Sunday, December 25, 2011

Interview with Action Star

ಅಕ್ಷಯ್ ಫಿಟ್ನೆಸ್ ಗುಟ್ಟು..

ನೆಲದ ಮೇಲೆ ಚಂಡಿನಂತೆ ಪುಟಿಯುವ, ಪಾದರಸದಷ್ಟು ಚುರುಕು, ರಬ್ಬರ್ನಂತೆ ಹಾರುವ, ಅಪೂರ್ವ ನಟನೆ ಹಾಗೂ ಆಕರ್ಷಕ ಮೈಮಾಟದಿಂದ ಅಭಿಮಾನಿಗಳ ಮನಸಿನಲ್ಲಿ ಕ್ಷಯವಾಗದೇ ಉಳಿದುಕೊಂಡಿರುವ ಅಕ್ಷಯ್ ಅಭಿನಯ ನಿಜಕ್ಕೂ ರೋಚಕ.
ಫಿಸಿಕಲ್ ಫಿಟ್ನೆಸ್ಗೆ ಹೆಸರುವಾಸಿಯಾದ ಈತನ ಫಿಟ್ನೆಸ್ ಮಂತ್ರದ ಗುಟ್ಟು ಅವರದೇ ಮಾತಲ್ಲಿ ಕೇಳೋಣ,
ಅಕ್ಷಯ್ ದೃಷ್ಟಿಯಲ್ಲಿ ಆರೋಗ್ಯವಂತರೆಂದರೆ, ಬರೀ ದೈಹಿಕವಾಗಿ ಫಿಟ್ ಇರೋರಲ್ಲ. ಬದಲಿಗೆ, ಮಾನಸಿಕವಾಗಿಯೂ ಅಷ್ಟೇ ಸದೃಢರಾಗಿರಬೇಕು. ಅಂದರೆ, ಮಾನಸಿಕವಾಗಿ ಹಾಗೂ ದೈಹಿಕವಾಗಿ ಸಮತೋಲನ ಕಾಯ್ದುಕೊಂಡಿರಬೇಕು. ಸಮಯಕ್ಕೆ ಸರಿಯಾಗಿ ಮಲಗುವುದು ಹಾಗೂ ಏಳುವುದು, ಆಹಾರ ಸೇವನೆಯಲ್ಲಿ ಸಮತೋಲನ ಕಾಪಾಡಿಕೊಳ್ಳಬೇಕು. ಅಲ್ಕೋಹಾಲ್ ಹಾಗೂ ಮಾದಕ ಪದಾರ್ಥಗಳನ್ನು ಆದಷ್ಟು ಅವೈಡ್ ಮಾಡುವುದೇ ಸೂಕ್ತ ಎನ್ನುತ್ತಾರೆ `ಆ್ಯಕ್ಷನ್ ಕಿಂಗ್.'
ಮಾತು ಮುಂದುವರಿಸಿದ ಅವರು, ಇತ್ತೀಚೆಗೆ ಸಾಮಾನ್ಯವಾಗಿ ದೈಹಿಕ ಸದೃಢತೆಗಾಗಿ ಜೀಮ್ಗೆ ಮೊರೆ ಹೋಗುವುದು ಕಾಮನ್ ಫೆನಾಮಿನಾ ಆಗಿ ಪರಿಣಮಿಸಿದೆ. ಯಾರೂ ಕೂಡ ನ್ಯಾಚುರಲ್ ವ್ಯಾಯಾಮಗಳ ಮೂಲಕ ದೇಹ ಸಾಧನೆಗೆ ಮುಂದಾಗುತ್ತಿಲ್ಲ.
ಜೀಮ್ಗಿಂತ ಪಾಕರ್್ಅವರ್ ಸೂಕ್ತ:
ಒಂದು ವೇಳೆ ಜೀಮ್ಗೆ ಹೋಗುವುದ್ದಾದ್ದಲ್ಲಿ, ಕೇವಲ ಒಂದೇ ಅಂಗಾಂಗಗಳನ್ನು ಟಾಗರ್ೆಟ್ ಮಾಡಬಹುದು. ಆದರೆ, ಅದೇ ಪಾಕರ್್ ಅವರ್ಗೆ ಹೋದ್ದಲ್ಲಿ, ದೇಹದ ಪ್ರತಿಯೊಂದು ಅಂಗಕ್ಕೂ ವ್ಯಾಯಾಮ ದೊರಕುತ್ತದೆ. ಜತೆಗೆ ಖುಷಿ-ಖುಷಿಯಿಂದ ಯಾವುದೇ ತೊಂದರೆ ಇಲ್ಲದೇ ಸರಾಗವಾಗಿ ವ್ಯಾಯಾಮ ಮಾಡಬಹುದು. ಹೀಗಾಗಿ ಆದಷ್ಟು ಜೀಮ್ಗಿಂತ ಪಾಕರ್್ಅವರ್ ಬೆಟರ್ ಎಂದು ಹೇಳಿದರು.
