Tuesday, January 18, 2011

ಬುಟ್ಟಿ ಹೆಣೆಯುವವರ ಬದುಕಿನ ಸುತ್ತ  ಕೋಟಲೆಗಳ ಹುತ್ತ ...

'ಈಗ ಆ್ಯನೋ ಮದಿ ಸೀಸನ್ ಆದಾರಿ ರೊಕ್ಕದ ಸಮಸ್ಯೆ ಆ್ಯನಬಿ ಇಲ್ರಿ, ಆದುರಾ ಮಳಗಾಲ ಬಂತು ಅಂದುರಾ ಒಂದು ಹೊತ್ತಿಂದ ಉಳ್ಳಾಕಬಿ ಪರದಾಡಬೇಕಾಯ್ತುದ್ರಿ ಅಂತಾರೆ ಈ ಬುಟ್ಟಿ ಹೆಣೆಯುವ ಮಹಿಳೆ.' ಹಾಗು ಇಡೀ ನಮ್ ಕುಟುಂಬಾನೆ ಈ ವೃತ್ತಿ ಮಾಡ್ತಿವ್ರಿ ಆದುರಾ ಆದಾಯ ಮಾತ್ರ ಒಪ್ಪತ್ತಿನ ಕೂಳಿಗು ಸಾಲಂಗಿಲ್ರಿ. ಈ ಮಹಿಳೆ ಮಾತು ಕೇಳಿ ಎಷ್ಟು ಜನರ ಕರುಳು ಚುರುಕ್ ಅನ್ನೋಲ್ಲಾ ನೀವೆ ಹೇಳಿ? 
ಬೀದರ್ನಲ್ಲಿ ಬಿದಿರಿನಿಂದ ಸಾಮಗ್ರಿಗಳನ್ನು ತಯಾರಿಸುವ ಇವರು ಸುಮಾರು ವರ್ಷಗಳಿಂದ ಈ ಸ್ಥಳದಲ್ಲಿಯೇ ನೆಲೆಸಿದ್ದು ಈ ವೃತ್ತಿಯಲ್ಲಿ ನಿರತರಾಗಿದ್ದಾರೆ. ಇವರು ತಮಗೆ ಬೇಕಾದ ಬಿದಿರುಗಳನ್ನು ಸಾಮಗ್ರಿ ಎನ್ನುವ ಸ್ಥಳದಿಂದ ಆಮದು ಮಾಡಿಸಿಕ್ಕೊಳ್ಳುತ್ತಾರೆ. ಈ ಬಿದಿರಿನಿಂದ ಹಲವು ಬಗೆಯ ಬುಟ್ಟಿ, ಹೂವಿನ ಪುಟ್ಟಿ, ಮೊರ ಮುಂತಾದ ಹಲವು ಬಗೆಯ ಸಾಮಗ್ರಿಗಳನ್ನು ತಯಾರಿಸಿ ಮಾರಾಟ ಮಾಡುತ್ತಾರೆ. 1 ಬಂಬುಗೆ ಸು. 60-70 ರೂ. ನೀಡಿ ಅದರಿಂದ ಹಲವು ಬಗೆಯ ಸಾಮಗ್ರಿಗಳನ್ನು ತಯಾರು ಮಾಡಿ ದಿನಕ್ಕೆ 1000 ರೂ. ನಷ್ಟು ಹಣಗಳಿಸುತ್ತಾರೆ. ಮದುವೆ ಸಮಯದಲ್ಲಿ ಮಾತ್ರ ಬುಟ್ಟಿಗಳಿಗೆ ಬೇಡಿಕೆ ಹೆಚ್ಚುವುದರಿಂದ ಸ್ವಲ್ಪ ಮಟ್ಟಿಗೆ ಹಣದ ಸಮಸ್ಯೆಯೇನಿರುವುದಿಲ್ಲ, ಆದರೆ ಮಳೆಗಾಲದಲ್ಲಂತೂ ಇಡಿ ಕುಟುಂಬವೆ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ. ಕುಟುಂಬದ ಸದಸ್ಯರೆಲ್ಲರು ಬೇರೆ ತಿಳಿಯದ ಕಾರಣ ಇದೆ ವೃತ್ತಿಯನ್ನು ಜೀವನದ ಮಾರ್ಗವೆಂದು ಆರಿಸಿಕೊಂಡಿರುವುದು. 'ಶಾಸ್ತ್ರ ಹೇಳೋಕ್ಕೆ ಬದನೆಕಾಯಿ ತಿನ್ನೋಕ್ಕೆ' ಎಂಬಂತೆ ಸಕರ್ಾರದ ಯೋಜನೆಗಳೆಲ್ಲಾ ಇಂಥವರಿಗೆ ಸ್ಪಂದಿಸುತ್ತಿಲ್ಲ! ಕುಟುಂಬದಲ್ಲಿ ಮಕ್ಕಳಿಗೆ ಹೆಚ್ಚಿನ ವಿದ್ಯಾಭ್ಯಾಸ ನೀಡಲಾಗಿಲ್ಲವೆಂಬ ಕೊರಗು ಹೆತ್ತ ಕರುಳಿನದ್ದಾದರೆ, ಇನ್ನೊಂದು ಕಡೆ ಕಿತ್ತು ತಿನ್ನುವ ಬಡತನ ಇರುವಾಗ ನಮಗೆ ಯಾಕೆ ಈ ಶಾಲೆ-ಗೀಲೆ ಸಾರ್ ಎನ್ನುತ್ತಾರೆ ಹತಾಶಗೊಂಡ ಆ ಮಹಿಳೆ. ವಿಪಯರ್ಾಸವೆಂದರೆ ಜನರಿಗೆಲ್ಲಾ ರೊಟ್ಟಿಗಾಗಿ ಬುಟ್ಟಿ ನೇಯ್ದು ಕೊಡುವ ಇವರ ಜೀವನಕ್ಕೆ ಭದ್ರತೆಯ ಬುಟ್ಟಿಯೇ ಇಲ್ಲ.
ಹಾಗಾದರೆ ಇವರು ಜೀವನ ಆದ್ರು ಹೇಗೆ ಮಾಡ್ತಾರೆ ಅನ್ನೊ ಪ್ರಶ್ನೆ ನಿಮಗೆ ಬರ್ಲಿಲ್ವಾ? ಬೇಸಿಗೆಯಲ್ಲಿ ದುಡಿದುದ್ದನ್ನು ಮಳೆಗಾಲದಲ್ಲಿ ತಿನ್ನುವ ಇರುವೆಯಂತೆ ಇವರ ಜೀವನ ಎನ್ನಬಹುದು! ಏಕೆಂದರೆ ಇವರು ಸಹ ಇರುವೆಯಂತೆಯೇ ಬೇಸಿಗೆಯ ಸೀಸನ್ನಲ್ಲಿ ಗಳಿಸಿದ್ದನ್ನು ಯೋಜನಾಬದ್ದವಾಗಿ ಮಳೆಗಾಲದಲ್ಲಿ ವ್ಯಯಮಾಡುತ್ತಾರೆ. ಆದರೆ ಇಂದಿನ ಆಧುನಿಕ ಪಾಶ್ಚಾತ್ಯ ಸಂಸ್ಕೃತಿಯಿಂದಾಗಿ ಬೇಸಿಗೆಯು ಅವರ ಪಾಲಿಗೆ ಮಳೆಗಾಲವೆ ಆಗಿದೆ..!
ಬುಟ್ಟಿ ಹೆಣೆಯುವವರ ಜೀವನದ ಸುತ್ತ ಸುತ್ತಿ ನೋಡುವಾಗ ಮುತ್ತಿರುವುದು ಬರೀ ಕರಾಳ ಛಾಯೆ, ದುಃಖ ಹಾಗು ಹಸಿವಿನ ಪರದಾಟ. ಇವೆಲ್ಲವುಗಳಿಂದ ಇವರಿಗೆಮುಕ್ತಿಯೇ ಇಲ್ಲವೆ?
ಆತೀಶ ಬಿ ಕನ್ನಾಳೆ

No comments:

Post a Comment