Wednesday, May 16, 2012

ಹೀಗೊಂದು ನಿಧರ್ಾರಕ್ಕೆ ಮುನ್ನ ಸ್ವಲ್ಪ ಯೋಚಿಸಿ...
ಯಾಕೆ ಮೂಕಾಯ್ತು ಮಾತಾಡದೇ ಪ್ರೇಮ??
ಮೊನ್ನೆ ಒಂದ್ ಘಟನೆ ನಡೀತು. ಅದ್ಯಾಕೋ ಗೊತ್ತಿಲ್ಲ. ಆವಾಗಿನಿಂದ ಏನಾದ್ರು ಬರೀಬೇಕು ಅಂತಾ ಹರಸಾಹಸ ಪಟ್ಟೆ ಆದ್ರೆ ಈಗ ಟೈಂ ಸಿಕ್ತು.
ಈ ಘಟನೆ ಘಟಿಸಿ ಬಹುಶಃ ಮೂರ್ನಾಲ್ಕು ದಿನ ಗತಿಸಿರಬಹುದು ಅನಿಸುತ್ತೆ. ನಾನು ಸುದ್ದಿಮನೆಯಲ್ಲಿ ಕುಳಿತು ಸುದ್ದಿ ಬರೆಯುವುದರಲ್ಲಿ ಬ್ಯುಸಿ ಆಗಿದ್ದೆ. ಅಷ್ಟರಲ್ಲೇ ಒಂದು ಕ್ರೈಂ ನ್ಯೂಸ್ ಬಂದು ಮೇಲ್ಗೆ ಥಟ್ ಅಂತಾ ಬಿತ್ತು. ಜಸ್ಟ್ ಓಪನ್ ಮಾಡ್ತಿನಿ, ಓರ್ವ ಯುವಕ ಇನ್ನೂ ಪ್ರೀತಿ ಮಾಡಲು ಯೋಗ್ಯವಲ್ಲದ ವಯಸದು. ಆಗಲೇ ಅವನು ಪ್ರೀತಿಯ ಎಲ್ಲಾ ಬೌಂಡರಿಗಳನ್ನು ಪಾರುಮಾಡಿಯಾಗಿತ್ತು. ಅವನು ಆ ಹುಡುಗಿಯನ್ನು ಅವನಿಗಿಂತ ಹೆಚ್ಚಾಗಿ ಪ್ರೀತಿಸಲಾರಂಭಿಸಿದ್ದ. ಅಪ್ಪಿತಪ್ಪಿ ಅವಳು ಅವನ ಫೋನ್ ಪಿಕ್ ಮಾಡ್ಲಿಲ್ಲ ಅಂದ್ರೆ ಮುಗೀತು, ಇಡೀ ಪ್ರಪಂಚವೇ ತಲೆ ಮೇಲೆ ಕುಸಿದು ಬಿದ್ದಂತೆ ವತರ್ಿಸುತ್ತಿದ್ದ. ಅಪ್ಪ ಅಮ್ಮ ಅಂತು ಲೆಕ್ಕಕ್ಕಿಲ್ಲ.
ಬೆಳಗ್ಗೆ ಏಳ್ಬೇಕು. ಫಸ್ಟ್ ಲವ್ಗೆ ಮುನ್ನುಡಿ ಬರೀಬೇಕು ಅಂದ್ರೆ ಮೆಸೆಜ್. ಆಮೇಲೆ ಬೆಳಗ್ಗೆಯ ಕಾರ್ಯಗಳಿಗೆ ಹಾಯ್ ಹಾಯ್ ಇಲ್ಲ ಅಂದ್ರೆ ನೋ ವಕರ್್ ನಥಿಂಗ್. ಎಲ್ಲಾ ಓಕೆನೇ ಇತ್ತು. ಮನೇಯವರು ಅವನ ಈ ವರ್ತನೆಗೆ ಬೇಸತ್ತೋ ಅಥವಾ ಮುದ್ದು ಮಗನನ್ನು ಕಳೆದುಕೊಳ್ಳುತ್ತೇವೆ ಎಂಬ ಭಯದಿದಂಲೋ ಗೊತ್ತಿಲ್ಲ. ಮ್ಯಾರೆಜ್ಗೆ ಗ್ರೀನ್ ಸಿಗ್ನಲ್ ನೀಡಿದ್ರು.
