Sunday, November 28, 2010

ಕರೆಂಟ್ ರಕ್ಷಿಸುವುದು ನಮ್ಮೆಲ್ಲರ ನೈತಿಕ ಜವಾಬ್ದಾರಿ ಅಲ್ಲವೇ?
(ಕರೆಂಟ್ ರಕ್ಷಿತೆ ರಕ್ಷಿತಃ)

 ಇಂದು ಇದರ ಕುರಿತು ನಾವು ಗಹನವಾಗಿ ಯೋಚಿಸಲೇಬೇಕಾಗಿದೆ......!
ರಾಜ್ಯಾದ್ಯಂತ ಬೇಸಿಗೆಯ ಝಳದ ಜೊತೆಗೆ ಲೋಡ್ಶೆಡ್ಡಿಂಗ್ ಕೂಡ ಅವ್ಯಾಹತವಾಗಿ ಹೆಚ್ಚಿದೆ. ಹಾಗಂತ ಬೇಸಿಗೆಯನ್ನು ನಿಲ್ಲಿಸಲಾದೀತಾ? ಖಂಡಿತವಾಗಿ ಅಸಾಧ್ಯ. ಆದರೆ ಲೋಡ್ಶಡ್ಡಿಂಗ್ ನಿಲ್ಲಿಸಬಹುದಲ್ವಾ?
ಈ ಹಿಂದೆ ಅತಿವೃಷ್ಠಿಯಿಂದ ಇಡೀ ಉತ್ತರ ಕನರ್ಾಟಕವೇ ಜರ್ಜರಿತವಾದ ಬೆನ್ನಲ್ಲೆ ಇಂದು ಅದೇ ನೀರಿಗಾಗಿ ಪರದಾಡುವ ಪರಿಸ್ಥಿತಿ ಬಂದೊದಗಿದೆ. ಇಂದು ರಾಜ್ಯದ ಜಲಾಶಯಗಳಲ್ಲಿ ನೀರು ಕಡಿಮೆಯಾಗಿ ಬಹುಶಃ ಏಪ್ರಿಲ್-ಮೇ ತಿಂಗಳಲ್ಲಿ ವಿದ್ಯುತ್ಗಾಗಿ ಪರದಾಡುವ ಪ್ರಮೇಯ ಬಂದೊದಗಬಹುದೇನೊ.
ಇಂಧನ ಸಚಿವರಾದ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ "ಬೇಸಿಗೆಯಲ್ಲಿ ಗ್ರಾಹಕರಿಗೆ ಯಾವುದೇ ತೊಂದರೆ ಆಗದಂತೆ ಅದೆಲ್ಲದ್ದಕ್ಕಿಂತ ಹೆಚ್ಚಾಗಿ ಇದು ವಿದ್ಯಾಥರ್ಿಗಳಿಗೆ ಪರೀಕ್ಷಾ ಸಮಯವಾಗಿರುವುದರಿಂದ ಎಷ್ಟೇ ಹಣ ಖಚರ್ಾದರೂ ಪರ್ವಾಗಿಲ್ಲ. ವಿದ್ಯುತ್ ಖರೀದಿಸಿಯಾದರೂ ರಾಜ್ಯಕ್ಕೆ ಬೆಳಕು ನೀಡುತ್ತೇವೆ" ಎಂದು ಹೇಳಿಕೆ ನೀಡಿದ್ದರು. ಅದಕ್ಕೆ ತಕ್ಕಂತೆ ರಾಜ್ಯಕ್ಕೆ ಅವಶ್ಯವಿರುವ 150 ದಶಲಕ್ಷ ಯುನಿಟ್ಗೆ 130 ದಶಲಕ್ಷ ಯುನಿಟ್ನಷ್ಟು ವಿದ್ಯುತ್ ಅನ್ನು ಖರೀದಿಸಿ ರಾಜ್ಯದ ಬೇಡಿಕೆಯನ್ನು ಪೂರೈಸುವಲ್ಲಿ ಪ್ರಯತ್ನಿಸಿದ್ದಾರೆ. ಬಹುಶಃ ಅವರ ಮೇಲೆ ಗೊಣಗಾಡಿ ಪ್ರಯೋಜನವೇ ಇಲ್ಲವೇನೊ ಎನಿಸುತ್ತದೆ! ಅದಕ್ಕೆ ಕಾರಣವಿಷ್ಟೆ, ಈಗಾಗಲೇ ದಿನಕ್ಕೆ 20 ದಶಲಕ್ಷ ಯುನಿಟ್ ವಿದ್ಯುತ್ ಅನ್ನು ಪ್ರತಿ ಯುನಿಟ್ಗೆ 5.50 ರೂ.ನಂತೆ ಪ್ರತಿನಿತ್ಯ 11 ಕೋಟಿ ರೂ. ವ್ಯಯಮಾಡಿ ತಿಂಗಳಿಗೆ 110 ಕೋಟಿ ರೂ. ಸರಕಾರದ ಬೊಕ್ಕಸದಿಂದ ನೀಡಿ ವಿದ್ಯುತ್ ಕೊರತೆಯನ್ನು ನೀಗಿಸುವ ಪ್ರಯತ್ನದಲ್ಲಿದ್ದಾರೆ.


