Saturday, November 27, 2010

ಹಾಡು ಹಗಲೆ ಕನ್ನಡದ ಕಗ್ಗೊಲೆ.......!
ಅನ್ಯಭಾಷೆಯ ಒಡೆತನಕ್ಕೆ ಸಿಲುಕಿ ಕನ್ನಡದ ಕಂಪು ಕೊಳೆಯುತ್ತಿರುವುದು ಈಗ ಹೊಸತೇನಲ್ಲ. ಸಾವಿರಾರು ವರ್ಷಗಳ ಇತಿಹಾಸವನ್ನು ಹೊಂದಿರುವ ಕನ್ನಡ ಭಾಷೆ ಹಲವು ಎಡರು-ತೊಡರುಗಳನ್ನು ಎದುರಿಸುತ್ತ ಬಂದಿದೆ. ಇಂಥ ಸವಾಲುಗಳ ಮಧ್ಯೆಯು ಸಹ ಈ ಭಾಷೆ ಬೆಳೆಯುತ್ತಿರುವುದು ಸೋಜಿಗ ಎನಿಸಿದರೂ ಅದು ಈ ಭಾಷೆಯ ಹಿರಿಮೆಯನ್ನು ಸೂಚಿಸುತ್ತದೆ. ಇದಕ್ಕೆ ಅಮೆರಿಕೆಯಲ್ಲಿ ನಡೆದ 'ಅಕ್ಕಾ ಸಮ್ಮೇಳನ' ಸಾಕ್ಷಿ.
ಕನ್ನಡದ ಉಳಿವಿಗಾಗಿ ನೇಪಥ್ಯಕ್ಕೆ ಸರಿದ ಅನೇಕ ಕನ್ನಡ ಅಭಿಮಾನಿಗಳುಂಟು. 'ಕನ್ನಡವೇ ಸತ್ಯ, ಕನ್ನಡವೇ ನಿತ್ಯ' ಎಂಬ ಮಾತನ್ನೆ ಮೂಲಮಂತ್ರವಾಗಿ ಹಿಡಿದು ಜೀವನವೀಡಿ ದುಡಿದ ದ.ರಾ.ಬೇದ್ರೆ, ರಾಷ್ಟ್ರಕವಿ ಕುವೆಂಪು, ಪತ್ರಕರ್ತ ಪಾಟೀಲ್ ಪುಟ್ಟಪ್ಪ ಹೀಗೆ ಹಲವರು. ಅಷ್ಟೇ ಯಾಕೆ ಕನ್ನಡ ನಾಡಿನ ಪತಾಕೆಯನ್ನು ಹಾರಿಸಿದ ವರನಟ ಡಾ. ರಾಜ್ಕುಮಾರ್ ಹೀಗೆ ಹಲವರು ತಮ್ಮ ಜೀವನವನ್ನು ಕನ್ನಡಕ್ಕಾಗಿ ಸಮಪರ್ಿಸಿದ್ದಾರೆ. ಆದರೆ ಎಂಥಾ ವಿಪಯರ್ಾಸವೆಂದರೆ, ಇಂದು ಆಗಂತುಕವಾಗಿ ಆಗಮಿಸುತ್ತಿರುವ ಅನೇಕ ಮಾಧ್ಯಮಗಳು ಕನ್ನಡವನ್ನು ವಿಭ್ರಂಶಗೊಳಿಸುತ್ತಿರುವುದು ಜಗತ್ಜಾಹೀರಾದ ವಿಷಯ. ಇಂಥ ಮಾಧ್ಯಮಗಳನ್ನು ತರಾಟೆಗೆ ತೆಗೆದುಕೊಳ್ಳುವ ಬದಲು ನಮ್ಮ ಕನ್ನಡಿಗರೆ ಅವುಗಳಿಗೆ ಪುಷ್ಠಿ ನೀಡಿ ಬೆಳೆಸುತ್ತಿರುವುದನ್ನು ಚೋದ್ಯವೇ ಸರಿ.
