ಆ ಕ್ಷಣ ನೆನೆದರೆ ತಲ್ಲಣ
(ರಂಗು ರಂಗಿನ ಕೊನೆಯ ಕ್ಷಣಗಳು)
ಇದು ನಮ್ಮ ಸ್ನಾತಕೋತ್ತರ ಪತ್ರಿಕೋದ್ಯಮದ ಅಂತಿಮ ವರ್ಷ ಇನ್ಮುಂದೆ ಣಣಜಜಟಿಣ ಟಜಿಜ ಅನ್ನೋ ಉಠಟಜಜಟಿ ಠಿಜಡಿಠಜ ಮುಗಿಯಿತು. ಕಾಲೇಜು ಜೀವನದ ರಂಗು-ರಂಗಿನ ಕ್ಷಣಗಳು, ಸ್ನೇಹಿತರೊಂದಿಗೆ ಕಳೆದ ಸುಮಧುರ ದಿನಗಳು ವಾಪಸ್ ಬರ್ಲಿಕ್ಕಿಲ್ಲ. ಎಂಬ ಕಾರಣಕ್ಕೆ ಈ ಸಲದ ಹೋಳಿ ಏನಿದ್ದರೂ ಫ್ರೆಂಡ್ಸ್ ಜೊತೆಗೆ ಕ್ಯಾಂಪಸ್ನಲ್ಲಿಯೆ ಆಚರಿಸಬೇಕು. ಒಂದು ವೇಳೆ ಇದು ಮಿಸ್ ಆದ್ರೆ ಬಹುಶಃ ಇಂಥ ಜಟಿರಿಠಥಿಚಿಛಟಜ ಟಜಟಠಡಿಥಿ ಇನ್ಮುಂದೆ ಸಿಗೋದು ದುರ್ಬರ ಎಂದು ನಿಶ್ಚಯಿದೆವು.

ಆಸಾಮಿಯ ಬಟ್ಟೆ ಚಿಂದಿ-ಚಿಂದಿಯಾಗಿಸಿ ಅವರನ್ನು ರಂಗಿನಲ್ಲಿ ಮುಳುಗಿಸಿದೆವು. 'ಪಾಪ ರಂಗು ಬ್ಯಾಡಾ, ಗಿಂಗು ಬ್ಯಾಡಾ' ಎಂದು ಯಾರ ಸಹವಾಸಕ್ಕೂ ಬಾರದೆ, ಯಾರಿಗೂ ಹೇಳದೆ ಅಂಡೆಪಿಕರ್ಿಯಂತೆ ಟೆರಸ್ ಮೇಲೆ ಅಡ್ಡಾಡುತ್ತಿದ್ದ ಸ್ನೇಹಿತ ಸಿದ್ದಯ್ಯನ ಸುಳಿವು ಸಿಕ್ಕಿದ್ದೇ ತಡ ಅವನ ಬೆನ್ನಟ್ಟಿ ಹೊಸ ಶ್ವೇತ ವಸ್ತ್ರಕ್ಕೆ ಕ್ಷಣದಲ್ಲಿ ಕಾಮನ ಬಿಲ್ಲಿನ ಬಣ್ಣಗಳಿಂದ ಆವೃತಗೊಳಿಸಿದೆವು. ಹೀಗೆ ನಮ್ಮ ಎಲ್ಲಾ ಸ್ನೇಹಿತರು ಸೇರಿ ರಂಗಿನ ಗುಂಗಲ್ಲಿ ರಂಗಾಗಿ ಹೋದೆವು.
ಅಷ್ಟೂ ಸಾಲದ್ದಕ್ಕೆ ರಸ್ತೆಯಿಂದ ಹಾದು ಹೋಗುತ್ತಿದ್ದ ದಾರಿಹೋಕರಿಗೂ ಸುಮ್ಮನೆ ಬಿಡಲಿಲ್ಲ. ಎಷ್ಟಾದರೂ ಕಪಿಬುದ್ಧಿ ಸುಮ್ಮನಿರಬೇಕಲ್ವಾ? ಮತ್ತೆ ನಮ್ಮ ವಿಶ್ವವಿದ್ಯಾಲಯದ ಗ್ರಂಥಪಾಲಕರ ಮನೆಯಲ್ಲಿ ಸ್ವೀಟ್ಸ್ ಮಾಡಿದ್ದಾರೆ ಅನ್ನೋ ವಿಷಯ ತಿಳಿದಿದ್ದೆ ತಡ ಲಬೊ... ಲಬೋ... ಬೊಬ್ಬೆ ಹಾಕುತ್ತಾ ಕ್ವಾರ್ಟಸರ್್ ಕಡೆಗೆ ಧಾವಿಸಿ ಅವರ ಮೇಲೂ ಒಲವಿನ ಬಣ್ಣವನ್ನು ಎರಚಿದೆವು. ಈ ರೀತಿ ಬಣ್ಣಗಳ ಹಬ್ಬ ಕ್ಯಾಂಪಸ್ನಲ್ಲಿಯೇ ನೆರವೇರಿತು. ಓ ಸಾರಿ ಮರೆತೆ ಬಿಟ್ಟೆ, ನೆನಪಿಗೋಸ್ಕರ ಫೋಟೋಗಳನ್ನು ಸಹ ಕ್ಲಿಕ್ಕಿಸಿಕೊಂಡೆವು. ಇಂಥ ಕಲರ್ಫುಲ್ ಡೇಸ್ನಲ್ಲಿ ಮತ್ತಷ್ಟು ಕಲರ್ ನೀಡಿದ ಈ ಬಣ್ಣದ ಹಬ್ಬಕ್ಕೆ ತುಂಬಾನೆ ಚಿರರುಣಿ ಹಾಗೂ ಯುವಜನಕ್ಕೂ ಸಹ, wish u all the best for all my dearest friends.....
ಆತೀಶ ಬಿ ಕನ್ನಾಳೆ
No comments:
Post a Comment