Tuesday, January 18, 2011

ಬುಟ್ಟಿ ಹೆಣೆಯುವವರ ಬದುಕಿನ ಸುತ್ತ  ಕೋಟಲೆಗಳ ಹುತ್ತ ...

'ಈಗ ಆ್ಯನೋ ಮದಿ ಸೀಸನ್ ಆದಾರಿ ರೊಕ್ಕದ ಸಮಸ್ಯೆ ಆ್ಯನಬಿ ಇಲ್ರಿ, ಆದುರಾ ಮಳಗಾಲ ಬಂತು ಅಂದುರಾ ಒಂದು ಹೊತ್ತಿಂದ ಉಳ್ಳಾಕಬಿ ಪರದಾಡಬೇಕಾಯ್ತುದ್ರಿ ಅಂತಾರೆ ಈ ಬುಟ್ಟಿ ಹೆಣೆಯುವ ಮಹಿಳೆ.' ಹಾಗು ಇಡೀ ನಮ್ ಕುಟುಂಬಾನೆ ಈ ವೃತ್ತಿ ಮಾಡ್ತಿವ್ರಿ ಆದುರಾ ಆದಾಯ ಮಾತ್ರ ಒಪ್ಪತ್ತಿನ ಕೂಳಿಗು ಸಾಲಂಗಿಲ್ರಿ. ಈ ಮಹಿಳೆ ಮಾತು ಕೇಳಿ ಎಷ್ಟು ಜನರ ಕರುಳು ಚುರುಕ್ ಅನ್ನೋಲ್ಲಾ ನೀವೆ ಹೇಳಿ? 
ಬೀದರ್ನಲ್ಲಿ ಬಿದಿರಿನಿಂದ ಸಾಮಗ್ರಿಗಳನ್ನು ತಯಾರಿಸುವ ಇವರು ಸುಮಾರು ವರ್ಷಗಳಿಂದ ಈ ಸ್ಥಳದಲ್ಲಿಯೇ ನೆಲೆಸಿದ್ದು ಈ ವೃತ್ತಿಯಲ್ಲಿ ನಿರತರಾಗಿದ್ದಾರೆ. ಇವರು ತಮಗೆ ಬೇಕಾದ ಬಿದಿರುಗಳನ್ನು ಸಾಮಗ್ರಿ ಎನ್ನುವ ಸ್ಥಳದಿಂದ ಆಮದು ಮಾಡಿಸಿಕ್ಕೊಳ್ಳುತ್ತಾರೆ. ಈ ಬಿದಿರಿನಿಂದ ಹಲವು ಬಗೆಯ ಬುಟ್ಟಿ, ಹೂವಿನ ಪುಟ್ಟಿ, ಮೊರ ಮುಂತಾದ ಹಲವು ಬಗೆಯ ಸಾಮಗ್ರಿಗಳನ್ನು ತಯಾರಿಸಿ ಮಾರಾಟ ಮಾಡುತ್ತಾರೆ. 1 ಬಂಬುಗೆ ಸು. 60-70 ರೂ. ನೀಡಿ ಅದರಿಂದ ಹಲವು ಬಗೆಯ ಸಾಮಗ್ರಿಗಳನ್ನು ತಯಾರು ಮಾಡಿ ದಿನಕ್ಕೆ 1000 ರೂ. ನಷ್ಟು ಹಣಗಳಿಸುತ್ತಾರೆ. ಮದುವೆ ಸಮಯದಲ್ಲಿ ಮಾತ್ರ ಬುಟ್ಟಿಗಳಿಗೆ ಬೇಡಿಕೆ ಹೆಚ್ಚುವುದರಿಂದ ಸ್ವಲ್ಪ ಮಟ್ಟಿಗೆ ಹಣದ ಸಮಸ್ಯೆಯೇನಿರುವುದಿಲ್ಲ, ಆದರೆ ಮಳೆಗಾಲದಲ್ಲಂತೂ ಇಡಿ ಕುಟುಂಬವೆ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ. ಕುಟುಂಬದ ಸದಸ್ಯರೆಲ್ಲರು ಬೇರೆ ತಿಳಿಯದ ಕಾರಣ ಇದೆ ವೃತ್ತಿಯನ್ನು ಜೀವನದ ಮಾರ್ಗವೆಂದು ಆರಿಸಿಕೊಂಡಿರುವುದು. 'ಶಾಸ್ತ್ರ ಹೇಳೋಕ್ಕೆ ಬದನೆಕಾಯಿ ತಿನ್ನೋಕ್ಕೆ' ಎಂಬಂತೆ ಸಕರ್ಾರದ ಯೋಜನೆಗಳೆಲ್ಲಾ ಇಂಥವರಿಗೆ ಸ್ಪಂದಿಸುತ್ತಿಲ್ಲ! ಕುಟುಂಬದಲ್ಲಿ ಮಕ್ಕಳಿಗೆ ಹೆಚ್ಚಿನ ವಿದ್ಯಾಭ್ಯಾಸ ನೀಡಲಾಗಿಲ್ಲವೆಂಬ ಕೊರಗು ಹೆತ್ತ ಕರುಳಿನದ್ದಾದರೆ, ಇನ್ನೊಂದು ಕಡೆ ಕಿತ್ತು ತಿನ್ನುವ ಬಡತನ ಇರುವಾಗ ನಮಗೆ ಯಾಕೆ ಈ ಶಾಲೆ-ಗೀಲೆ ಸಾರ್ ಎನ್ನುತ್ತಾರೆ ಹತಾಶಗೊಂಡ ಆ ಮಹಿಳೆ. ವಿಪಯರ್ಾಸವೆಂದರೆ ಜನರಿಗೆಲ್ಲಾ ರೊಟ್ಟಿಗಾಗಿ ಬುಟ್ಟಿ ನೇಯ್ದು ಕೊಡುವ ಇವರ ಜೀವನಕ್ಕೆ ಭದ್ರತೆಯ ಬುಟ್ಟಿಯೇ ಇಲ್ಲ.