ಕನ್ನಡ ಪರ ಸಂಘಟನೆಗಳು ನೀಡಿರುವ 'ಬಾರಿಸು ಕನ್ನಡ ಡಿಂಡಿಮವ', ಸಿರಿಗನ್ನಡಂ ಗೆಲ್ಗೆ, ಸಿರಿಗನ್ನಡಂ ಬಾಳ್ಗೆ', ಎಂಬ ನುಡಿಗಳು ಕಮ್ಮಿ ಇಲ್ಲ. 'ಕನ್ನಡಕ್ಕಾಗಿ ಕೈ ಎತ್ತು ನಿನ್ನ ಕೈ ಕಲ್ಪವೃರ್ಷವಾಗುವುದು' ಎಂಬ ಕವಿವಾಣಿ ಸಹ ಇಂದು ಕಣ್ಮೆರೆಯಾಗುತ್ತಿದೆ. ಇದಕ್ಕೆ ಕಾರಣಗಳು ಹಲವಾರು ಆದರೆ ಮೂಲ ಮಾತ್ರ ಒಂದೇ! ಅದು ನಮ್ಮ ಕನ್ನಡಿಗರಲ್ಲಿನ ಭಾಷಾಭಿಮಾನದ ಕೊರತೆ. ನೆರೆ ರಾಜ್ಯ ತಮಿಳುನಾಡಿಗೆ ಹೋದರೆ ಅವರ ಸಂವಹನ ಭಾಷೆ ಒಂದೇ ಅದು ತಮಿಳು ಅವರಿಗೆ ಬೇರೆ ಭಾಷೆ ಬಂದರೂ ಮಾತಾಡುವುದಿಲ್ಲ. ಆಟೋ ಚಾಲಕನಿಂದ ಹಿಡಿದ ಪ್ರತಿಯೊಬ್ಬರು ತಮಿಳು ಭಾಷೆಯಲ್ಲಿಯೇ ಸಂವಹನ ನಡೆಸುತ್ತಾರೆ. ಇದು ಅವರು ಮಾತೃ ಭಾಷೆಗೆ ನೀಡುವ ಗೌರವ. ಆದರೆ ನಾವು ಯಾವ ಭಾಷೆಯವರು ಎದುರು ಬಂದು ನಿಂತರೆ ಅವರ ಭಾಷೆಯನ್ನೇ ನಮ್ಮ ಭಾಷೆಯಾಗಿಸಿಕೊಳ್ಳುತ್ತೇವೆ ಅಂತ 'ದತ್ತುಸ್ವಿಕಾರ'ದ ಮನೋಭಾವ ನಮ್ಮದು.
ಎಲ್ಲಾದರೂ ನಾನು ಕನ್ನಡದವನು ಎಂದು ಹೇಳಿಕೊಳ್ಳಲು ಮುಜುಗರ. ನಾನು ಕನ್ನಡಿಗ ಎಂದು ಎದೆತಟ್ಟಿ ಹೇಳುವ ಬದಲು ಮೋರೆ ಬಾಡಿಸಿಕೊಂಡು ನಾಚಿಕೆಯಿಂದ ತಲೆ ತಗ್ಗಿಸುವುದನ್ನು ನೋಡಿದರೆ ನಮ್ಮ ಭಾಷಾ ಅಭಿಮಾನ ಎಷ್ಟೇಂದು ವೇದ್ಯವಾಗುತ್ತದೆ.
ಇದೊಂದು ಮೂಲ ಕಾರಣವಾದರೆ, ಇನ್ನೊಂದು ಬಲವಾದ ಕಾರಣ ಮಾಧ್ಯಮಗಳ ಸ್ವೀಕೃತಿ. ಮುಂಜಾನೆ ಎದ್ದುದ್ದೆ ತಡ ಮೊಬೈಲ್ನಲ್ಲಿ ಎಫ್.ಎಮ್. ಅನ್ನು ಹಚ್ಚಿದರೆ ಸಾಕು ಕನ್ನಡದ ಕಗ್ಗೊಲೆಯನ್ನು ಕಿವಿಯಾರೆ ಕೇಳಬಹುದು. ಒಂದು ವೇಳೆ ಅಚ್ಚ ಕನ್ನಡದಲ್ಲಿ ಮಾತನಾಡುವ ಕನ್ನಡ ಅಭಿಮಾನಿ ಏನಾದರೂ ಅದನ್ನು ಕೇಳಿದರೆ ಸ್ಥಳದಲ್ಲೆ ಎದೆ ಒಡೆದುಕೊಂಡು ಸಾಯುವುದರಲ್ಲಿ ಯಾವುದೇ ಸಂದೇಹವಿಲ್ಲ!. ಅಂಥ ಅಗ್ರಾಂಥಿಕ ಹಾಗೂ 'ಕಂಗ್ಲೀಷ್' ಪದಗಳನ್ನು ಬಳಸಲಾಗುತ್ತಿದೆ. ಇದು ಹಾಡು ಹಗಲೇ ಕನ್ನಡದ ಕೊಲೆ ಅಲ್ಲವೇ?