ಇದು ಮಜನು ಕಥೆ ಆದ್ರೆ ಲೈಲಾ ವ್ಯಥೆನೇ ಬೇರೆ. ಅವಳು ಕದ್ದುಮುಚ್ಚಿ ಇವನ್ ಜತೆ ಮಾತಾಡ್ತಾ ಇದ್ಳು. ದಿನವೆಲ್ಲಾ ಹರಟುತಿದ್ದಳು. ಅಂತು-ಇಂತು ಪ್ರೀತಿಗೆ ಒಂದ್ ವರ್ಷ ತುಂಬ್ತು. ಪ್ರೇಮದ ಬೇರು ಅದೆಷ್ಟು ಆಳವಾಗಿ ಹೋಗಿದ್ದವೆಂದ್ರೆ ನೀನ್ ಒಂದ್ ಕ್ಷಣ ಮಾತಾಡ್ಲಿಲ್ಲ ಅಂದ್ರೆ ಜೀವಾನೆ ನಿಂತು ಹೋಗುತ್ತೆ ಎನ್ನುವಷ್ಟರ ಮಟ್ಟಿಗೆ ಅವರು ಒಬ್ಬರನ್ನೊಬ್ಬಬರು ಪ್ರೀತಿಸತೊಡಗಿದ್ದರು.
ಅದೊಂದು ದಿನ ಹುಡುಗಿ ಅವರ ಅಪ್ಪಅಮ್ಮರ ಜತೆ ಜೌಟ್ ಆಫ್ ಸ್ಟೇಷನ್ ಹೋಗಬೇಕಾಗಿ ಬಂತು. ಅದು ಬೇರೆ ಅವನು ಅವಳ ಜತೆ ಸೆಲೆಬ್ರೆಟ್ ಮಾಡಬೇಕಾಗಿದ್ದ ಪ್ರಥಮ ಬತರ್್ಡೇ ಆಗಿತ್ತು. ಟೂರನ್ನು ಹೇಗಾದ್ರೂ ಮಾಡಿ ಕ್ಯಾನ್ಸಲ್ ಮಾಡಬೇಕೆನ್ನುತ್ತಿದ್ದಳು. ಆದರೆ ಅನಿವಾರ್ಯವಾಗಿ ಒಲ್ಲದ ಮನಸ್ಸಿನಿಂದ ಹೋಗಲೇಬೇಕಾಗಿತ್ತು. `ಮತ್ತೆ ಮರಳಿ ಬರೋದಕ್ಕೆ ನನಗೆ ಕನಿಷ್ಠ ಅಂದ್ರು ಏಳು ದಿನ ಬೇಕು. ಸಾರಿ ಕಣೊ ನಾನು ತುಂಬಾ ಪ್ರಯಾಸಪಟ್ಟೆ ಆದ್ರೆ ಅಮ್ಮನಿಗೆ ಕನ್ವಿನಿಯನ್ಸ ಮಾಡಲಾಗಲಿಲ್ಲ. ಕ್ಷಮಿಸು ಗೆಳೆಯ... ಪ್ರತಿ ಕ್ಷಣ ನಿನ್ನ ನೆನಪಲ್ಲೇ' ಎಂದು ಮೆಸೆಜ್ ಹಾಕಿದ್ಳು. ಅವನು ಕಾಳ್ ಕೂಡ ಮಾಡಿದ ಆದ್ರೆ ಆಕಡೆ ಅಪ್ಪ ಈಕಡೆ ಅಮ್ಮ ಮಾತಾಡೋದಾದ್ರೂ ಹೇಗೆ.. ಮತ್ತೆ ಒಂದು ಮೆಸೆಜ್ ಕಳಿಸಿದಳು. ಸಾರಿ ಕಣೊ ಅಪ್ಪ ಅಮ್ಮನ ನಡುವೆ ಇದ್ದಿನಿ ಮಾತಾಡೋ ಚಾನ್ಸೆ ಇಲ್ಲ.