ಹಾಗಾದರೆ ಇವರು ಜೀವನ ಆದ್ರು ಹೇಗೆ ಮಾಡ್ತಾರೆ ಅನ್ನೊ ಪ್ರಶ್ನೆ ನಿಮಗೆ ಬರ್ಲಿಲ್ವಾ? ಬೇಸಿಗೆಯಲ್ಲಿ ದುಡಿದುದ್ದನ್ನು ಮಳೆಗಾಲದಲ್ಲಿ ತಿನ್ನುವ ಇರುವೆಯಂತೆ ಇವರ ಜೀವನ ಎನ್ನಬಹುದು! ಏಕೆಂದರೆ ಇವರು ಸಹ ಇರುವೆಯಂತೆಯೇ ಬೇಸಿಗೆಯ ಸೀಸನ್ನಲ್ಲಿ ಗಳಿಸಿದ್ದನ್ನು ಯೋಜನಾಬದ್ದವಾಗಿ ಮಳೆಗಾಲದಲ್ಲಿ ವ್ಯಯಮಾಡುತ್ತಾರೆ. ಆದರೆ ಇಂದಿನ ಆಧುನಿಕ ಪಾಶ್ಚಾತ್ಯ ಸಂಸ್ಕೃತಿಯಿಂದಾಗಿ ಬೇಸಿಗೆಯು ಅವರ ಪಾಲಿಗೆ ಮಳೆಗಾಲವೆ ಆಗಿದೆ..!
ಬುಟ್ಟಿ ಹೆಣೆಯುವವರ ಜೀವನದ ಸುತ್ತ ಸುತ್ತಿ ನೋಡುವಾಗ ಮುತ್ತಿರುವುದು ಬರೀ ಕರಾಳ ಛಾಯೆ, ದುಃಖ ಹಾಗು ಹಸಿವಿನ ಪರದಾಟ. ಇವೆಲ್ಲವುಗಳಿಂದ ಇವರಿಗೆಮುಕ್ತಿಯೇ ಇಲ್ಲವೆ?
ಆತೀಶ ಬಿ ಕನ್ನಾಳೆ

Saturday, January 1, 2011

In & As

ಕಥೆಯಲ್ಲ ವ್ಯಥ್ಯೆ..!
ಲೈಫು ಇಷ್ಟೆನೆ...

ಯತ್ರ ನಾರ್ಯಸ್ತು ಪೂಜ್ಯಂತೆ ರಮಂತೆ ತತ್ರ ದೇವತಾ...(ಎಲ್ಲಿ ಮಹಿಳೆಯರನ್ನು ಆದರಿಸಲಾಗುತ್ತದೆಯೋ ಅಲ್ಲಿ ದೇವರು ನೆಲೆಸಿರುತ್ತಾರೆ) ಎನ್ನುತ್ತದೆ ಈ ಶ್ಲೋಕ. ಸ್ತ್ರೀಯರನ್ನು ಗೌರವಿಸುವುದು ನಮ್ಮ ಸಂಸ್ಕೃತಿ...! ಆಕೆ ಆದಿಶಕ್ತಿ, ಪ್ರಕೃತಿ, ಸೃಷ್ಟಿಯ ಮೂಲ ಎಂದೆಲ್ಲಾ ಗೌರವಿಸುತ್ತೇವೆ.
ಆದರೆ...ಎಷ್ಟರಮಟ್ಟಿಗೆ...?