ರೇಡಿಯೋ ಆಯಾ ಪ್ರಾದೇಶಿಕ ಭಾಷೆಗಳಿಗೆ ಒತ್ತುಕೊಡುತ್ತದೆ ನಿಜ. ಆದರೆ ಪ್ರಾದೇಶಿಕ ಅಲ್ಲದೇ ಹಿಂದಿ, ಇಂಗ್ಲಿಷ್ ಹೀಗೆ ಹತ್ತು ಹಲವಾರು ಭಾಷೆಗಳನ್ನು ಬಳಸಿಕೊಂಡು ಎಫ್.ಎಮ್. ನಿರೂಪಕರು ಮಾತಾಡುತ್ತಿರುತ್ತಾರೆ. ಆ ಮಾತಿನಲ್ಲಿ ಯಾವುದೇ ಮೌಲ್ಯವಾಗಲಿ, ನೈತಿಕತೆಯಾಗಲಿ ಇರುವುದಿಲ್ಲ. ಕನ್ನಡದ ಪಾವಿತ್ರ್ಯತೆಯನ್ನು ಪರಮಾವಧಿಗೆ ತಂದು ನಿಲ್ಲಿಸುತ್ತಿರುವ ಇಂಥ ಮಾಧ್ಯಮಗಳ ಕಡೆಗೆ ಕನ್ನಡ ಪರ ಹೋರಾಟ ಸಂಘಗಳು ಗಮನ ಹರಿಸಬೇಕು. ಒಂದು ವೇಳೆ ಹೀಗೆಯೇ ಮುಂದುವರೆದರೆ ಬಹುಶಃ ಕನ್ನಡ ತನ್ನತನವನ್ನು ಕಳೆದುಕೊಳ್ಳಬೇಕಾಗುತ್ತದೆ.
ಒಂದು ವರದಿಯ ಪ್ರಕಾರ ಕನ್ನಡದ ರಕ್ಷಣೆಗಾಗಿಯೇ ಇರುವ ಸಂಘಗಳಿಗಿಂತ ಕನ್ನಡ ಪತ್ರಿಕೆಗಳು ಕನ್ನಡವನ್ನು ಉಳಿಸಿ ಬೆಳೆಸುವಲ್ಲಿ ಶೇ. 60% ರಷ್ಟು ಶ್ರಮಿಸುತ್ತಿವೆ ಎಂಬುದು ಹೆಗ್ಗಳಿಕೆ ವಿಚಾರ ಜೊತೆಗೆ ಕನ್ನಡ ಪರ ಸಂಘಟನೆಗಳು ಗಹನವಾಗಿ ಯೋಚಿಸಬೇಕಾದ ವಿಚಾರವೂ ಆಗಿದೆ. ಅದೇನೇ ಇರಲಿ ಈಗಲಾದರೋ ನಮ್ಮ ಮಾತೃ ಭಾಷೆಯ ಉಳಿವಿಗಾಗಿ ಕಂಕಣಬದ್ಧರಾಗಿ ದುಡಿಯೋಣ. ಆಗ ಮಾತ್ರ ಕನ್ನಡದ ಕಂಪು ಉಳಿಸಿಕೊಂಡು ಹೋಗಲು ಸಾಧ್ಯ

ಆತೀಶ್.ಬಿ.ಕನ್ನಾಳೆ


No comments:

Post a Comment