Saturday, October 22, 2011

ಇಲ್ಲ್ಲೂ ನೀನೆ ಎಲ್ಲೂ ನೀನೆ ಎಲ್ಲೆಲ್ಲೂ ನೀನೆ..

ಹೊಸ ಗಾನಾ ಬಜಾನಾ..
ಅಪಸ್ವರದ ಮಧ್ಯೆ ಮೆಟ್ರೋ ಮೋಡಿ..!
ಮೊನ್ನೆ ಬೆಂಗಳೂರಿಗರ ಖುಷಿಗೆ ಪಾರವೇ ಇರಲಿಲ್ಲ. ಅಂತೂ ಬಹುದಿನದ ಕನಸು ನನಸಾಯಿತು ಎಂಬ ಸಾರ್ಥಕತೆ ಜತೆಗೆ ದಕ್ಷಿಣ ಭಾರತದಲ್ಲಿಯೇ ಇದೇ ಮೊದಲು ಕನರ್ಾಟಕದಲ್ಲಿ ಮೆಟ್ರೋ ಟಿಸಿಲೊಡೆದು ಹಳಿಗಳ ಮೇಲೆ ರೊಂಯ್ ಗುಟ್ಟುತ್ತ ಹೋಗುವಾಗ ಎಲ್ಲರ ಕಣ್ಣಲ್ಲೂ ಧನ್ಯತೆಯ ಭಾವ.
ಹಲವು ವರ್ಷಗಳಿಂದ ಎಲ್ಲರ ಗಮನ ತನ್ನತ್ತ ಸೆಳೆದಿದ್ದ `ನಮ್ಮ ಮೆಟ್ರೋ'ಗೆ ಕೊನೆಗೂ ಉದ್ಘಾಟನೆಯ ಭಾಗ್ಯ ಲಭಿಸಿದೆ. ವಿಧಾನಸೌಧ ಹಾಗೂ ಪರಪ್ಪನ ಅಗ್ರಹಾರ ನಡುವಣ ಸಂಬಂಧ  ಗಟ್ಟಿಗೊಳ್ಳುತ್ತಿರುವ ಜತೆಜತೆಗೆ ಈ ಬೆಳವಣಿಗೆ ನಡೆಯಿತು. ತಾನೇ ಮೆಟ್ರೋ ಉದ್ಘಾಟನೆ ನೆರವೇರಿಸಬೇಕು ಎಂಬ ವಾಂಛೆಯಲ್ಲಿದ್ದ ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡ್ಯೂರಪ್ಪ ಅವರ ಅನುಪಸ್ಥಿಯಲ್ಲಿಯೇ ಈ `ಐ-ಘಟನೆ' ನಡೆದು ಪರದೆಯತ್ತ ಸರಿಯಿತು. ಆಕಡೆ ಕಂಬಿಯ ಮೇಲೆ ಅಂಬೇಗಾಲಿಡುತ್ತಾ ಮೆಟ್ರೋ ಮುನ್ನೆದಿತ್ತು. ಈಕಡೆ ಕಂಬಿಯ ಹಿಂದೆ ಸಂಘಟನೆಯ ನಾಯಕ ಅಂಬ್ಯೂಲೆನ್ಸ್ನಿಂದ ಅಂಬ್ಯೂಲೆನ್ಸ್ಗೆ ಹಾರಿ ಆಸ್ಪತ್ರೆಯಿಂದ ಆಸ್ಪತ್ರೆಗೆ ಹಾರುವ ಯತ್ನದಲ್ಲಿದ್ದರು. ಮತ್ತೊಂದು ಕಡೆ ಇವರ ಆಪ್ತರೆನಿಸಿಕೊಳ್ಳುವ ಭಾಜಪ ಸದಸ್ಯರು ಖುಷಿಯ ಕ್ಷಣಗಳನ್ನು ಮೆಟ್ರೋ ರೈಲಲ್ಲಿ ಕಳೆಯುತ್ತಿದ್ದರು. ಇನ್ನೊಂದೆಡೆ ಕೇಂದ್ರವನ್ನೇ ಕದಲಿಸಿದ ಸೆಡ್ಯೂರಪ್ಪ ಹತಾಷೆಯ ನಡುವೆ ತನ್ನ ಕ್ಷಣಗಳನ್ನು `ಗಾಂಧೀ ಭಯಾಗ್ರಫಿ'ಯ ಪುಟಗಳನ್ನು ಭಕ್ತಿಪೂರ್ವಕವಾಗಿ ಎಣಿಸುವ ಪ್ರಯತ್ನದಲ್ಲಿದ್ದರು.
ನಾನು ಈ ಹಿಂದೆ `ಖರಾಬ್ ಟೈಂ' ಅನ್ನೋದರ ಬಗ್ಗೆ ಕೇಳಿದ್ದೆ. ಆದರೆ, ಹೀಗೂ ಇರಬಹುದು ಎಂದೂ ಎಂದೆಂದೂ ಊಹಿಸಿರಲಿಲ್ಲ. ಒಂದು ಟೈಂನಲ್ಲಿ ಕುಬೇರರಂತೆ ಮೆರದ ಇವರೆಲ್ಲ ಹೀಗೂ ಜೈಲಲ್ಲಿ ಕಾಲ ಕಳೆಯುತ್ತಾರೆ ಎಂದೆನಿಸಿರಲಿಲ್ಲ. ಇದೆಲ್ಲ ನೋಡುವಾಗ `ಉಪ್ಪು ತಿಂದವರು ನೀರು ಕುಡಿಯಲೇಬೇಕು' ಎಂಬ ಮಾತು ನೆನಪಾಯ್ತು.
ಏನೇ ಇರ್ಲಿ, `ಹತ್ತರ ಜತೆ ಹನ್ನೊಂದು' ಎಂಬಂತೆ ಪರ ರಾಜ್ಯದ ಮುಖ್ಯಮಂತ್ರಿ ಸಹ ಕೇಂದ್ರ ಕಾರಾಗ್ರಹಕ್ಕೆ ಬಂದು ವಿಸಿಟ್ ಕೊಟ್ಟು ಹೋಗೋ ರೇಂಜಿಗೆ ನಮ್ಮ ಕನರ್ಾಟಕ ಕಾರಾಗೃಹಗಳು ಬಂದಿವೆ ಅಂದ್ರೆ ಒಂದೊಂದು ಸಾರಿ `ಡೌಟ್' ಸ್ಟಾಟರ್್ ಆಗುತ್ತೆ! ನಮ್ಮ ಕಾರಾಗೃಹದ ದ್ವಾರಗಳಿಗೆ ಇಷ್ಟೊಂದು ಕಸುವು ಬಂದುದ್ದಾದ್ರು ಎಲ್ಲಿಂದ? ಲೋಕಾಯುಕ್ತ ವಿಶೇಷ ನ್ಯಾಯಾಲಯದ ನ್ಯಾಯಾಧೀಶರಿಗೆ ಇಷ್ಟೊಂದು ಆನೆಬಲ ಎಲ್ಲಿಂದ ಬಂತು. ಇದೆಲ್ಲಾ ಸಂತೋಷ ಹೆಡ್ಗೆ ಅವರು ನೀಡಿದ ಗಣಿ ವರದಿ ಬಳಿಕವೇ ಆದ ಪಾಸಿಟಿವ್ ಇಂಪೆಕ್ಟ್ ಅಲ್ವಾ..?
ಒಟ್ಟಲ್ಲಿ ನಮ್ಮ ನ್ಯಾಯಾಂಗ ವ್ಯವಸ್ಥೆಯ ಮೇಲೆ ಜನರಿಗೆ ನಂಬಿಕೆ ಉಲ್ಭಣಿಸಿದೆ. ಬೆಳಿಗ್ಗೆಯಿಂದ ರಾತ್ರಿವರಗೂ ಹಗರಣಗಳನ್ನು ನೋಡಿ ಜನ ಬೇಸತ್ತು ಹೋಗಿದ್ದರು. ರಾಜಕೀಯ ಎಂದರೆ, ವಾಕರಿಕೆ ಹುಟ್ಟಿಸುತಿತ್ತು. ಸಮ್ ಟೈಮ್ಸ್ ಅಂತು ನಾವು ಆರಿಸಿ ಕಳುಹಿದ ಜನನಾಯಕರು ಇವರೇನಾ ಎಂದೂ ಎನಿಸತೊಡಗಿತ್ತು. ಇವರು ಇಷ್ಟೊಂದು ಭ್ರಷ್ಟತೆಯಿಂದ ಮೆರೆದರೂ ಕಾನೂನು ದೇವತೆ ಮತ್ರ ಕನ್ಫ್ಯೂಷನ್ನಲ್ಲಿ ಏಕೆ ಕೂತಿದ್ದಾಳೆ ಎಂದೆನಿಸುತ್ತಿತ್ತು. ಇದರ ಫಲಶೃತಿ ಎಂಬಂತೆ ಅಣ್ಣಾಗಿರಿಯೂ ಆರಂಭವಾಯ್ತು. ಇದರಿಂದ ಯುವಶಕ್ತಿ ಒಗ್ಗಟ್ಟಿನಿಂದ, ಒಕ್ಕೊರಳಿನಿಂದ ಸಕರ್ಾರದ ಮೇಲೆ ಒತ್ತಡ ಹೇರಿತ್ತು. ಹೀಗೆ ಬೆಳಯುತ್ತಾ ಬಂದ ಕ್ರಾಂತಿಯ ಸೆಲೆ ವಿವಿಧ ರೂಪ ಪಡೆಯುತ್ತಾ ಇಂದು ಇಂಥ ಸ್ವರೂಪ ತಳೆದಿದೆ.
ಈ ಹಿಂದನಿಂದಲೂ ಪ್ರತಿಯೊನ್ನರೂ ಹೇಳುತ್ತಿದ್ದ ಸಾಮಾನ್ಯ ಮಾತಿನಂತೆ, ಕಾನೂನು ಶಿಕ್ಷಿಸುವುದು ಕೇವಲ ದುರ್ಬಲರನ್ನು ಎಂಬ ಮಾತು ಇಲ್ಲಿ ಸ್ವಲ್ಪ ಮಟ್ಟಿಗೆ ಸುಳ್ಳಾಗಿದೆ. ಇತ್ತೀಚೆಗೆ ಪ್ರಭಾವಿ ವ್ಯಕ್ತಿಗಳಿಗಾದ ಗತಿಯನ್ನು ನೋಡಿ ಜನರಿಗೆ ಕಾನೂನಿನ ಮೇಲಿದ್ದ ಅಪನಂಬಿಕೆಯ ಕಾಮರ್ೋಡ ಮಾಯವಾಗಿ ನಿರೀಕ್ಷೆಯ ಕಿರಣವೊಂದು ಟಿಸಿಲೊಡೆದಿದೆ. ಇದೆಲ್ಲಾ ಅಭಿವೃದ್ಧಿಯ ಪ್ರತೀಕವೇ ಅಥವಾ ಮಿಡಿಯಾ ಹಾಗೂ ರಾಜಕೀಯ ಪಕ್ಷಗಳ ಮಸಲತ್ತೇ ಎನ್ನುವ ವಿಷಯ ಇನ್ನು ಕೆಲವೇ ದಿನಗಳಲ್ಲಿ ಗೋಚರಿಸುವದರಲ್ಲಿ ಸಂದೇಹವಿಲ್ಲ.
ಮತ್ತಷ್ಟು ಗೋಮುಖವ್ಯಾಘ್ರರ ಸಾಚಾತನ ಬಯಲಿಗೆ ಬರಲಿದೆ.. ಇದೆಲ್ಲದರ ಹಿಂದೆ ಮಾಹಿತಿ ಹಕ್ಕು ಕಾಯ್ದೆ ಕಾರ್ಯವೈಖರಿಯನ್ನು ಎಂದೂ ಮರೆಯುವಂತಿಲ್ಲ.
ಆತೀಶ್ ಬಿ ಕೆ.

1 comment:

  1. ಚೆನ್ನಾಗಿದೆ ಆತೀಶ್ ಸಾರ್...

    ReplyDelete