ಕೆಲವು ದಿನಗಳು ಹಿಂದೆ ನಾನು ಮೆಜೆಸ್ಟಿಕ್ ಪ್ಲೈಓರ್ ಮೇಲೆ ಸ್ನೇಹಿತರ ಜೊತೆ ಹೋಗುತ್ತಿದ್ದೆ. ಅದು ಸಂಧ್ಯಾ  ಸಮಯವಾದ್ದರಿಂದ ಸಿಕ್ಕಾಪಟ್ಟೆ ಜನರಿಂದ ಫ್ಲೈಓರ್ ಫುಲ್ ರಷ್. ಅಲ್ಲಿ ಕೆಲವು ಪೋಲಿ ಹುಡುಗರು ನಿಂತಿದ್ದರು. ಎಲ್ಲರು 20-25 ಹದಿಹರೆಯದವರೆ. ಅಲ್ಲಿಯೇ ಕುಳಿತಿದ್ದ ಮೂವರು ಹುಡುಗಿಯರನ್ನು ನೋಡಿ ಏನೆನೋ ಮಾತನಾಡುತ್ತಿದ್ದರು. ಆ ಮೂವರು ಹುಡುಗಿಯರು ಕೂಡ ಅಷ್ಟೇ ಬಿಂದಾಸಾಗಿ ನಗುತ್ತಾ, ಮಾತನಾಡುತ್ತ ಈ ಹುಡುಗರ ಕಡೆಗೆ ನೋಡುತ್ತಿದ್ದರು. ನಾನೂ ಸ್ವಲ್ಪ ಹೊತ್ತು ಅಲ್ಲೇ ನಿಂತೆ, ಪರಿಸ್ಥಿತಿಯನ್ನು ತಿಳಿದುಕೊಳ್ಳುವ ಪ್ರಯತ್ನದಲ್ಲಿ ತೊಡಗಿದ್ದೆ. ನನ್ನ ಲೇಖನಿಗೆ ಆಹಾರ ಸಿಕ್ಕಬಹುದೆಂಬ ತವಕ ಮನದ ಮೂಲೆಯಲ್ಲಿ ಸಮುದ್ರದ ಅಲೆಗಳಂತೆ ಏಳುತ್ತಿತ್ತು.
ಆ ಯುವತಿಯರು ತಮ್ಮ ದೇಹದ ಮೇಲೆ ಬಟ್ಟೆ ಇದೆಯೋ ಇಲ್ಲವೋ ಎಂಬ ಪರಿವಿಲ್ಲದೆ ಕುಳಿತಿದ್ದರು. ಒಂದೇ ಪದದಲ್ಲಿ ಹೇಳಬೇಕಾದರೆ ಹೆಣ್ಣಿಗೆ ಸಹಜವಾದ ಲಜ್ಜೆಯ ಸ್ವಭಾವವೇ ಅವರಲ್ಲಿ ಕಾಣುತ್ತಿರಲಿಲ್ಲ...!
ಹದಿನೈದಿಪ್ಪತ್ತು ನಿಮಿಷ ನಿಂತು ಪರಿಸ್ಥಿತಿಯನ್ನು ಪರಾಮಶರ್ಿಸಿದಾಗ ಗೊತ್ತಾಯ್ತು. ಅವರು ಬೇರೆ ಯಾರೂ ಅಲ್ಲ, `ಬದುಕಿನ ಬಂಡಿ ದೂಡಲು ದೇಹವನ್ನು ಬಂಡವಾಳವಾಗಿ ಮಾಡಿಕೊಂಡಿರುವವರು.'
ಆಮೇಲೆ 24-25 ಆಸುಪಾಸು ವಯಸ್ಸಿನ ಹುಡುಗ ಬಂದು ಕಣ್ಣು ಮಿಟುಕಿಸಿದ ತಕ್ಷಣ ಗ್ರೀನ್ ಸಿಗ್ನಲ್ ದೊರೆತ ಯುವತಿ ಸನ್ನೆಯ ಮೂಲಕ ಏನೋ ಹೇಳಿದಳು. ನಂತರ ಇಬ್ಬರೂ ಆಟೋ ಹಿಡಿದು ಎಲ್ಲಿಗೋ ಹೊರಟು ಹೋದರು.
ಆ ಘಟನೆಯಿಂದ ನನ್ನಲ್ಲಿ ಹಲವು ಪ್ರಶ್ನೆಗಳು ಫುಂಕಾನುಫುಂಕವಾಗಿ ಏಳಲಾರಂಭಿಸಿದವು. ಡಿಗ್ರಿಯಲ್ಲಿದ್ದಾಗ ಸಾಮಾಜಿಕ ಸಮಸ್ಯೆಗಳ ಕುರಿತಾಗಿ  ಓದಿದ್ದೆ. ಆದರೆ ಅದೇನೋ ಅಂತಾರಲ್ಲಾ, ಓದಿದ್ದು ಸುಳ್ಳಾಗಬಹುದು, ನೋಡಿದ್ದೂ ಸುಳ್ಳಾಗಬಹುದು, ನಿಧಾನಿಸಿ  ಯೋಚಿಸಿದಾಗ ನಿಜವ ತಿಳಿವುದು.... ಎಂಬಂತೆ ನನಗೂ ಆ ಮೆಜೆಸ್ಟಿಕ್ ಮೂಲೆಯಲ್ಲಿ ಈ ಲೋಕದಲ್ಲಿ ವ್ಯಾಪಕವಾಗಿ ನಡೆಯುತ್ತಿರುವ ಇಂತಹ ವಿಷಯಗಳ ಒಂದು ತುಣುಕು ಕಣ್ಣಿಗೆ ಬಿತ್ತು. ಅದರ ಪ್ರತಿಫಲವೇ ಈ ಲೇಖನ.
