Thursday, October 13, 2011

ಲೈಫ್ ಇಸ್ ಮ್ಯಾಜಿಕ್ ಬಾಕ್ಸ್..!

ರಾ ದರ್ಬಾರು
ಕುಛ್ ಖಟ್ಟಾ; ಕುಛ್ ಮಿಠಾ..

ನಿಮಗೆ ಯಾವತ್ತಾದ್ರು ಯಾಕಾದ್ರು ದೊಡ್ಡವರಾದ್ವಪ್ಪಾ ಚಿಕ್ಕವರಿದ್ದಾಗೆ ಲೈಫ್ ಚೆನ್ನಾಗಿತ್ತು. ಒಂಥರಾ ಖುಷಿ ಇತ್ತು. (ಕುಛ್ ಖಟ್ಟಾ; ಕುಛ್ ಮಿಠಾ) ಎಂದೆನಿಸಿದೇನಾ?
ನನಗೆ ಮೊನ್ನೆ ಹಾಗೇ ಅನಿಸ್ತು! ಆಫಿಸ್ಗೆನೋ ರಜೆ ಇರ್ಲಿಲ್ಲಾ. ಆದ್ರು ಈ ಬಾರಿ ನಮ್ಮೂರಲ್ಲೇ ವಿಜಯದಶಮಿ ಆಚರಣೆ ಮಾಡ್ಬೇಕು ಅನ್ಕೊಂಡು ಹೊಗಿದ್ದೆ, ಆದ್ರೆ ಅಲ್ಲಿ ಆದದ್ದೇ ಬೇರೆ. ಪ್ರತಿ ವರ್ಷ ಇರುತ್ತಿದ್ದ ಖುಷಿ, ಉನ್ಮಾದ, ಭಾವೋದ್ವೇಗ ಹಾಗೂ ಚೈತನ್ಯ ಈ ಬಾರಿ ಕಾಣಲೇ ಇಲ್ಲ.
ಊರಲ್ಲಿದ್ದದ್ದು ಕೇವಲ ಒಂದೇ ಒಂದು ವಾರ. ಅದೆಲ್ಲಾ ಕಳೆದದ್ದು, ಮನೆಯಲ್ಲೇ ಹೊರತು ಎಲ್ಲಿಗೂ ಹೋಗೋದಕ್ಕೆ ಮನಸಾಗಲ್ಲಿಲ್ಲ. ತಿರುಗಾಡೋದಕ್ಕೆ ಸ್ನೇಹಿತರೂ ಊರಿಗೆ ಬಂದಿರಲಿಲ್ಲ. ಕಾರಣ ಅವರಿಗ್ಯಾರಿಗೂ ಲೀವ್ ಸಿಕ್ಕಿರಲಿಲ್ವಂತೆ. ಹೀಗಾಗಿ ಈ ಬಾರಿ ಮನೆಯೇ ಎನ್ನ ಪಾಲಿಗೆ ಮಂತ್ರಾಲಯವಾಗಿತ್ತು.
ಡಿಶ್ ಡಿಶುಮ್: ಅಮ್ಮ ಮಾಡಿದ್ದ ಚಕ್ಕಲಿ, ಕರಜಿಕಾಯಿ ಹಾಗೂ ಒಬ್ಬಟ್ಟು ಸೋ ಆನ್ ತಿಂದು ತಿನ್ನುತ್ತಲೇ ಕಾಲ ಕಳೆದೆ. ಹಾಗೇ ಬೋರ್ ಆದಾಗಂತೂ ಇದೇ ಅಲ್ಲಾ ಆ(3ಖ)ರ ಪೆಟ್ಟಿಗೆ! ಅದರ ಮುಂದೆ ಕಾಲ ಕಳೆದೆ, ಹಾಗೇ ಓದೊದಕ್ಕೆ ಏನೋ ಪುಸ್ತಕ ತಗೊಂಡುಹೋಗಿದ್ದೆ ಅಂತಾ ಬಚಾವಾದೆ. ಸೋ ಪುಸ್ತಕನೂ ಓದಿ ಮುಗಿಸೋದಕ್ಕಾಯಿತು.
