Wednesday, October 26, 2011

ಪ್ರತಿಯೊಬ್ಬರೂ ಓದಲೇ ಬೇಕಾದ ಮನದಾಳದ ಮಾತು... ತಪ್ಪದೇ ಓದಿ ಪ್ಲzzz.


ಕಾಡತಾವ ನೆನಪು...
ಈ ಬಾರಿಯ ದೀಪಾವಳಿ ನನ್ ಪಾಲಿಗೆ ಬೆಳಿಕಿನ ಹಬ್ಬ ಅಲ್ಲ; ಬದಲಿಗೆ ತಮಸು ಆವರಿಸಕೊಂಡ ದಿಬ್ಬ! ರೂಮಿನ ಮೇಲೆ ನಿಂತು (ಬೆಂಗಳೂರು) ಆಕಾಶದ ಚುಕ್ಕೆ ಎಣಿಸುವ ಪ್ರಯತ್ನದಲ್ಲಿದ್ದೆ, ಅಷ್ಟರಲ್ಲೇ ಏನೆನೋ ಆಲೋಚನೆಗಳು ಆಗಂತುಕವಾಗಿ ಮನಸಿನ ಮೂಲೆಯಲ್ಲಿ ಉದ್ಭವಿಸುತ್ತಿದ್ದವು. ಕಳೆದ ಬಾರಿಯ ದೀಪಾವಳಿ ಕುರಿತು ಆಲೋಚಿಸುವಾಗ ಈ ಬಾರಿಯ ದೀಪಾವಳಿ ನನಗೆ ಮೂದಿಸುತಿತ್ತು. ಆಕಾಶಕ್ಕೆ ಸೊಂಯ್ ಎಂದು ಹಾರಿದ ಬಾಣಗಳು ಸೀದಾ ಬಂದು ನನ್ನ ಹೃದಯಕ್ಕೆ ಘಾಸಿಗೊಳಿಸುತ್ತಿದ್ದವು. ಹಾರುತ್ತಿದ್ದ ಪಟಾಕಿಗಳು ಅಂತರಾತ್ಮವನ್ನು ಕದಲಿಸುತ್ತಿದ್ದವು. ಹೀಗೆಲ್ಲಾ ನನಗಾಗಿದ್ದು ಇದೇ ಮೊದಲು.
ಈ ಹಿಂದೆ ನನಗೆ ಎಂದೂ ಹೀಗಾಗಿರಲಿಲ್ಲ. ದೀಪಾವಳಿ ಅಂದ್ರೆ ನನಗೆ ಅತೀ ಪ್ರೀತಿಯ ಹಬ್ಬ, ಎಲ್ಲ ಹಬ್ಬಗಳಿಗಿಂತ ನಾನು ಪ್ರೀತಿಸುವ ಹಾಗೂ ಇಷ್ಟಪಡುವ ಹಬ್ಬ. ಇದರೊಂದಿಗೆ ನನ್ನ ಅನೇಕ ಭಾವಚುಂಬಿ ಕನಸುಗಳು ತಳುಕುಹಾಕಿಕೊಂಡಿವೆ. ನನಗೆ ಈಗಲೂ ತುಂಬಾ ಚೆನ್ನಾಗಿ ನೆನಪಿದೆ. ಆ ದಿನ, ಅದನ್ನೂ ನಾನು ಸಾಯುವವರೆಗೂ ಮರೆಯಲು ಸಾಧ್ಯವೇ ಇಲ್ಲ. ಇದು ಮಾತ್ರ ಸ್ಪಟಿಕದಷ್ಟು ನಿಚ್ಚಳ, ಸ್ಪಷ್ಟ. ಅದು ಕೂಡ ದೀಪಾವಳಿಯ ದಿನವೇ ಆಗಿತ್ತು. ಆಗ ನಾನು ಬರೀ ಆರೇಳು ವರ್ಷದ ಪೋರ(ಬಾಲಕ). ಕಾಂಪೌಂಡ್ ಮೇಲೆ ಕುಳಿತು ನನ್ನ ಓಣೆಯಲ್ಲಿ ಪಟಾಕಿಹಾರಿಸುತ್ತಿದ್ದ ಬೇರೆಯವರನ್ನು ನೋಡುತ್ತಿದ್ದೆ. ಅವರು ಖುಷಿಯಿಂದ ಕುಟುಂಬದೊಂದಿಗೆ ಪಟಾಕಿ ಹಾರಿಸುತ್ತಿದ್ದರು. ನಾನೂ ಅವರಂತೆಯೇ ಬಾಣ-ಬಿರುಸುಗಳನ್ನು ಹಾರಿಸಬೇಕು, ಮನಃತುಂಬಿ ಕುಣಿದಾಡಬೇಕು, ಪಟಾಕಿಯ ಸದ್ದು ಒಳಗೆ ಹಾಸಿಗೆಯಲ್ಲಿ ಮಲಗಿದ್ದ ಅಣ್ಣ ಹಾಗೂ ಅಕ್ಕಳಿಗೆ ಎಬ್ಬಿಸಿ ಅಚ್ಚರಿಯನ್ನುಂಟುಮಾಡಬೇಕು ಎಂದು ಕುಳಿತಿದ್ದೆ. ಮುಂದೆ ನಾನೂ ವಿಭಿನ್ನಾವಿಭಿನ್ನ ಥರದ ಪಟಾಕಿಗಳನ್ನು ಹಾರಿಸುತ್ತಿರುವುದನ್ನು ಹೃದಯದಲ್ಲಿ ಧೆನಿಸಿಕೊಂಡೆ, ವ್ಹಾ...! ಇನ್ನೇನು ಸ್ವರ್ಗಕ್ಕೆ ಮೂರೇ ಗೇಣು.. ಮತ್ತೆ ವಾಸ್ತವಕ್ಕೆ ಮರಳಿದೆ.