ಮೆಡಿಟೇಷನ್ ಅಥವಾ ಮಾರ್ಷಲ್ ಲಾ:
ಬರೀ ದೈಹಿಕವಾಗಿ ಬಲಶಾಲಿಯಾಗಿದ್ದು, ಮಾನಸಿಕವಾಗಿ ದುರ್ಬಲರಾಗಿದ್ದರೆ, ವೇಸ್ಟ್. ಆದ್ದರಿಂದ ಫಿಸಿಕಲ್ ಜತೆಗೆ ಮೆಡಿಟೇಷನ್ ಕೂಡ ಮಾಡುವುದು ಒಳ್ಳೆಯದು. ಒಂದು ವೇಳೆ ಧ್ಯಾನದಲ್ಲಿ ಸಮಯ ಕಳೆಯಲಾಗದೆಂದರೆ, ಮಾರ್ಷಲ್ ಆಟರ್್ಗೆ ಮೊರೆ ಹೋಗುವುದು ಸೂಕ್ತ. ನಾನೂ ಕೂಡ ಹಾಗೇ ಮಾಡುತ್ತೇನೆ. ಇದು ನನಗೆ ಮಾನಸಿಕವಾಗಿ ಎಂಥ ಬಿರುಗಾಳಿ ಬಂದರೂ ಸಮರ್ಥವಾಗಿ ಎದುರಿಸಲು ಶಕ್ತಿ ನೀಡುತ್ತಾ ಬಂದಿದೆ.
ಪರ್ಸನಲ್ ಮ್ಯಾಟರ್:
ನಾನು ಬಾಲ್ಯದಿಂದ ಕ್ರೀಡೆಯನ್ನು ನನ್ನ ಜೀವನದ ಅವಿಭಾಜ್ಯ ಅಂಗವಾಗಿಸಿಕೊಂಡಿದ್ದೇನೆ. ಬೆಳಗ್ಗೆ ಬೇಗ ಎದ್ದು ಹೊರಾಂಗಣ ಕ್ರೀಡೆಗಳಾದ ಕ್ರಿಕೆಟ್ ಹಾಗೂ ಫುಟ್ಬಾಲ್ ಆಡುತ್ತಿದ್ದೇನೆ(ಶೂಟಿಂಗ್ ಇಲ್ಲದಿರುವಾಗ ಮಾತ್ರ). ಉಳಿದಂತೆ ಸೂರ್ಯಪುತ್ರನಂತು ನಾನು ಅಲ್ವೇ ಅಲ್ಲ.
ಪಂಚಿಂಗ್ ಲೈನ್:
ಇಂದಿನ ಪಾಲಕರು ತಮ್ಮ ಮಕ್ಕಳನ್ನು ತಮ್ಮ ಕೈಯಿಂದ ತಾವೇ ಹಾಳು ಮಾಡುತ್ತಿದ್ದಾರೆ. ಅವರು ದೈಹಿಕ ಹಾಗೂ ಮಾನಸಿಕವಾಗಿ ಸಮತೋಲನ ಕಳೆದುಕೊಳ್ಳಲು ಅವರೇ ಕಾರಣ. ಏಕೆಂದರೆ, ಇತ್ತೀಚಿನ ಪೀಳಿಗೆಗಳಿಗೆ ಅವರು, ಹೊರಾಂಗಣ ಆಟಗಳಾಡಲು ಅವಕಾಶ ನೀಡದೇ ಕಂಪ್ಯೂಟರ್ ವೈರಸ್ಗಳಾಗಿ ಮಾಡಿದ್ದಾರೆ. ಆದ್ದರಿಂದ ಹೀಗೆ ಮಾಡದೆ ಅವರು ತಾವು ಅನುಭವಿಸಿದ, ಕುಣಿದು ಕುಪ್ಪಳಿಸಿದ ಬಾಲ್ಯವನ್ನು ಅವರಿಗೆ ಧಾರೆ ಎರೆಯಲಿ ಎಂದು ಕರೆ ನೀಡಿದರು.

No comments:

Post a Comment