ಅದೆಲ್ಲಾ ಇರಲಿ ಬಿಡಿ, ಇಂದು ಜಲಾಶಯಗಳಲ್ಲಿ ನೀರಿನ ಮಟ್ಟದ ಕುಸಿತದಿಂದಾಗಿ, ವಿದ್ಯುತ್ ಖರೀದಿಗಾಗಿ ಏಳು ರಾಜ್ಯಗಳು ಪೈಪೋಟಿಗೆ ಇಳಿದಿವೆ. ಹೀಗಾಗಿ ಬಹುಶಃ ಮುಂದಿನ ದಿನಗಳಲ್ಲಿ ವಿದ್ಯುತ್ ಮತ್ತಷ್ಟು ವ್ಯತ್ಯಯ ಎದುರಿಸಬಹುದೇನೋ ಎನ್ನುವ ಗುಮಾನಿ ಕಾಡುತ್ತಿದೆ. ಏಕೆಂದರೆ, ಇಂದು ರಾಜ್ಯದ ವಿವಿಧ ಮೂಲಗಳಿಗೆ ಹೋಲಿಸುವುದಾದರೆ ಅತೀ ಹೆಚ್ಚು ಪ್ರಮಾಣ 40 ದಶಲಕ್ಷ ಯುನಿಟ್ನಷ್ಟು ವಿದ್ಯುತ್ ಅನ್ನು ಸರಬರಾಜು ಮಾಡುತ್ತಿರುವುದು ಜಲವಿದ್ಯುತ್ ಘಟಕಗಳಿಂದಲೆ, ಆದರೆ ಇಂದು ಜಲಾಶಯಗಳ ನೀರಿನ ಮಟ್ಟ ಸಂಪೂರ್ಣವಾಗಿ ಕುಸಿದಿದ್ದು ಹೀಗಿರುವಾಗ ಪಾಪ ಯಡಿಯೂರಪ್ಪನವರು ಏನು ಮಾಡಲಾದೀತು. ನೀವೆ ಹೇಳಿ?
ಈ ಜಾಗತೀಕ ಯುಗದಲ್ಲಿ ಪ್ರತಿಯೊಬ್ಬರ ಜೀವನ ವಿದ್ಯುತ್ಮಯವಾಗಿ ಬಿಟ್ಟಿದೆ ಬಹುಶಃ ಊಟವಿರದೇ ಬದುಕಬಹುದೇನೋ ಆದರೆ ವಿದ್ಯುತ್ ಇಲ್ಲದ ಬದುಕು ಊಹೆಗೂ ಎಟುಕದು. ಮುಂಜಾನೆಯಿಂದ ರಾತ್ರಿ ಮಲಗುವವರೆಗೆ ನಾವು ವಿದ್ಯುತ್ ಅನ್ನು ಅವಲಂಭಿಸಿದ್ದೇವೆ. ಇಂಥ ಅಮೂಲ್ಯವಾದ ವಿದ್ಯುತ್ನ ದುರ್ಬಳಕೆ ಮಾಡುತ್ತಿರುವುದು ಎಷ್ಟು ಸೂಕ್ತ..... ಎಂಬುದನ್ನು ನಮ್ಮ ಜನರೇ ಯೋಚಿಸಿ ನಿರ್ಧರಿಸಬೇಕು.
ಇಂದಿನ ನಮ್ಮ ಜನರಲ್ಲಿ ಒಂದು ವಿಚಿತ್ರ ಮನೋವೃತ್ತಿ ಪ್ರವೃತ್ತಿಯಾಗಿ ಮಾರ್ಪಟ್ಟಿದೆ. ವಿದ್ಯುತ್ ಇರದಿದ್ದಲ್ಲಿ, ನೀರು ಬರದಿದ್ದಲ್ಲಿ, ರಸ್ತೆ ಅಪಘಾತಗಳು ಹೆಚ್ಚಿದ್ದಲ್ಲಿ, ಒಟ್ಟಿನಲ್ಲಿ ಏನೇ ಆದರೂ ಸಕರ್ಾರಕ್ಕೆ ದೂರಲಾಗುತ್ತದೆ. ಇವೆಲ್ಲವುಗಳಲ್ಲಿ ಸಕರ್ಾರದ್ದೇ ತಪ್ಪಾ? ಸಾರ್ವಜನಿಕರ ನೈತಿಕ ಜವಾಬ್ದಾರಿ ಏನೂ ಇಲ್ಲವೇ?

