Monday, November 29, 2010

ಹೀಗೂ ಉಂಟೆ.......??
ಎಕೆ 47 ತುಪಾಕಿಯಲ್ಲಿ ಸಿಡಿಯಲಿವೆ ರಬ್ಬರ್ ಗುಂಡು!!

ಇನ್ನು ಮುಂದೆ ಯಾರೇ ನಿಮ್ಮ ಎದುರು ಎಕೆ 47 ಹಿಡಿದು ನಿಂತರೆ ಹೆದರಬೇಕಾಗಿಲ್ಲ..!?? ಯಾಕೆ ಅಂತಾ ಕೇಳ್ತಾ ಇದಿರಾ. ಆ ಮ್ಯಾಟರೆ ಹಾಗೆ, ಎಕೆ 47 ಎಂದರೆ ಪ್ಯಾಂಟ್ ಪ್ಯಾಂಟೆಲ್ಲಾ ಒದ್ದೆಯಾಗಿಬಿಡುತ್ತಿದ್ದ ಜಮಾನ ಒಂದಿತ್ತು. ಆದರೆ ಈಗ....?
ಎಕೆ 47 ತುಪಾಕಿಗಳಲ್ಲಿ ರಬ್ಬರ್ ಗುಂಡುಗಳು ಸಿಡಿಯುವುದೆಂದರೆ ಊಹೆಗೆ ನಿಲುಕದ ಆಲೋಚನೆ ಎನಿಸಬಹುದೇನೊ. ಆದರೆ ಇನ್ನು ಮುಂದೆ ಇದು ಸತ್ಯವಾಗಲಿದೆ. ಜಮ್ಮು ಮತ್ತು ಕಾಶ್ಮೀರದಲ್ಲಿ ನಡೆಯುವ ಗಲಭೆಗಳ ನಿಯಂತ್ರಿಸುವುದಕ್ಕಾಗಿ ಕೇಂದ್ರ ಸಕರ್ಾರ ಕಂಡುಕೊಂಡ ಸೂತ್ರ ಇದಾಗಿದೆ.
 ಗೃಹ ಸಚಿವಾಲಯದಲ್ಲಿ ಸೇರಲಾಗಿದ್ದ ಹಿರಿಯ ಅಧಿಕಾರಿಗಳ ಸಭೆಯಲ್ಲಿ ಚಚರ್ಿಸಲಾಯಿತು. ಮತ್ತು ಆ ಸಭೆಯಲ್ಲಿ ಎಕೆ47ಗಳಲ್ಲಿ ಪ್ಲಾಸ್ಟಿಕ್ ಗುಂಡುಗಳನ್ನು ಬಳಸುವುದರ ಕುರಿತು ನಿಧರ್ಾರ ತೆಗೆದುಕೊಳ್ಳಲಾಯಿತು.
ಎಕೆ 47 ನಲ್ಲಿ ರಬ್ಬರ್ ಗುಂಡುಗಳನ್ನು ಬಳಸುವುದರಿಂದ ಗಲಭೆಕೋರರು ಸಾವಿಗೀಡಾಗುವ ಸಾಧ್ಯತೆಗಳು ಕಡಿಮೆ. ಒಂದು ವೇಳೆ ಇದನ್ನು ಕಡಿಮೆ ಅಂತರದಿಂದ ಹಾರಿಸದಿದ್ದಲ್ಲಿ ಯಾವುದೇ ತೊಂದರೆಯಾಗುವುದಿಲ್ಲ ಎಂದು ತಿಳಿಸಿದರು. ದೊಂಬಿಯನ್ನು ಹತ್ತಿಕ್ಕಲು ಇರುವ ಮತ್ತೊಂದು ತಂತ್ರವೆಂದರೆ, `ಡ್ಯಾಜ್ಲರ್' ಇಲ್ಲಿ ಲೆಸರ್ ಕಿರಣಗಳನ್ನು ಬಳಸಿ ಗಲಭೆಕೋರರನ್ನು ತಾತ್ಕಾಲಿಕ ಅಂಧತ್ವಕ್ಕೀಡು ಮಾಡಲಾಗುತ್ತದೆ ಈಗಾಗಲೇ ಕಾಶ್ಮಿರದಲ್ಲಿ ಇದು ಬಳಕೆಯಲ್ಲಿದೆ.