ಬಟ್ ಈ ಹಿಂದೆಂದಿಗಿಂತ ಈ ಬಾರಿ ಮನೇಲಿ ಅದ್ರಲ್ಲೂ ಸ್ಪೆಷಲ್ಲಿ ಅಮ್ಮನ ಜತೆ ಸ್ವಲ್ಪ ಜಾಸ್ತಿನೇ ಸಮಯ ಕಳೆಯೋದಕ್ಕೆ ಅವಕಾಶ ಸಿಕ್ತು. ಬೆಂಗಳೂರು ಊಟ ತಿಂದು ಸಾಕಾಗಿತ್ತು, ವ್ಹಾ ಅಮ್ಮನ ಕೈ ಊಟ ನೆನೆಸಿಕೊಂಡರೆ ಈಗಲೂ ಬಾಯಲ್ಲಿ ನೀರು ಬರುತ್ತೆ. ಒಂಥರಾ ಖುಷಿಯಲ್ಲಿ ಮನಸು ತೇಲಾಡುತ್ತೆ. ಅದ್ರಲ್ಲೂ ಜೋಳದ ರೊಟ್ಟಿ, ಶೇಂಗಾ ಚಟ್ನಿ ತಿನ್ನದೇ ತುಂಬಾನೇ ದಿನಗಳು ಕಳೆದಿದ್ವು. ಹಬ್ಬ ಇತ್ತು ಹೀಗಾ ರೊಟ್ಟಿ ಏನೂ ತಿನ್ನಕ್ಕಾಗಲಿಲ್ಲ. ಆದರೆ, ಹಬ್ಬದ ಮರುದಿನದಿಂದಂತೂ ರೊಟ್ಟಿಯದ್ದೇ ಪಾರುಪತ್ಯ.
ಮೊನ್ನೆ ಅಂದ್ರೆ ಸಂಡೇ ಮತ್ತೆ ಬೆಂಗಳೂರಿಗೆ ಬಂದಿದ್ದೀನಿ, ಲೆಟ್ಸ್ ಮತ್ತೆ ಅದೇ ಹೋರಾಟ, ಅದೇ ಬದುಕು ನಡೀತಾ ಇದೆ. ಬಹುಶಃ ದೀಪಾವಳಿಗೆ ಊರಿಗೆ ಹೋಗೋದಕ್ಕಾಗಲ್ಲ ಅನಸುತ್ತೆ. ಏನೆ ಇರಲಿ ಈ ಬಾರಿ ಮನೇಲಿ ಕಳೆದ ಟೈಮ್ ಮರೆಯಲಾಗದು.. ಅಮ್ಮನನ್ನು ಮಾತ್ರ ತುಂಬಾ ಮಿಸ್ ಮಾಡ್ಕೋತಿನಿ.. ಫ್ರೆಂಡ್ಸ್ ನಿಮ್ದು ಅದೇ ಕಥೆ ಅನ್ಕೋತಿನಿ.. ಇಸ್ ಇಟ್?

1 comment:

  1. ಕಂಡಿತಾ, ಅತೀಶ್ ನೀವು ಮನೆಯಲ್ಲಿ ಅಮ್ಮನ ಜೊತೆ ಕಳೆದಿರುವ ದಿನಗಳನ್ನ ಓದುತ್ತ ಹೋದರೆ ನಾನು ಇಗಲೇ ನಮ್ಮೂರಿಗೆ ಬಸ್ ಹತ್ತಿ ಬಿಡಲೇ ಅಂತ ಅನಿಸಿತು, ಆದರೆ ಏನು ಮಾಡಲಿ ನಾನು ದೊಡ್ಡವನಾಗಿ ಬಿಟ್ಟಿದ್ದೇನೆ, ಕೆಲಸದ ಜವಾಬ್ದಾರಿ ಇದೆಯಲ್ಲ, ಒಟ್ಟಿನಲ್ಲಿ ನಿಮ್ಮ ಲೇಕನ ಓದುತ್ತ ನಾನು ಅಮ್ಮನ ಹತ್ರ ಹೋಗಿ ಬಂದೆ,

    ReplyDelete