'ಇದ್ದಾಗ ಕಾರುಣ್ಣಿಮೆ, ಇಲ್ಲದಿದ್ದಾಗ ಹೋಳಿಹುಣ್ಣಿಮೆ' ಎಂಬಂತೆ ವಿದ್ಯುತ್ ಇದ್ದಾಗ ಅವಶ್ಯವೋ, ಅನಾವಶ್ಯವೋ? ಇನ್ನೂ ನೈಸಗರ್ಿಕ ದೀಪ (ಸೂರ್ಯ) ಆರುವ ಮುನ್ನವೇ ಎಲ್ಲಾ ಬೀದಿ ದೀಪಗಳು ಉರಿಯುತ್ತಿರುತ್ತವೆ, ರಾತ್ರಿ ಹಾಕಿದ ದೀಪಗಳು ಮಧ್ಯಾಹ್ನ ಹನ್ನೆರಡಾದರೂ ಆರಿಸುವುದಿಲ್ಲ, ಇನ್ನು ಕೆಲವು ಕಡೆಯಂತೂ ದಿನದ ಇಪ್ಪತ್ನಾಲ್ಕು ಗಂಟೆಗಳ ಕಾಲ ಬೀದಿ ದೀಪಗಳು ಉರಿಯುತ್ತಲೇ ಇರುತ್ತವೆ. ಇದೆಲ್ಲಾ ಬೀದಿವಿಚಾರ ಬಿಡಿ! ಮನೆಯಲ್ಲಿಯೇ ಅನಾವಶ್ಯಕವಾಗಿ ದೀಪಗಳು, ಫ್ಯಾನ್ಗಳು ಉರಿಯುತಿರುತ್ತವೆ. ಬಹುಶಃ ನೀವೂ ಕೇಳಿರಬಹುದು 'ಹನಿ-ಹನಿಗೂಡಿದರೆ ಹಳ್ಳ ತೆನೆ-ತೆನೆಗೂಡಿದರೆ ರಾಶಿ' ಒಂದೊಂದು ಯುನಿಟ್ಗಳನ್ನು ನಾವು ಅಮೂಲ್ಯ ಎಂದು ಬಳಸುವುದಾದರೆ, ಪ್ರಾಯಶಃ ಈ ವಿದ್ಯುತ್ ವ್ಯತ್ಯಯಕ್ಕೆ ಕಡಿವಾಣ ಹಾಕಬಹುದೇನೋ?
ಒಂದು ವೇಳೆ ಅನಾವಶ್ಯಕವಾಗಿ ಪೋಲಾಗುತ್ತಿರುವ ವಿದ್ಯುತನ್ನು ತಡೆಯುವುದಾದರೆ, ಸಕರ್ಾರವನ್ನಾಗಲಿ ಅಥವಾ ಜವಾಬ್ದಾರಿ ಹೊತ್ತ ಅಧಿಕಾರಿಗಳಿಗೆ ಪ್ರಶ್ನಿಸುವ ಹಕ್ಕು ನಮ್ಮದಾಗಬಹುದು. ಇಲ್ಲವಾದ್ದಲ್ಲಿ ಪ್ರಶ್ನಿಸುವ ಯಾವ ನೈತಿಕ ಹಕ್ಕು ನಮಗಿಲ್ಲ.
ಆತೀಶ ಬಿ ಕನ್ನಾಳೆ

1 comment: