Thursday, December 1, 2011

ಸ್ಮಾಲ್ ಬಿಗಿನಿಂಗ್ ಗ್ರೇಟ್ ಎಂಡ್...


ಓದಿದ್ದು ಡಿಗ್ರಿ ಮಾಡಿದ್ದು ಅಗ್ರಿ
ಬೆಳಗ್ಗೆ ಭಾನುವಿನ ಹೊಂಗಿರಣ ಭೂಮಿಗೆ ಬರುವ ಮುನ್ನವೇ ಮೈನುಡುಗುವ ಚಳಿಯಲ್ಲಿ ಸೈಕಲ್ ತುಳಿಯುತ್ತಾ ಯಾವ ಭಯವಿಲ್ಲದೇ ತೋಟದ ಕಡೆ ಪಯಣ ಬೆಳಸುತ್ತಾರೆ. ಏಣಿ ಏರಿ ಅಂಬು ಎಲೆಗಳನ್ನು ಕೀಳುತ್ತಾ, ಗುದ್ದಲಿ ಹಿಡಿದು ತೋಟದಲ್ಲಿ ಕೆಲಸಮಾಡುತ್ತಾರೆ ಈ ಮಹಾತಾಯಿ.
ಇಲ್ಲಿವರೆಗೂ ಪ್ರತಿಯೊಬ್ಬ ಯಶಸ್ವಿ ಪುರುಷನ ಹಿಂದೆ ಒಬ್ಬ ಮಹಿಳೆ ಇರುತ್ತಾಳೆ ಎಂದು ಕೇಳಿದ್ದೇವೆ; ನೋಡೂ ಇದ್ದೇವೆ. ಆದರೆ, ಒಬ್ಬ ಮಹಿಳೆ ಆಕಾಶದೆತ್ತರದ್ದನ್ನು ಸಾಧಿಸಬೇಕಾದರೆ, ಅವಳ ಹಿಂದೆ ಯಾರಿರುತ್ತಾರೆ ಎಂಬ ಪ್ರಶ್ನೆಗೆ ಉತ್ತರ ಇಲ್ಲಿದೆ. ಪತಿರಾಯನ ಪ್ರೋತ್ಸಾಹ ಹಾಗೂ ಸಾಮರಸ್ಯ ಜೀವನದಿಂದ ಏನೂ ಬೇಕಾದರೂ ಸಾಧಿಸಬಹುದು ಎನ್ನುವುದಕ್ಕೆ ಸುನೀತಾ ಜ್ವಲಂತ ನಿದರ್ಶನ.
ಈಕೆಯನ್ನು ಯಾರೇ ಆಗಲಿ `ಹೆಣ್ಣೊಂದು ಮನಸು ಮಾಡಿದರೆ ಕೊರಡು ಕೊನರುವುದಯ್ಯ' ಎಂಬ ಶರಣರ ಉಕ್ತಿಯನ್ನು ಉವಾಚಿಸದಿರಲು ಸಾಧ್ಯವೇ ಇಲ್ಲ. ಅಷ್ಟೊಂದು ಆಕರ್ಷಕ ವ್ಯಕ್ತಿತ್ವ ಹಾಗೂ ಮೈಮನ ನವಿರೇಳಿಸುವ ಕಾರ್ಯಗಳನ್ನು ಮಾಡಿದ್ದಾರೆ. ಹೆಣ್ಣು ಕೃಷಿಕನನ್ನು ಮದುವೆಯಾದಲ್ಲಿ ಹೆಚ್ಚೆಂದರೆ, ಗಂಡನಿಗೆ ರೊಟ್ಟಿ ಕೊಡಬಹುದು ಅಥವಾ ಕಳೆ ಕೀಳುವಲ್ಲಿ ಸಹಾಯ ಮಾಡಬಹುದಷ್ಟೆ. ಆದರೆ, ಬರಡು ಭೂಮಿಯನ್ನೂ ಅಚ್ಚ ಹಸುರಾಗಿ ನಿಲ್ಲಿಸಬಹುದು, ಲಕ್ಷಾಂತರ ಲಾಭ ತರುವಂತೆ ಕೃಷಿಯನ್ನು ಮಾಡುವುದೆಂದರೆ ಅದು ಕನಸಿನ ಮಾತೇ ಸರಿ. ಅದರಲ್ಲೂ ಪದವೀಧರೆಯಾಗಿದ್ದರೆ, ತೋಟದ ಕೆಲಸಗಳಿಂದ ತುಸು ದೂರು ಇರುತ್ತಾರೆ. ನಾಜೂಕು ಲಲನೆಯರು ಯಾವುದೇ ರೀತಿಯ  ಕಷ್ಟದ ಕೆಲಸಕ್ಕೆ ಕೈಹಾಕೋದಿಲ್ಲ. ಅವರಿಗೇನಿದ್ದರೂ ಅಡುಗೆ ಮನೆಯೇ ಪ್ರಪಂಚ.
ಆದರೆ, ಇವೆಲ್ಲವನ್ನೂ ಮೀರಿ ಸಾಧನೆ ಗೈದ ಸುನೀತಾ ಹುಟ್ಟಿದ್ದು ಬೆಟ್ಟಗುಟ್ಟಗಳ ನಾಡು ಶಿವಮೊಗ್ಗದಲ್ಲಿ. ಬೆಳೆದು, ತನ್ನ ಬಿಎ ಗ್ರ್ಯಾಜುಯೇಷನ್ ಸಹ ಅಲ್ಲಿಯೇ ಮುಗಿಸಿದರು. ಬಳಿಕ ಮಹಿಳೆಯರ ಸಹಜ ಪ್ರವೃತ್ತಿ ಹಾಗೂ ಮನೆಯವರ ಮಜರ್ಿಯಂತೆ ರಾಣೆಬೆನ್ನೂರು ತಾಲ್ಲೂಕಿನ ಮದೇನೂರು ಗ್ರಾಮದ ಶಂಕರೇಗೌಡ ಎಂಬುವವರೊಂದಿಗೆ ಹಸೆ ಮಣೆ ಏರಿದರು. ಪತಿರಾಯ ಕೂಡ ಬಿಎ ಪದವೀಧರ. ಆದರೆ, ಅವರಿಗೆ ಸಿನಿಮಾದಲ್ಲಿ ನಟಿಸುವ ವಿಚಿತ್ರ ಹುಚ್ಚು. ಗಾಂಧಿನಗರದಲ್ಲಿ ವಾಸ್ತವ್ಯ ಹೂಡಿ, ಬಳಿಕ ಅವಕಾಶ ದೊರಕದ ಕಾರಣ ಬಂದ ದಾರಿಗೆ ಸುಂಕವಿಲ್ಲವೆಂದು ಊರಿಗೆ ವಾಪಸಾದರು. ಬಳಿಕ ಸತಿಪತಿ ಇಬ್ಬರೂ ಕೃಷಿಯಲ್ಲಿ ತೊಡಗಿಕೊಂಡರು. ಅಲ್ಲಿಂದ ಪ್ರಾರಂಭವಾದ ಅವರ ಜೀವನ ಇಂದು ಇಡೀ ಊರಿಗೆ ಊರೇ ಹೊಗಳುವ ಹಂತಕ್ಕೆ ಬಂದು ನಿಂತಿದೆ.  ಇದಕ್ಕೆ ಅಂಕುರಾರ್ಪಣೆ ಆದದ್ದು ಸುನೀತಾ ಅವರಿಂದ.
ಪ್ರಾರಂಭದಲ್ಲಿ ಮಳೆ ಆಧಾರಿತ ಉತ್ತರ ಕನರ್ಾಟಕದ ಕೃಷಿಗೆ ಒಗ್ಗಿಕೊಳ್ಳಲು ಸ್ವಲ್ಪ ಕಷ್ಟವಾದರೂ ಬಳಿಕ ಅದನ್ನೇ ಸವಾಲಾಗಿ ಸ್ವೀಕರಿಸಿದ ಈ ದಂಪತಿ ಅದನ್ನೇ ಒಗ್ಗಿಸಿಕೊಂಡರು. ಪ್ರಥಮಾರ್ಧದಲ್ಲಿ ಸುನೀತಾ ಬೆಂಗಾಡು ತೋಟನೋಡಿದಾಗ ಇಲ್ಲಿ ಅಚ್ಚ ಹಸುರಾದ ಅಡಿಕೆ ತೋಟ ನಿಮರ್ಾಣವಾಗಬಹುದೆಂದು ಖುದ್ದು ಅವರೇ ಕನಸು ಮನಸ್ಸಿನಲ್ಲೂ ಯೋಚಿಸಿರಲಿಲ್ಲ. ಆದರೆ, ಮನಸ್ಸೊಂದಿದ್ದರೆ ವಿಧಿಯನ್ನೂ ಸ್ಲೇಟು ಲಿಖಿತ ಬರಹದಂತೆ ಬದಲಿಸಬಹುದು ಎನ್ನುವುದಕ್ಕೆ ಇವರೇ ತಾಜಾ ಉದಾಹರಣೆ.
ಸುನೀತಾ ಮೂಲತಃ ಕೃಷಿಕ ಕುಟುಂಬದಿಂದಲೇ ಬಂದಿದ್ದು, ಅವರು ವಿದ್ಯಾಥರ್ಿನಿಯಾಗಿರುವಾಗಲೇ ವಿದ್ಯಾಭ್ಯಾಸದ ಜತೆಗೆ ಅಡಿಕೆ ತೋಟದಲ್ಲಿ ತಮ್ಮ ಬಿಡುವಿನ ವೇಳೆಯಲ್ಲಿ ಕೆಲಸಮಾಡುತ್ತಿದ್ದರಂತೆ. ಹೀಗಾಗಿ ಕೃಷಿ ಅಂದರೆ ಇವರಿಗೆ ಅಚ್ಚುಮೆಚ್ಚು ಎಂದು ಖುಷಿ-ಖುಷಿಯಿಂದ ಹೇಳಿಕೊಂಡರು.