ಮೆಜೆಸ್ಟಿಕ್ ಫ್ಲೈಓರ್ ಮೇಲೆ ಟೋಪಿ, ವಾಚು ಮಾರಿಕೊಂಡಿದ್ದ ಹಲವರನ್ನು ಅಲ್ಲಿಂದ ನೌದೋಗ್ಯಾರಾಹ (ಓಡಿಸಲಾಗಿದೆ) ಮಾಡಲಾಗಿದೆ.

ಮೂಗು ಮುರಿಯುವವರು
ಇಂತಹ ವೃತ್ತಿ ಎಂದಾಕ್ಷಣ ಮೂಗುಮುರಿಯುವ ಜನರೇ ಇವತ್ತು ಅತ್ಯಧಿಕ. ಆದರೆ ಹೀಗೆ ಮೂಗು ಮುರಿಯುವ ಮುನ್ನ ಕೆಲವು ಸಂಗತಿಗಳ ಕುರಿತು ಯೋಚಿಸಲೇಬೇಕು.
ಯಾವ ಹೆಣ್ಣು ತಾನೆ ಹುಟ್ಟಿದ ತಕ್ಷಣದಿಂದ ಇಂತಹ ವೃತ್ತಿಗಿಳಿಯಲು ಸಾಧ್ಯ....? ಈ ಸೃಷ್ಟಿಯ ನಿಯಮದಂತೆ ಪ್ರತಿ ಹೆಣ್ಣಿನಲ್ಲೂ ನಾಚಿಕೆ, ಸಂಕೋಚ ಮನೆಮಾಡಿರುತ್ತದೆ. ಒಬ್ಬ ಪುರುಷ ತನ್ನನ್ನು ನೋಡುತ್ತಿದ್ದಾನೆಂದರೆ, ಅಲ್ಲಿಂದ ಪಾರಾಗಲು ಯತ್ನಿಸುತ್ತಾಳೆ. ಅವಳಿಗೆ ಅವಳದ್ದೇ ಆದ ಆತ್ಮಾಭಿಮಾನ, ವರ್ಚಸ್ಸೆನ್ನುವುದಿದೆ. ಅದರಲ್ಲೂ ನಮ್ಮ ಭಾರತದ ಸಂಸ್ಕೃತಿ ಶ್ರೇಷ್ಠವಾದದ್ದು. ಆ ಶ್ರೇಷ್ಠತೆಗೆ ಇಲ್ಲಿಯ ನಾರಿ ದ್ಯೋತಕ. ಇಲ್ಲಿ ಹೆಣ್ಣಿಗೆ ನಾಚಿಕೆ, ಮಾನ-ಮಯರ್ಾದೆ ಎನ್ನುವ ಗುಣಗಳೆ ನಿಜ ಭೂಷಣ. ಆ ಗುಣಗಳನ್ನು ಅವಳು ಮೈಗೂಡಿಸಿಕೊಂಡಾಗ ಮಾತ್ರ ಪರಿಪೂರ್ಣಳಾಗಲು ಸಾಧ್ಯ. ಅದಕ್ಕೂ ಮಿಗಿಲಾಗಿ ಬೇರೆ ರಾಷ್ಟ್ರಗಳಿಗೆ ಹೋಲಿಸಿದಾಗ ನಮ್ಮ ದೇಶದಲ್ಲಿ ಸಾಂಪ್ರದಾಯಿಕ ಕುಟುಂಬಗಳು, ಕಟ್ಟುಕಟ್ಟಳೆಗಳು ಅತೀ ಹೆಚ್ಚು. ಇಂತಹ ವಾತಾವರಣದ ಮಧ್ಯೆ, ಇಷ್ಟೆಲ್ಲ ಕಟ್ಟುಪಾಡುಗಳ ನಡುವೆಯೂ ಈ ವೃತ್ತಿ ನಾಯಿಕೊಡೆಯಂತೆ ಬೆಳೆಯುತ್ತಿದೆ ಎಂದರೆ ಇಲ್ಲಿ ಯಾರ ಲೋಪವಿದೆ...?
ಈ ವೃತ್ತಿಯಲ್ಲಿರುವವರಿಗೆ ಸೌಂದರ್ಯವೇ ಬಂಡವಾಳ. ವಯಸ್ಸು ಕಳೆದಂತೆ ಅವಳ ಇಡೀ ಜೀವನ ಮುಳ್ಳಿನ ಹಾಸಿಗೆ. ಇವರ ಬದುಕಿನ ಕುರಿತು ಕ್ಷಣಹೊತ್ತು ಆಲೋಚಿಸುವಾಗ ಕಸಿವಿಸಿಯಾಗುತ್ತದೆ.