ಈ ಡ್ಯಾಜ್ಲರ್ ಅನ್ನು 50 ಮೀಟರ್ನಿಂದ 250 ಮೀ. ಒಳಗೆ ವ್ಯಾಪ್ತಿಯಲ್ಲಿ ಬಳಸಬಹುದು. ಇದನ್ನು ವೈಯಕ್ತಿಕವಾಗಿ ಒಬ್ಬೊಬ್ಬರ ಮೇಲೆ ಪ್ರಯೋಗ ಮಾಡಲಾಗುತ್ತದೆ. ಇದರಿಂದ ಗಲ್ಲಭೆಕೋರರು ಕಲ್ಲು ತೂರಾಟ ನಡೆಸುವುದನ್ನು ತಪ್ಪಿಸಬಹುದಾಗಿದೆ.
ಗಲ್ಲಭೆ ನಿಯಂತ್ರಣಕ್ಕಾಗಿ ಜಮ್ಮು ಮತ್ತು ಕಾಶ್ಮೀರದಲ್ಲಿ ಪಂಪ್ ಆ್ಯಕ್ಷನ್ ಗನ್ (ಶಾಟ್ ಗನ್) ಮತ್ತು ಗಲಭೆ ನಿಯಂತ್ರಣಾ ಗನ್ಗಳನ್ನು ಬಳಸಲಾಗುತ್ತಿದೆ. ಇದರಿಂದ ಜೀವಕ್ಕೆ ಹಾನಿಯೇನೂ ಇಲ್ಲ. ಆದರೆ ಪ್ರತಿಭಟನೆಯಲ್ಲಿ ತೊಡಗಿರುವವರಿಗೆ ಗಾಯಗಳಾಗುವ ಸಾಧ್ಯತೆಗಳುಂಟು ಎಂದು ಆಪಾದಿಸಲಾಗಿದೆ.
ಕಾಶ್ಮೀರ ಕಣಿವೆ ಹಿಂಸಾಚಾರ ನಿಯಂತ್ರಣ ಸಂದರ್ಭದಲ್ಲಿ ರಕ್ಷಣಾ ಪಡೆಯವರು ನಡೆಸಿದ ಗುಂಡು ಕಾಳಗದಲ್ಲಿ ಹಲವರು ಮೃತಪಟ್ಟಿದ್ದಾರೆ. ಆದ್ದರಿಂದ ಶೀಘ್ರವಾಗಿ ಜೀವಕ್ಕೆ ಹಾನಿಮಾಡದ ಬಂದೂಕಗಳನ್ನು ತಯಾರಿಸಿ ಕೊಡುವಂತೆ ಜಮ್ಮುವಿನ ಮುಖ್ಯಮಂತ್ರಿ ಒಮರ್ ಅಬ್ದುಲ್ಲಾ ಕೇಂದ್ರಕ್ಕೆ ಕೋರಿದ್ದರು. ಅದರಂತೆ ಜಬಲ್ಪುರದ ಮದ್ದು ಗುಂಡು ಕಾಖರ್ಾನೆಗೆ ಅಂತಹ ಬಂದೂಕಗಳನ್ನು ತಯಾರಿಸಿ ಕೊಡುವಂತೆ ತಿಳಿಸಲಾಗಿದೆ.
ಏನು ಇದರ ವಿಶೇಷ?: ಈ ಬಂದೂಕಗಳಿಂದ ಗುಂಡು ಹಾರಿಸಿದರೆ, ಆ ಗುಂಡು 40 ಚಿಕ್ಕ ತುಕ್ಕಡಿಗಳಲ್ಲಿ ವಿಭಜನೆಗೊಂಡು ಗಲಭೆಕೋರರಿಗೆ ಬಡಿಯುತ್ತದೆ. ಇದನ್ನು ಉಳಿದ ಬೋಲ್ಟ್ ಆ್ಯಕ್ಷನ್ ಪದ್ದತಿ ಮತ್ತು ಲಿವರ್ ಆ್ಯಕ್ಷನ್ ಪದ್ದತಿಗೆ ಹೋಲಿಸಿದ್ದಲ್ಲಿ ಹೆಚ್ಚು ವೇಗವಾದದ್ದು ಮತ್ತು ಗುಂಡು ತುಂಬುವಲ್ಲಿಯೂ ಸುಲಭವಾದದ್ದಾಗಿದೆ. ಇದರಲ್ಲಿರುವ ಗುಂಡುಗಳು ಚಪ್ಪಟೆಯಾಗಿರುವುರಿಂದ ಎದುರಾಳಿಗಳಿಗೆ ಚಿಕ್ಕ ಪುಟ್ಟ ಗಾಯಗಳಾಗಬಹುದೇ ಹೊರತು ಜೀವಕ್ಕೆ ಯಾವುದೇ ಅಪಾಯವಾಗದು ಎಂದು ತಿಳಿಸಲಾಗಿದೆ.
ಆತೀಶ್ ಬಿ ಕನ್ನಾಳೆ

No comments:

Post a Comment