿದೆ. ಕಾರಣ, ಈ ಹಿಂದೆಯೇ ಮೆಟ್ರೋ ಪ್ರಾರಂಭಿಸಬೇಕಿತ್ತು. ಆದರೆ, ಅವರಿಗೆ ಈಗ ಕಣ್ಣು ತೆರೆದಿದ್ದರಿಂದ ಇದೆಲ್ಲಾ ತೊಂದರೆಯಾಗುತ್ತಿದೆ. ಜತೆಗೆ ದಿನದಿಂದ ದಿನಕ್ಕೆ ಬೆಂಗಳೂರಂಥ ಸಿಟಿಗೆ ಸಾವಿರಾರು ಜನ ಉದ್ಯೋಗ ಅರಸಿ ವಲಸೆ ಬರುತ್ತಿದ್ದು, ಅವರು ತಮ್ಮ ಸ್ಥಳಗಳಲ್ಲಿಯೇ ಉದ್ಯೋಗ ಸಿಗುವಂತೆ ಮಾಡಿದ್ದಲ್ಲಿ ಸ್ವಲ್ಪ ಮಟ್ಟಗಾದರೂ ಜನಸಂಖ್ಯೆಯನ್ನು ತಗ್ಗಿಸಬಹುದು.
(ಹೆಸರು ಬೇಡ.)

ಇಡೀ ಬೆಂಗಳೂರಿನಲ್ಲಿ ಮೆಟ್ರೋ ಕಾಮಗಾರಿಯನ್ನು ಪ್ರಾರಂಭಿಸುವುದಕ್ಕಿಂತ ಯಾವುದಾದರೂ ಒಂದು ಕಡೆ ಕಾಮಗಾರಿ ಮುಗಿಸಿ, ಬಳಿಕ ಇನ್ನೊಂದು ಕಡೆ ಕಾಮಗಾರಿ ಪ್ರಾರಂಭಿಸಬೇಕಿತ್ತು. ಆಗ ಟ್ರಾಫಿಕ್ ಅನ್ನು ನಿಯಂತ್ರಿಸಬಹುದಾಗಿತ್ತು.
ಸುನಿಲ್ (ಗ್ರಂಥಪಾಲಕರು, ಆಕ್ಸ್ಫಡರ್್ ಕಾಲೇಜ್)

ಇಂದು ಬೆಂಗಳೂರಿನ ಪ್ರತಿ ಮನೆಯಲ್ಲೂ ತಲೆಗೊಂದರಂತೆ ಬೈಕ್ಗಳಿದ್ದು, ಇವುಗಳನ್ನು ಕಡಿಮೆಗೊಳಿಸಬೇಕು. ಇದು ಎಲ್ಲ ಕಡೆ ಸಮರ್ಪಕ ಬಿಎಂಟಿಸಿ ಬಸ್ ಸೌಲಭ್ಯ ದೊರಕಿಸಿಕೊಟ್ಟಾಗ ಮಾತ್ರ ಸಾಧ್ಯವಾಗಬಲ್ಲದು. ಇದಕ್ಕಾಗಿ ಪ್ರತಿ ನಿಮಿಷಕ್ಕೆ ಒಂದರಂತೆ ಬಸ್ ಸೌಲಭ್ಯವನ್ನು ಒದಗಿಸಬೇಕು. ಆಗ ಜನ ತಾವಾಗಿಯೇ ಬಸ್ ಸೌಲಭ್ಯ ಪಡೆದುಕೊಳ್ಳುತ್ತಾರೆ.
ಯೋಗೇಶ್ (ಸಾಫ್ಟ್ವೇರ್)

ಮಳೆ ಶುರುವಾದರೆ ಟ್ರಾಫಿಕ್ ಜಾಮ್ ಸಾಮಾನ್ಯ. ಹೀಗಾಗಿ, ಮಳೆಗಾಲಕ್ಕೂ ಮುನ್ನ ಚರಂಡಿ ಶುಚೀಕರಣಗೊಳಿಸುವುದು ಹಾಗೂ ಮಳೆಯ ನೀರು ರಸ್ತೆ ಮೇಲೆ ಶೇಖರಣೆಗೊಳ್ಳದಂತೆ ಪಯರ್ಾಯ ವ್ಯವಸ್ಥೆ ಮಾಡುವುದು.
ಸತ್ಯಶಂಕರ್ (ಡಿಸೈನರ್)
ಆತೀಶ್ ಬಿ. ಕನ್ನಾಳೆ