ಸ್ಥಾನಮಾನ
ಬಾಲ್ಯದಲ್ಲಿ ಯಾರಿಗೆ ಬೇಕಾದರೂ ಕೇಳಿ ನೋಡಿ ಅವಳು(ರು) ಇಂಜಿನೀಯರ್, ಡಾಕ್ಟರ್, ವಿಜ್ಞಾನಿ, ಪತ್ರಪತರ್ೆ, ಶಿಕ್ಷಕಿ ಹೀಗೆ ಹಲವಾರು ಗುರಿಗಳನ್ನು ನಿಮ್ಮ ಎದುರು ಬಿತ್ತರಿಸುತ್ತಾರೆ. ಆದರೆ ಯಾರೂ ಕೂಡ ತಾನು ಲೈಂಗಿಕ ಕಾರ್ಯಕತರ್ೆಯಾಗಬೇಕೆಂದು ಹೇಳುವುದಿಲ್ಲ. ಹೇಳಲು ಸಾಧ್ಯವೂ ಇಲ್ಲ. ಏಕೆಂದರೆ ಅದೊಂದು `ಪಾಪಕೂಪ'ವೆಂದು ಪ್ರತಿಯೊಬ್ಬರಿಗೂ ಗೊತ್ತು. ಹೀಗಿರುವಾಗ್ಯೂ ಇವತ್ತು ಆ ಇದನ್ನು ಅವರು ತಮ್ಮ (ಪ್ರ)ವೃತ್ತಿಯನ್ನಾಗಿಸಿಕೊಂಡಿದ್ದಾರೆಂದರೆ ಬಹುಶಃ ಸ್ವಯಿಚ್ಛೆಯಿಂದ ಯಾರೂ ಆ ವೃತ್ತಿಗೆ ಕಾಲು ಇಟ್ಟಿಲ್ಲವೆಂದು ಕಡ್ಡಿ ಮುರಿದಷ್ಟು ಸುಲಭವಾಗಿ ಹೇಳಬಹುದು. ಕ್ಷಣಹೊತ್ತು ನೀವೆ ಯೋಚಿಸಿ.... ಒಬ್ಬ ಮಹಿಳೆ ತನ್ನ ದೇಹವನ್ನು ಹಲವು ಪುರುಷರಿಗೆ ಒಪ್ಪಿಸಬೇಕಾದ್ದಲ್ಲಿ ಅವಳು ತನ್ನ ಮನಃಸಾಕ್ಷಿಯನ್ನು ಎಷ್ಟರ ಮಟ್ಟಿಗೆ ಕೊಂದಿರಬಹುದು(ಕೊಲೆಗೈದಿರಬಹುದು)!?
ಕನಸುಗಳಿಲ್ಲವೆ?
ಹಾಗಾದರೆ ಈ ಹೆಣ್ಣು ಮಕ್ಕಳಿಗೆ ಬೇರೆಯವರಂತೆ ತಮ್ಮದೇ ಕನಸುಗಳೇ ಇಲ್ಲವೇ..? ಅವರು ಇತರರಂತೆ ಬದುಕಬೇಕು ಎಂದುಕೊಳ್ಳೋದೇ ಇಲ್ಲವೇ...??
ಖಂಡಿತವಾಗಿ ಅವರಲ್ಲಿಯೂ ಅನೇಕ ಕನಸುಗಳುಂಟು. ಇಂತಹ ಹೀನಾಯ ಬದುಕನ್ನು ದೂಡುತ್ತಿರುವ ಅವರ ಹೃದಯ ನೋಯುತ್ತಲೇ ಇರುತ್ತದೆ. ಈ ಬದುಕಿನ ಹೊರತಾಗಿಯೂ ಆ ಹೃದಯದಲ್ಲಿ ನೂರಾರು ಆಸೆಗಳುಂಟು.
ತನ್ನ ಬದುಕಿಗಿಂತ ಭಿನ್ನವಾಗಿ ಬದುಕುತ್ತಿರುವ ಬೇರೆ ಸ್ತ್ರೀಯರನ್ನು ನೋಡುವಾಗ ಅವಳೂ ಅಂತಹ ಜೀವನಕ್ಕಾಗಿ ತವಕಿಸಬಹದು. ಅವರ ಕೌಟುಂಬಿಕ ಜೀವನ, ಪುಟ್ಟ ಸಂಸಾರ ನೋಡುವಾಗ ಅವಳ ಹೃದಯದಲ್ಲಿ ಜ್ವಾಲಾಮುಖಿ ಭುಗಿಲೇಳುತ್ತಿರಬಹುದು?
ಪರಿಸ್ಥಿತಿ ಹೀಗಿರುವಾಗ ಏಕೆ ಈ ಜಾಡ್ಯ ನಮ್ಮ ಸಮಾಜದಲ್ಲಿ ಹೆಚ್ಚುತ್ತಿದೆ?