ಅಷ್ಟಕ್ಕೂ ಸಾಧಿಸಿದ್ದೇನು?
ಈ ಹಿಂದೆಯೂ ಕೃಷಿ ಕ್ಷೇತ್ರದಲ್ಲಿ ಸಾದನೆಗೈದ ಮಹಿಳೆಯರು ಹಲವು. ಹಾಗೇ ಅವರು ಮುಖ್ಯವಾಹಿನಿಗೆ ಬಂದು ಪ್ರಶಸ್ತಿಗೂ ಭಾಜನರಾಗಿದ್ದಾರೆ. ಆದರೆ, ವಿಪಯರ್ಾಸವೆಂದರೆ, ಸುನೀತಾರಂಥ ಅನೇಕ ಮಹಿಳೆಯರು ಇನ್ನೂ ಬೆಳಕಿಗೆ ಬಾರದೆ ಎಲೆಮರೆ ಕಾಯಿಯಂತೆ ಕಾರ್ಯನಿರ್ವಹಿಸುತ್ತಿದ್ದಾರೆ.
ಇವರು ಸಾಧಿಸಿದ್ದು ಅಷ್ಟಿಷ್ಟಲ್ಲ. ಆಲೋಚನೆಗೆ ಸಿಗದು, ಅಕ್ಷರಗಳಿಗೆ ಎಟುಕದು. ಸಾಮಾನ್ಯವಾಗಿ ಎಲ್ಲ ಇರುವೆಡೆ ಕೃಷಿ ಮಾಡುವುದೆಂದರೆ, `ಯಚ್ಚ(ಮಸಾಲೆ) ಕೊಟ್ರೆ ಹುಚ್ಚಿಯೂ ಅಡುಗೆ ಮಾಡಬಲ್ಲಳು' ಎಂಬ ಹೈದ್ರಾಬಾದ್ ಕನರ್ಾಟಕದ ಪ್ರತಿಷ್ಠಿತ ಗಾದೆಯಂತೆ. ಆದರೆ, ನೂರಾರು ಸಮಸ್ಯೆ ಸವಾಲುಗಳ ಮಧ್ಯೆ, ಹಲವಾರು ಅನಾನುಕೂಲಗಳ ನಡುವೆಯೇ ಕೃಷಿಗಿಳಿದು ಆಕಾಶಕ್ಕೆ ಎಟುಕುವಂಥ ಅಡಿಕೆ ಮರಗಳನ್ನು, ಜೌಷಧಿಗಿಡಗಳನ್ನು, ಗಿಡಮೂಲಿಕೆಗಳನ್ನು, ತರಕಾರಿ, ಹಣ್ಣುಹಂಪಲು, ತೆಂಗು, ಬಾಳೆ, ವೀಳ್ಯದೆಲೆ, ಮಿಶ್ರಬೆಳೆ, ಶ್ರೀಗಂಧ ಮುಂತಾದ ಬೆಳೆಗಳನ್ನು ಬೆಳೆಸುವುದೆಂದರೆ ಸಾಮಾನ್ಯದಾದುದ್ದೇನಲ್ಲ.
ತೋಟದ ಸುತ್ತ ಪಕ್ಷಿನೋಟ:
ಅಡಿಕೆ: ಈ ಹಿಂದೆನೆ ಹೇಳಿರುವಂತೆ ಇಲ್ಲಿ ಇವರು ಬೆಳೆಸಿರುವ ಪ್ರಮುಖ ಬೆಳೆ ಅಡಿಕೆ. ಸುಮಾರು  1100 ಅಡಿಕೆ ಮರಗಳನ್ನು ಬೆಳೆಸಿದ್ದು, ಈ ಹಿಂದಿನ ಇಳುವರಿಯಲ್ಲಿ ಅವರಿಗೆ 5 ಕೀಲೂ ಅಡಿಕೆ ಬಂದಿದೆಯಂತೆ. ಇದಕ್ಕೆ ಇವರು 15 ದಿನಕ್ಕೋಮ್ಮೆ ನೀರು ಕೊಡುತ್ತಾ ಬಂದಿದ್ದಾರೆ.