ಕೊನೆಗೂ ಬಸ್ ಬಿಟ್ತು. ಹೋಗಬೇಕಾದ ಜಾಗಕ್ಕೆ ತಲುಪಿಯೂ ಆಯ್ತು. ಅತ್ತ ಅವನು ಇವಳ ಧ್ವನಿ ಕೇಳಲು ಬಕಪಕ್ಷಿಯಂತೆ ಕಾಯುತ್ತಿದ್ದಾನೆ. ಆದ್ರೆ ಫೋನ್ ಕನೆಕ್ಟ್ ಆಗ್ತಾ ಇಲ್ಲ. ಸುಂಆರು ನೂರಾರು ಬಾರಿ ಕಾಲ್ ಮಾಡಿದ ನೋ ರೆಸ್ಪೊನ್ಸ್....
ಇಲ್ಲಿ ಅವನ ಜೀವ ಹೋಗ್ತಾ ಇತ್ತು. ಸಿಟ್ಟಿಗೆ ಬಂದು ಮೊಬೈಲ್ ಎಸೆದ... ಆಗ ಅವನಿಗೆ ನೆನಪಾಯ್ತು ಅರೆ ಇದರಲ್ಲೆ ನಾನ ಅವಳ ಜತೆ ಮಾತಡಿದ್ದು ಅಂತಾ ಮತ್ತೆ ಓಡೋಡಿ ಮೊಬೈಲ್ ಕೈಯಲ್ಲಿ ಹಿಡಿದು ಅದಕ್ಕೆ ಮುದ್ದಾಡಿದ.. ಅದೇ ಚಿಂತೆಯಲ್ಲಿ ಯಾವಾಗ ನಿದ್ದೆಗೆ ಜಾರಿದ್ನೋ ಗೊತ್ತಿಲ್ಲ. ಮುಂಜಾನೆ ಎದ್ದವನೇ ಮತ್ತೆ ಕಾಲ್ ಮಾಡಿದ ಮತ್ತೆ ಸೇಮ್ ರೆಸ್ಪೊನ್ಸ್... ನಾಲ್ಕು ದಿನ ಕಾಯ್ದ ಸಾಕಾಯ್ತು.. ಬೇಸತ್ತು ಹೋಗಿದ್ದ, ತಿನ್ನೋಣ ಅಂದ್ರೆ ಊಟ ಸೇರ್ತಾ ಇಲ್ಲ. ಬೇಕ್ ಮೇಲ್ ಕೂತ್ರೆ ವಳು ನೆನಪಾಗ್ತಾಳೆ.
ಅವತ್ತು ರಾತ್ರಿ ಅವನು ಆ ನಿಧರ್ಾರ ತೆಗೆದುಕೊಳ್ಳಬಾರದಿತ್ತು ಅನಿಸುತ್ತೆ. ಇನ್ನೆರಡು ದಿನ ಅವನು ಕಾಯ್ದಿದ್ರೆ ಸೌಮ್ಯ(ಕಾಲ್ಪನಿಕ ಹೆಸರು) ಇವನ ಪಾಲಾಗುತ್ತಿದ್ದಳೆನೋ. ಆದ್ರೆ ಅವನು ದುಡುಕಿ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ ಅವನನ್ನು ಆಸ್ಪತ್ರೆಗೂ ತರಲಾಯಿತು. ಆದರೆ ಪ್ರಯೋಜನವಾಗಲಿಲ್ಲ. ಸಾಯುವಾಗೂ ಅವನಲ್ಲಿ ಒಂದೇ ಆಸೆ ಸಮುದ್ರದ ಅಲೆಗಳಂತೆ ಅಬ್ಬರಿಸುತಿತ್ತು. ಆಕೆಯನ್ನ ಒಂದೇ ಬಾರಿ ನೋಡಿದ್ರೆ ಸಾಕು.. ಮಾತಾಡಿದ್ರು ಸಾಕು....
ಸ್ನೇಹಿತರೇ ಇಂಥದ್ದೊಂದು ಕ್ರೈಮ್ ನ್ಯೂಸ್ ಬಂದದ್ದಕ್ಕೆ ಈ ಲೇಖನ ಅನಾವರಣಗೊಂಡಿದೆ.. ಪ್ಲೀಸ್ ನೀವು ಇಂಥ ದುಡುಕು ನಿಧರ್ಾರಕ್ಕೆ ಕೈಹಾಕಬೇಡಿ.. ನಿಮ್ಮ ಪ್ರೀತಿ ಗಟ್ಟಿಯಾಗಿದ್ದಲ್ಲಿ ನಿಮ್ಮಾಕೆ ನಿಮಗೆ ಸಿಕ್ಕೆ ಸಿಗ್ತಾಳೆ..