ಸಿ.ಎನ್.ಮುಕ್ತಾರವರ `ಪರಿಭ್ರಮಣ' ಕಾದಂಬರಿಯಲ್ಲಿ `ಈ ಏಕೆ?' ಎನ್ನುವ ಪ್ರಶ್ನೆಗೆ ಸ್ಪಟಿಕದಂಥ ಉತ್ತರ ದೊರಕಬಹುದು. ಒಂದು ಹೆಣ್ಣು ಹುಟ್ಟಿದಾಗ ತಂದೆಯ, ಮದುವೆಯ ನಂತರ ಪತಿಯ ಹಾಗೂ ಮುಂದೆ ಮಕ್ಕಳು ಹೇಳಿದಂತೆ ಕೇಳುತ್ತಾ ಜೀವಿಸಬೇಕೆಂಬ ನಿಯಮ (ಪ್ರಾಯಶಃ ಇದು ಮೆಟ್ರೋ ಸಿಟಿಗಳಿಗೆ  ಅಷ್ಟು ಅನ್ವಯಿಸದು) ಹಳ್ಳಿಗಳಲ್ಲಿ ಅಷ್ಟೆ ಏಕೆ ಅನೇಕ ನಗರಗಳಲ್ಲಿ ಇಂದಿಗೂ ಚಾಲ್ತಿಯಲ್ಲಿದೆ.
ಈ ಪರಿಭ್ರಮಣ ಕಾದಂಬರಿಯ ಸ್ವಾರಸ್ಯ ಕೂಡ ಅದೇ. ಅಪ್ಪನಿಲ್ಲದ ಸುಂದರ ಯುವತಿಯೊಬ್ಬಳ ಬದುಕಿನ ವ್ಯಥ್ಯೆ ಇದರಲ್ಲಿ ಅಡಕವಾಗಿದೆ. ಅನಾರೋಗ್ಯದಲ್ಲಿದ್ದ ಅಜ್ಜಿ ಆಶ್ರಯದಲ್ಲಿ ಅವಳು ಬೆಳೆಯುತ್ತಾಳೆ ನಂತರ ಅಜ್ಜಿ ಸತ್ತ ಮೇಲೆ ಅವಳು ಕಂಗಾಲಾಗಿ ಪುರುಷ ಪ್ರಧಾನ ಸಮಾಜದ  ಕಾಮಾಲೆ ಕಣ್ಣಿಗೆ ಗುರಿಯಾಗುತ್ತಾಳೆ. ಇಂತಹ ವಾತಾವರಣ ಇಂದಿಗೂ ಇದೆ. ಇದೆಲ್ಲಾ ಕಥೆಯಂತೆ ಭಾಸವಾದರೂ ವಾಸ್ತವ್ಯಕ್ಕೆ ಆಳ ಸಂಬಂಧವಿದೆ. ಕಥಾನಕಗಳು ಯಾರದೋ ಬದುಕಿನ ವಾಸ್ತವವಾಗಿರಬಹುದು.
ಅನಿವಾರ್ಯ ಕಾರಣಗಳು
ಎಸ್ಟಿಡಿ(ಸೆಕ್ಷುಯಲ್ ಟ್ರಾನ್ಸ್ಮಿಟಡ್ ಡಿಸಿಸ್) ಎಂದು ಕರೆಯಲಾಗುವ ಈ ವೇಶ್ಯೆಯರ ತಾಣಗಳು ದಿನದಿಂದ ದಿನಕ್ಕೆ ಹೆಚ್ಚುತ್ತಲೇ ಇವೆ. ಇವತ್ತು 100ಕ್ಕೆ ಪ್ರತಿಶತಃ ಓರ್ವ ಮಹಿಳೆ ಸ್ವಇಚ್ಛೆಯಿಂದ ಈ ವೃತ್ತಿಗೆ ಇಳಿದರೂ, ಇನ್ನುಳಿದ 99% ಮಹಿಳೆಯರು ಈ ಕೂಪಕ್ಕೆ ಅನಿವಾರ್ಯ ಕಾರಣಗಳಿಂದ ದೂಡಲ್ಪಡುತ್ತಿದ್ದಾರೆ. ಇದಕ್ಕೆ ಹಲವು ಕಾರಣಗಳುಂಟು.

ವಿಭಕ್ತ ಕುಟುಂಬಗಳ ಹೆಚ್ಚಳ: `ವಿನಾಶ ಕಾಲೆ ವಿಪರೀತ ಬುದ್ಧಿ' ಎಂಬಂತಾಗಿದೆ ನಮ್ಮ ಈ ಸಮಾಜದ ಪರಿಸ್ಥಿತಿ. ಹೆಚ್ಚುತ್ತಿರುವ ಜನಸಂಖ್ಯೆಯಿಂದಾಗಿ ವಲಸೆ ಪ್ರಮಾಣ ಮುಗಿಲು ಮುಟ್ಟಿದೆ. ಜೌದ್ಯೋಗೀಕರಣದ ಫಲಶ್ರುತಿಯಾಗಿ ಇಂದು ಅವಿಭಕ್ತ ಕುಟುಂಬಗಳು ಕಾಣೆಯಾಗಿವೆ. ಹಿರಿಯರೂ ಅನುಭವಿಗಳೂ ಇದ್ದ ಅವಿಭಕ್ತ ಕುಟುಂಬಗಳಲ್ಲಿ ಏನಾದರೂ ಕೌಟುಂಬಿಕ ವಿರಸ ತಲೆದೋರಿದರೆ, ಅದಕ್ಕೆ ಅವರು ತಕ್ಷಣ ಸೂಕ್ತ ಪರಿಹಾರ ನೀಡುತ್ತಿದ್ದರು. ಆದರೆ ಈಗ ಪತಿ-ಪತ್ನಿಯರಿಬ್ಬರು ದುಡುಕಿ ನಿರ್ಣಯಗಳನ್ನು ತೆಗೆದುಕೊಳ್ಳುತ್ತಿರುವುದರಿಂದ ವಿಚ್ಛೇದನಗಳ ಪ್ರಮಾಣ ಹೆಚ್ಚಿದೆ. ಇದು ಪರೋಕ್ಷವಾಗಿ ಅನೈತಿಕ ಸಂಬಂಧ, ವೇಶ್ಯಾವೃತ್ತಿ ಹೆಚ್ಚಳಕ್ಕೆ ಕಾರಣವಾಗಿದೆ.
ಸಮಾಜಮುಖಿಯಾಗಿ ಕಾರ್ಯನಿರ್ವಹಿಸಬೇಕಾದ ಆರಕ್ಷರು (ಪೊಲೀಸರು) ಹಾಗೂ ರಾಜಕಾರಣಿಗಳು ಪರೋಕ್ಷ ಹಾಗೂ ಪ್ರತ್ಯಕ್ಷವಾಗಿ ಇದರಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ಹೀಗಾಗಿ ಬೇಲಿಯೇ ಎದ್ದು ಹೊಲವನ್ನು ಮೇಯ್ದಂತೆ ಎಂಬ ಪರಿಸ್ಥಿತಿ ನಿಮರ್ಾಣವಾಗಿದೆ.
ಪಿಂಕ್ ಸಿಟಿ, ಮರುಭೂಮಿಗೆ ಪ್ರಖ್ಯಾತಿ ಪಡೆದಿರುವ ರಾಜಸ್ಥಾನ ಎಲ್ಲರಿಗೂ ಗೊತ್ತೆ ಇದೆ. ಈ ರಾಜಸ್ತಾನದಲ್ಲಿರುವ ಚಿಕ್ಕ ಪಟ್ಟಣ `ಆಲ್ವರ್' ಯಾವುದಕ್ಕೆ ಪ್ರಸಿದ್ಧಿ ಪಡೆದಿದೆ ಎಂದರೆ, ದೇಶದ ಹಲವು ರಾಜ್ಯಗಳಿಂದ ಚಿಕ್ಕ ಹುಡುಗಿಯರನ್ನು ಹೊತ್ತೊಯ್ದು ಅವರನ್ನು ಈ ವೇಶ್ಯಾಗೃಹಕ್ಕೆ ದಬ್ಬಲಾಗುತ್ತದೆ. ಅತೀ ಕಡಿಮೆ ವಯೊಮಾನದಲ್ಲಿ(12ವರ್ಷದ) ಹುಡುಗಿಯರನ್ನು ಈ ವೃತ್ತಿಗೆ ಇಳಿಸಲಾಗುತ್ತದೆ.
ರಾತ್ರೋರಾತ್ರಿ ಏನೂ ತಿಳಿಯದ ಬಾಲೆಯರನ್ನು  ಕರೆತಂದು ಅವರನ್ನು ಮಕ್ಕಳಂತೆ ಬೆಳೆಸಲಾಗುತ್ತದೆ. ಕೇಳಿದಾಗ ಪೌಷ್ಠಿಕಾಂಶಯುಕ್ತ ಊಟ ನೀಡಲಾಗುತ್ತದೆ. ಆದರೆ ಅದರ ಜತೆ `ಆಕ್ಸಿಟಾಸಿನ್' ಇಂಜಕ್ಷನ್ ಕೂಡ ನೀಡಲಾಗುತ್ತದೆ. ಇದರ ಪ್ರಮುಖ ಉದ್ದೇಶ ಹುಡುಗಿಯರು ಆದಷ್ಟು ಬೇಗ ಋತುಮತಿಯರಾಗಿ ಈ ವೃತ್ತಿಗೆ ಯೋಗ್ಯರಾಗಲೆನ್ನುವುದು!. ಇದರಿಂದ ದಷ್ಟಪುಷ್ಟರಾಗಿ ತುಂಬಿಕೊಂಡು ಬೆಳೆಯುವ ಯುವತಿಯರನ್ನು ಅರಬ್ (ಯುಎಇ) ರಾಷ್ಟ್ರಗಳಿಗೆ ಮಾರಲಾಗುತ್ತದೆ. ಈ ವ್ಯವಹಾರದಲ್ಲಿ ತೊಡಗಿರುವವರು ಕೈತುಂಬಾ ಹಣ ಪಡೆದು, ಐಷಾರಾಮಿ ಜೀವನ ನಡೆಸುತ್ತಾರೆ. ಆದರೆ ಈ ವಿಷ ವತರ್ುಲದಲ್ಲಿ ಸಿಲುಕುವ ಹೆಣ್ಣುಗಳ ಜೀವನ ಮಾತ್ರ ದುರ್ಭರ. ಸಾಯುವುದಕ್ಕೂ ಸ್ವಾತಂತ್ರವಿಲ್ಲ. ಇವತ್ತು ಇದರ ಪರಿಣಾಮವಾಗಿ ಈ `ಆಲ್ವರ್'ನಲ್ಲಿರುವ ಬಹುತೇಕ ಮಹಿಳೆಯರು ಲೈಂಗಿಕ ರೋಗಗಳಿಗೆ ತುತ್ತಾಗಿದ್ದಾರೆ. ಇದು ಅಲ್ಲಿನ ಪೊಲೀಸರಿಗೆ ತಿಳಿದಿಲ್ಲವೆಂದೇನಿಲ್ಲ. ಆದರೆ ಅವರೂ ಮಾಮುಲು ಪಡೆದು ತಮ್ಮ ಜೇಬು ತುಂಬಿಸಿಕೊಂಡು ಕುರುಡ ಜಾಣರಾಗಿದ್ದಾರೆ. ಇಲ್ಲಿ ಶೋಷಣೆಗೆ ಒಳಗಾಗುತ್ತಿರುವವಳು ಮಹಿಳೆ. ವಿಪಯರ್ಾಸವೆಂದರೆ ಇಲ್ಲಿ ಹೆಣ್ಣೇ ಮತ್ತೋರ್ವ ಹೆಣ್ಣಿನ ಪಾಲಿಗೆ ವೈರಿಯಾಗಿದ್ದಾಳೆ.

ಇದಕೆ ಕೊನೆಯೇ ಇಲ್ಲವೇ?
ಇದಕ್ಕೆ ಕೊನೆನೇ ಇಲ್ವಾ..? ನಮ್ಮದು ಭವ್ಯಸಂಸ್ಕೃತಿ. ಆದರೆ ಇಲ್ಲಿ ಹೆಣ್ಣು ಹುಟ್ಟಿದಂದಿನಿಂದ ಒಂದಲ್ಲಾ ಒಂದು ರೀತಿಯಲ್ಲಿ ಶೀಷಣೆಗೆ ಗುರಿಯಾಗುತ್ತಲೇ ಬಂದಿದ್ದಾಳೆ. ಅನೇಕ ಹೋರಾಟಗಳಾದವು, ಸತ್ಯಾಗ್ರಹಗಳಾದವು, ಅನೇಕರು ಇದಕ್ಕಾಗಿ ಹೋರಾಡಿ ಮಡಿದರು. ಆದರೆ ಇದರಿಂದ ಮುಕ್ತಿ ಸಿಕ್ಕಿಲ್ಲ.
ಸ್ತ್ರೀ ಆದಿಶಕ್ತಿ, ಮಹಿಷಾಸುರ ಮದರ್ಿನಿ ಎಂದು ಹೊಗಳಿ ಚಪ್ಪರದ ಮೇಲೆ ಕೂಡಿಸಲಾಗುತ್ತಿದೆಯೇ ಹೊರತು ನೈಜವಾಗಿ ಸ್ತ್ರೀ ವಿಮೋಚನೆ ಆಗಿಲ್ಲ. ಒಂದು ವೇಳೆ ಇದು ಹೀಗೆ ಮುಂದುವರೆದರೆ ಖಂಡಿತವಾಗಿ ನಮ್ಮ ರಾಷ್ಟ್ರದ  ಭವಿಷ್ಯ ಕತ್ತಲು ಕವಿದು ಕಣ್ಮರೆಯಾಗುವುದರಲ್ಲಿ ಯಾವುದೇ ಸಂದೇಹವಿಲ್ಲ. ಈಗಾಲಾದರೋ ಕಾನೂನು, ಮಹಿಳಾ ಅಭಿವೃದ್ಧಿ ಪರ ಎಂದು ಸೆಡ್ಡುಹೊಡೆದು ಕುಳಿತಿರುವ ಸಂಸ್ಥೆಗಳು ಹಾಗೂ ಸಂಬಂಧಪಟ್ಟ ಅಧಿಕಾರಿಗಳು ಜಾಗೃತವಾಗಿ ಇದರ ವಿರುದ್ಧ ಹೋರಾಡಿದರೆ ಸ್ವಲ್ಪಮಟ್ಟಿಗಾದರೂ ಪರಿಸ್ಥಿತಿ ಸುಧಾರಿಸೀತು.

ಆತೀಶ್ ಬಿ ಕನ್ನಾಳೆ