ತೆಂಗು: ಇಲ್ಲಿ 80 ತೆಂಗಿನಗಿಡಗಳನ್ನು ನೆಟ್ಟಿದ್ದಾರೆ, ಹಿಂದಿನ ವರ್ಷ ಸುಮಾರು 50 ಸಾವಿರ ಆದಾಯ ಬಂದಿದೆಯಂತೆ. ಈ ವರ್ಷವೂ ಬೆಳೆ ಚೆನ್ನಾಗಿದ್ದು, ಕಳೆದ ಬಾರಿಗಿಂತ ಉತ್ತಮ ಇಳುವರಿ ಬರಲಿದೆ ಎಂದು ಹರ್ಷದಿಂದ ನುಡಿದರು.
ಬಾಳೆಗಿಡ: ಅಡಿಕೆ ಮರಗಳ ಮಧ್ಯೆ ಏಲಕ್ಕಿ ಬಾಳೆಯನ್ನೂ ಬೆಳೆದಿದ್ದಾರೆ. ಸುಮಾರು ಒಂದು ಸಾವಿರ ಬಾಳೆ ಗಿಡಗಳಿವೆ. ಈ ಬಾಳೆಯನ್ನು ನಾಟಿಮಾಡಿ 10 ವರ್ಷ ಕಳೆದರೂ ಇಂದಿಗೂ ಅದೇ ಬೆಳೆದುಕೊಂಡುಬಂದಿದೆ. ಈ ಬಾಳೆಯಲ್ಲಿ ಅವರು ಯಾವುದೇ ರೀತಿಯ ಕೆಲಸ ಮಾಡಲ್ವಂತೆ. ಇಲ್ಲಿ ಒಣಗಿ ಬಿದ್ದ ಬಾಳೆ ಎಲೆಗಳೇ ಅದಕ್ಕೇ ಗೊಬ್ಬರ ಹಾಗೂ ಫಲವತ್ತಾದದ್ದು ಎನ್ನುತ್ತಾರೆ ಸುನೀತಾ.
ಕಾಳು ಮೆಣಸಿನ ಕಾಯಿ: 100 ಕಾಳು ಮೆಣಸಿನ ಬಳ್ಳಿ ಹಾಕಲಾಗಿದೆ. ಹಿಂದಿನ ವರ್ಷವಷ್ಟೇ ಇದರ ಇಳುವರಿ ಪ್ರಾರಂಭವಾಗಿದ್ದು, ಈ ಬಾರಿ ಕೇವಲ 1 ಕೆಜಿ (ಮೊದಲನೇ ಇಳುವರಿ) ದೊರೆತಿದೆ. ಅದೇ ರೀತಿಯಲ್ಲಿ ಒಂದು ಎಕರೆ ಭೂಮಿಯಲ್ಲಿ ಅಂಬುಎಲೆಯನ್ನು ಬೆಳೆಸಿದ್ದಾರೆ. ಇವರು ಎಲೆ ಬಳ್ಳಿಗೆ ಬೇರೆ ರೈತರು ತೆಗೆದುಕೊಳ್ಳುವಷ್ಟು ಕಾಳಜಿಯನ್ನು ತೆಗೆದುಕೊಂಡಿಲ್ಲ. ಈ ಬಳ್ಳಿ ತನ್ನಷ್ಟಕ್ಕೆ ತಾನೇ ಬೆಳೆದಿದೆ. ಆದರೂ ಈ ಎಲೆಯಿಂದ 50 ಸಾವಿರ ರೂ. ಲಾಭ ಬಂದಿರುವುದಾಗಿ ತಿಳಿಸಿದರು. ಇದೆಲ್ಲಕ್ಕೂ ಜೀವಂತ ಕಾವಲಾಗಿ ಸುಬಾಬುಲ್ ಗಿಡಗಳನ್ನು ಬೆಳೆಸಿದ್ದಾರೆ. ಇದೂ ಕೂಡ ಅಷ್ಟೆ. ಪ್ರತಿ ಎರಡು ವರ್ಷಕ್ಕೊಮ್ಮೆ ಇವುಗಳ ಕಟಾವು ಮಾಡಿ ದಾಂಡೇಲಿ ಕಾಖರ್ಾನೆಗೆ ಮಾರಾಟ ಮಾಡುತ್ತಾರೆ. ಇದರಿಂದ 4 ಲಕ್ಷ ಆದಾಯ ಬಂದಿರುವುದಾಗಿ ಹೇಳಿದರು. ಜತೆಗೆ ಶ್ರೀಗಂಧ ಕೂಡ ಬೆಳೆಸಲಾಗಿದೆ. ಆದರೆ, ಇದರಿಂದ ನಿರೀಕ್ಷತ ಲಾಭ ದೊರೆತಿಲ್ಲ ಎನ್ನುತ್ತಾರೆ ಶಂಕರೇಗೌಡ.
ಸಾಮಾನ್ಯವಾಗಿ ಇಂದಿನ ರೈತರು `ಅಗಸನಿಗೆ ನೀರಿನ ಬರ' ಎಂಬಂತೆ ಬೇರೆಯವರ ಕಡೆ ಆಹಾರಕ್ಕೆ ಬೇಕಾದ ತರಕಾರಿಯನ್ನು ಖರೀದಿಸುತ್ತಾರೆ. ಆದರೆ, ಈ ದಂಪತಿಗಳು ಮಾತ್ರ ದಿನನಿತ್ಯ ಅವಶ್ಯಕವಾದ (ಬದನೆ, ಹಾಗಲಕಾಯಿ, ಬೆಂಡೆ, ಹೀರೆಕಾಯಿ, ನುಗ್ಗಿ, ಕುಂಬಳ, ಮರಗೆಣಸು, ತೊಗರಿಬೆಳೆ) ಸೇರಿದಂತೆ ವಿವಿಧ ತರಕಾರಿಗಳನ್ನು ತಾವೇ ಬೆಳೆದು ಬಳಸುತ್ತಾರೆ. ಇಷ್ಟೇ ಅಲ್ಲದೇ ಸಾಂಬಾರು ಪದಾರ್ಥ(ಏಲಕ್ಕಿ, ಕಾಫಿ, ಚಕ್ಕೆ, ಅರಿಶಿಣ, ಕರಿಬೇವು ಇತ್ಯಾದಿ)ಗಳನ್ನು ಕೂಡ ಬೆಳಸುತ್ತಾರೆ. ಚಿಕ್ಕಪುಟ್ಟ ಕಾಯಿಲೆಗಳಿಗೆ ಮದ್ದಾಗಿ ಬಳಸಬಲ್ಲ ದೊಡ್ಡಪತ್ರೆ, ಶುಂಠಿ, ಪೇಪರ್ ಗಿಡ, ಬೆಳ್ಳುಳ್ಳಿ, ನಿಂಬೆ, ಚಕ್ರಮುನಿ ಹೀಗೆ ಹತ್ತು ಹಲವಾರು ಉಪಬೆಳೆಗಳನ್ನು ಬೆಳೆದಿದ್ದಾರೆ.
ಪಕ್ಕಾ ನಿಸರ್ಗವಾದಿಗಳು ಈ ದಂಪತಿಗಳು:
ಇವರು ಪಕ್ಕಾ ಪರಿಸರವಾದಿಗಳು. ನಿಸರ್ಗ ಹಾಳು ಮಾಡುವ ಯಾವುದೇ ವಸ್ತುವನ್ನು ಬಳಸೋದಿಲ್ಲ. ತೋಟಕ್ಕೆ ಹೋಗುವಾಗ ಗಾಡಿಯನ್ನೂ ಬಳಸದೆ ಸೈಕಲ್ ಅನ್ನು ಬಳಸುತ್ತಾರೆ. ಇದರಿಂದ ವ್ಯಾಯಾಮವಾಗುತ್ತದೆ ಹಾಗೂ ಆರೋಗ್ಯದಿಂದಿರಲು ಸಾಧ್ಯ. ಜತೆಗೆ ಪರಿಸರಕ್ಕೂ ಯಾವುದೇ ಹಾನಿಯಾಗುವುದಿಲ್ಲ ಎನ್ನುತ್ತಾರೆ ಸುನೀತಮ್ಮ.
ಪ್ಲಾಸ್ಟಿಕ್ ಬ್ಯಾಗ್ನಲ್ಲಿ ತಿಂದು ಬಿಸಾಡಿ ಓಡುವ ಜಮಾನಾ ಇದು. ಆದರೆ, ಇವರು ಮಾತ್ರ ಬಾಳೆ ಎಲೆ ಬಿಟ್ಟು ಬೇರೆ ಯಾವುದರಲ್ಲೂ ಆಹಾರ ಸೇವಿಸುವುದಿಲ್ಲ. ಅಷ್ಟೆ ಯಾಕೆ ಅಡುಗೆಗಾಗಿ ಬಳಸುವ ಪಾತ್ರೆ ಕೂಡ ಮಣ್ಣಿನದ್ದೇ ಆಗಿವೆ. ಬೆಳಗ್ಗೆ ಇವರು ಟಿಫನ್(ತಿಂಡಿ)ನಲ್ಲಿ ಕೇವಲ ಹಣ್ಣುಹಂಪಲು ಮತ್ತು ಗೆಡ್ಡೆಗೆಣಸುಗಳನ್ನೇ ತಿನ್ನುತ್ತಾರೆ.
ಎಲ್ಲದಕ್ಕಿಂತ ವಿಶೇಷವೆಂದರೆ, ಇವರು ಬೆಳೆ, ಗಿಡ ಹಾಗೂ ಮರಗಳಿಗೆ ಇಲ್ಲಿವರೆಗೂ ಯಾವುದೇ ರೀತಿಯ ಗೊಬ್ಬರವನ್ನು ಬಳಸಿಲ್ಲ. ಎರಡು ಎಳೆಹುಳು ತೊಟ್ಟಿಗಳನ್ನು ಕಟ್ಟಿಕೊಂಡಿದ್ದು, ಅದರ ಮೂಲಕ ನೈಸಗರ್ಿಕ ಗೊಬ್ಬರವನ್ನು ಉತ್ಪಾದಿಸಿ ಅದನ್ನು ಬೆಳೆಗಳಿಗೆ ಬೆಳೆಸುತ್ತಾರೆ.  ಒಂದು ಮೊಬೈಲ್ ಬಯೋಗ್ಯಾಸ್ ಅನ್ನು ಹೊಂದಿದ್ದಾರೆ.
ಒಂದು ಬೆಳೆಯನ್ನೇ ಬೆಳೆಸುವಲ್ಲಿ ನೆಲಕಚ್ಚುತ್ತಿರುವ ಈ ಕಾಲದಲ್ಲಿ ಪದವಿ ಮುಗಿಸಿ, ಅದೂ ತಾನು ಹೆಣ್ಣೆಂಬ ವಿಚಾರ ಬದಿಗೊತ್ತಿ ಯಾವ ಕೂಲಿ ಕಾಮರ್ಿಕರ ಸಹಾಯವಿಲ್ಲದೇ ಗಂಡನೊಂದಿಗೆ ಜತೆಗೂಡಿ ಸ್ವಬಲ ಹಾಗೂ ಆತ್ಮವಿಶ್ವಾಸದಿಂದ ಸುನೀತಾ ಸಾಧಿಸಿರುವುದು ವಿರಳಾತಿವಿರಳ. ಇಂಥವರನ್ನು ಮುಖ್ಯವಾಹಿನಿಗೆ ತಂದು ಸನ್ಮಾನಿಸಿ, ಪ್ರೋತ್ಸಾಹಿಸುವುದು ಸಕರ್ಾರ ಮಾತ್ರವಲ್ಲದೇ ಮಹಿಳಾ ಸಂಘಟನೆಗಳ ಆದ್ಯ ಕರ್ತವ್ಯ. ಹೀಗೆ ಮಾಡಿದ್ದಲ್ಲಿ ನಮ್ಮ ಸಮಾಜದಲ್ಲಿರುವ ಮಹಿಳೆಯರನ್ನು ಪ್ರತ್ಯಕ್ಷ ಅಥವಾ ಪರೋಕ್ಷವಾಗಿ ಪ್ರೋತ್ಸಾಹಿಸಿದಂತಾಗುವುದಲ್ಲದೇ, ಮಹಿಳಾ ಸಶಕ್ತಿಕರಣಕ್ಕೆ ಬೃಹತ್ ನಾಂದಿಯಾಗಬಲ್ಲದು.
ಈ ಲೇಖನ ಒಂದು ಸಣ್ಣ ಪ್ರಯತ್ನ. ಇನ್ನೂ ಮಹಿಳಾ ಸಂಘಸಂಸ್ಥೆಗಳು ಜಾಗೃತಗೊಂಡಲ್ಲಿ ಈ ಲೇಖನ ಹಾಗೂ ಆ ಮಹಾತಾಯಿಯ ಶ್ರಮ ಸಾರ್ಥಕವಾದೀತು.
ಆತೀಶ್ ಬಿ. ಕೆ.
http://www.ekanasu.com/2011/12/blog-post_2212.html
 

3 comments:

  1. ಶ್ರೀ.ಅತೀಶ್ ಬಿ.ಕೆ. ಅವರಿಗೆ ನಮಸ್ಕಾರಗಳು

    ಈ-ಕನಸು ಅಂತರ್ಜಾಲ ಪತ್ರಿಕೆಯಲ್ಲಿ ಪ್ರಕಟವಾಗಿದ್ದ ನಿಮ್ಮ "ಓದಿದ್ದು ಡಿಗ್ರಿ ಮಾಡಿದ್ದು ಅಗ್ರಿ " ಲೇಖನದ ಕೊಂಡಿಯನ್ನು ನನ್ನ ಫೇಸ್-ಬುಕ್ ಗೋಡೆಯಲ್ಲಿ ಹಂಚಿಕೊಂಡಿದ್ದೆ .

    ನಿಮ್ಮ ಲೇಖನಕ್ಕೆ ನನ್ನ ಫೇಸ್-ಬುಕ್ ಗೋಡೆಯಲ್ಲಿ ವ್ಯಕ್ತ ಪಡಿಸಿದ ಪ್ರತಿಸ್ಪಂದನಗಳು.

    -----------
    Arathi Ghatikar , Dubai –United Arab Emirates :
    sunutha avarige abhinandanegalu, a barahada mooolaka avarannu parichayisida nimagoo (atheesh b.k ) kooda !!krishi kshetra dalli sunitha avara sadhane , dampathigala parisara prema mechuvanthahadu !! ivarige nijakku sarkaardinda protsaaha , haagu sanmmanakke arharu !!
    ------

    Prashanth Nandigavi , Pune :
    wow namma Ranebennuru nalli entha vabba great mahile edale anta tilisi kottidakke tumba thanks.
    -------------------

    Veena Ambi , Boston –USA :
    Ramachandra avare , neevu haako postings tumbaa inspiring aagi erutte.....

    --------------------

    Sumathi Muddenahalli, Ohio –USA:
    share maadikoLtiddeeni, oLLeya saadhane! Thanks!

    ----------

    ವಂದನೆಗಳು.

    -ಪ.ರಾಮಚಂದ್ರ,
    ರಾಸ್ ಲಫ್ಫಾನ್, ಕತಾರ್.

    ReplyDelete