ಎಲ್ಲರೂ ಪಟಾಕಿ ಹೊಡೆದು ಮನೆಯೊಳಗೆ ತೆರಳಿದ್ದರು. ಆದರೆ, ನಾನು ಮಾತ್ರ ಅಪ್ಪನಿಗಾಗಿ ಕಾಯ್ತಾ ಕುಳಿತಿದ್ದೆ. ಬೆಳಗ್ಗೆ ನಾನು ಪಟಾಕಿ ಲಿಸ್ಟ ಮಾಡಿಕೊಟ್ಟಿದ್ದೆ, ಅಪ್ಪ ನನಗೆ ಆ ಎಲ್ಲಾ ಪಟಾಕಿಗಳನ್ನು ತರುವುದಾಗಿ ಪ್ರಾಮಿಸ್ ಮಾಡಿ ಹೋಗಿದ್ರು. ಆದ್ರೆ ರಾತ್ರಿ 10 ಗಂಟೆ ಆದರೂ ಅಪ್ಪನ ಸುಳಿವೇ ಇಲ್ಲ, ಒಳಗಡೆಯಿಂದ ಅಮ್ಮ ಕೂಗಿದಳು ಬಾರೋ ನಿಮ್ಮಪ್ಪ ಇವತ್ತೂ ಲೇಟೆ.. ಬಂದು ಊಟ ಮಾಡಿ ಮಲ್ಕೋ ಎಂದರು. ಅದರೆ ಮನಸಿನಲ್ಲಿ ಮಂಡಕ್ಕಿ ತಿನ್ನುತಿದ್ದ ನನ್ನ ಈ ಹಾಳು ವಾಂಛೆ ನಿದ್ದೆ ಮಆಡಲು ಬಿಟ್ಟೀತೆ.
ಆಯ್ತಮ್ಮ ಇನ್ನೇನು ಅಪ್ಪ ಬರ್ಬಹುದು ಎಂದು ಓಣೆಯ ರಸ್ತೆ ಕಡೆ ಕಣ್ಣು ಹಾಯಿಸಿದೆ. ಯಾರೂ ಇಲ್ಲ. ಕಣ್ಣು ರೆಪ್ಪೆ ಮುಚ್ಚುತಿದ್ದವು, ಆದರೂ ಪಟಾಕಿ ಹಾರಿಸಬೇಕೆಂಬ ನನ್ನ ಹೆಬ್ಬಯಕೆಯ ಎದುರು  ನಿದ್ದೆ ಯಾವ ಲೆಕ್ಕ ಹಾಗೇ ಕುಳಿತೆ. ಕೊನೆಗೂ ನಿರೀಕ್ಷೆ ಬಸಿರು ಹರಿದು ರಸ್ತೆಯ ಮೇಲೆ ಯಾರೋ ಬರುವ ಕರಿನೆರಳು ಕಣ್ಣಿಗೆ ಕಾಣಿಸಿತು. ಅದ್ಯಾರಿರಬಹುದೆಂದು ತದೇಕ ಚಿತ್ತದಿಂದ ನೋಡಿದೆ. ದೂರ ಕಡಿಮೆ ಆಗುತ್ತಾಹೋದಂತೆ, ಆಖತ್ರಿ ಆಯ್ತು ಅಪ್ಪಾನೇ ಬರ್ತಾ ಇದಾರೆ ಅಂತಾ, ಯುನೋ ಆ ನನಗೆ ಸ್ವರ್ಗ ಜಸ್ಟ್ ಮೂರೇ ಗೇಣು! ಕಾಂಪೌಂಡ್  ಎತ್ತರ ಗಮನಿಸದೇ ಹಾರಿ ರಸ್ತೆ ಮೇಲೆ ನಿಂತೆ.. ಆಶ್ಚರ್ಯ ಅಪ್ಪನ ಕೈಯಲ್ಲಿ ಯಾವ ಬಾಣ-ಬಿರುಸೂ ಇಲ್ಲ. ಸೈಕಲ್ನಿಂದ ಕೆಳಗಿಳಿದವರೇ ಅವರಿಗೆ ನಿಲ್ಲೋದಕ್ಕೂ ಆಗುತ್ತಿಲ್ಲ. ಅಮೇಲೆ ತಾನೆ ಗೊತ್ತಾಗಿದ್ದು, ಅಪ್ಪಾ ಅವತ್ತೂ ಸುರಾಧಿನರಾಗಿದ್ದರು. ನನ್ನ ಮೂರು ಗಂಟೆಯ ನಿರೀಕ್ಷೆ ಕಣ್ಣಾಲಿಯಲ್ಲಿ ನೀರಾಗಿ ಹರಿಯಲಾರಂಭಿಸಿತು. ಕಷ್ಟಪಟ್ಟು ಕಂಟ್ರೋಲ್ ಮಾಡಿಕೊಳ್ಳಲು ಯತ್ನಿಸಿದೆ, ಆಗಲಿಲ್ಲ. ಅಮ್ಮನೆಡೆಗೆ ಓಡಿ ಗಟ್ಟಿಯಾಗಿ ತಬ್ಬಿಕೊಂಡೆ, ಅಳಲಾರಂಭಿಸಿದೆ. ಅಮ್ಮ ಕೂಡ ಅಷ್ಟೆ ನನ್ನನ್ನು ತನ್ನ ಸೆರಗಿನಲ್ಲಿ ನನ್ನನ್ನು ಅವಿತುಕೊಂಡ ಸಂತೈಸಿದಳು. ಅಪ್ಪಾ ಒಳಗೆ ಬಂದವರೇ ಅಮ್ಮನಿಗೆ ಹೊಡೆಯಲಾರಂಭಿಸಿದರು. ಇದು ನಮ್ಮ ಮನೆಯಲ್ಲಿ ನಿತ್ಯ ಕಥೆ...
ಟ್ರಸ್ಟ್ ಮಿ ಫ್ರೆಂಡ್ಸ್ ಅವತ್ತು ಪಟಾಕಿ ತರಲು ಮರೆತಿದ್ದ ನಮ್ಮಪ್ಪ ಮುಂದೆ ನನ್ನ ಭವಿಷ್ಯಕ್ಕಾಗಿ ಅಷ್ಟೊಂದು ಕಷ್ಟ ಪಡಬಹುದು ಎಂದುಕೊಂಡಿರಲಿಲ್ಲ. ಅವರು ತನ್ನ ಎಲ್ಲ ಆಸೆ ಆಕಾಂಕ್ಷೆಗಳನ್ನು ಬದಿಗೊತ್ತಿ, ಅಷ್ಟೆ ಯಾಕೆ ತಮ್ಮ ಒಡಲಲ್ಲಿ ಅನೇಕ ಚಿಂತೆಗಳನ್ನು ತುಂಬಿಕೊಂಡು ನನಗೆ ಪಿಜಿ(ಪತ್ರಿಕೋದ್ಯಮ) ಓದಿಸಿದರು. ಅಂದಿನ ಅಪ್ಪನಿಗೂ ಇಂದಿನ ಅಪ್ಪನಿಗೂ ವ್ಯತ್ಯಾಸ ತಾಳೆ ಹಾಕುವುದಾದರೆ, ಕಣ್ರೆಪ್ಪೆ ಒದ್ದೆಯಾಗುತ್ತೆ. ಬಳಿಕ ನಾನೂ ಸ್ನಾತಕೋತ್ತರ ಮುಗಿಸಿ, ಸಂಯುಕ್ತ ಕನರ್ಾಟಕ ಬೆಂಗಳೂರು ಕಚೇರಿಯಲ್ಲಿ ಕೆಲಸಕ್ಕೆ ಸೇರಿಕೊಂಡೆ, ಇವತ್ತಿಗೆ ನಾನು ಇಲ್ಲಿ ಕಾರ್ಯನಿರ್ವಹಿಸುತ್ತಿದ್ದು, ಒಂದು ವರ್ಷ ಒಂದು ತಿಂಗಳು ಕಳೆದಿರಬಹುದು. ಅದೇ ರೀತಿ ನನ್ನ ಭವಿಷ್ಯಕ್ಕಾಗಿ ಬೆನ್ನೆಲುಬಾಗಿ, ಇಂಬಾಗಿ, ಕಸುವಾಗಿ, ಸ್ಫೂತರ್ಿಯ ಸೆಲೆಯಾಗಿ ನಿಂತಿದ್ದ ನಮ್ಮಪ್ಪ ನನ್ನನ್ನು ಬಿಟ್ಟು ಅಗಲಿ ಆರು ತಿಂಗಳುಗಳೇ ಕಳೆದಿವೆ. ಆದರೆ, ಅವರ ನೆನಪು ಮಾತ್ರ ಇನ್ನೂ ಹಸಿಹಸಿ, ಅಮ್ಮ ಕೂಡ ಅಷ್ಟೆ ಈ ದೀಪಾವಳಿಯಲ್ಲಿ ಯಾವುದೇ ಆಚರಣೆ ಮಾಡುತ್ತಿಲ್ಲ. ಮನೆಯಲ್ಲೆಲ್ಲಾ ಸೂತಕದ ಛಾಯೆ... ನಾನು ಈ ಸಲ ದೀಪಾವಳಿಗೆ ಮನೆಗೆ ಹೋಗಲಾಗಲಿಲ್ಲ. ಯಾಕೋ ಹೋಗಬೇಕೆಂದೂ ಎನಿಸುತಿಲ್ಲ. ಭಾವನೆಗಳು ಭಾರವಾಗಿ, ಕಣ್ಣಹನಿಗಳು ಬತ್ತಿಹೋಗಿವೆ ಎಂದೆನಿಸುತ್ತಿದೆ.
ಅದಕ್ಕೆ ಹೇಳಿದ್ದು, ಹೊರಗಡೆ ದೀಪಾವಳಿ ಆದರೆ ನನ್ನೊಡಲಲ್ಲಿ ದೀಪಗಳ ಹಾವಳಿ ಎಂದು..
ಫ್ರೆಂಡ್ಸ್ ಅಪ್ಪನನ್ನು ಎಂದೂ ಹೇಟ್ ಮಾಡಬೇಡಿ ಆದಷ್ಟು ದಿನ ಅವರೊಂದಿಗೆ ಖುಷಿಖುಷಿಯಿಂದ ಬದುಕಿ, ಈ ದೀಪಾವಳಿ ನಿಮ್ಮೆಲ್ಲರ ಬಾಳಲ್ಲಿ ಸುಖ, ನೆಮ್ಮದಿ, ಶಾಂತಿ ಹಾಗೂ ಬೆಳಕನ್ನು ತರಲಿ ಎನ್ನುವುದೇ ನನ್ನ ಹೆಬ್ಬಯಕೆ..


Saturday, October 22, 2011

ಇಲ್ಲ್ಲೂ ನೀನೆ ಎಲ್ಲೂ ನೀನೆ ಎಲ್ಲೆಲ್ಲೂ ನೀನೆ..

ಹೊಸ ಗಾನಾ ಬಜಾನಾ..
ಅಪಸ್ವರದ ಮಧ್ಯೆ ಮೆಟ್ರೋ ಮೋಡಿ..!
ಮೊನ್ನೆ ಬೆಂಗಳೂರಿಗರ ಖುಷಿಗೆ ಪಾರವೇ ಇರಲಿಲ್ಲ. ಅಂತೂ ಬಹುದಿನದ ಕನಸು ನನಸಾಯಿತು ಎಂಬ ಸಾರ್ಥಕತೆ ಜತೆಗೆ ದಕ್ಷಿಣ ಭಾರತದಲ್ಲಿಯೇ ಇದೇ ಮೊದಲು ಕನರ್ಾಟಕದಲ್ಲಿ ಮೆಟ್ರೋ ಟಿಸಿಲೊಡೆದು ಹಳಿಗಳ ಮೇಲೆ ರೊಂಯ್ ಗುಟ್ಟುತ್ತ ಹೋಗುವಾಗ ಎಲ್ಲರ ಕಣ್ಣಲ್ಲೂ ಧನ್ಯತೆಯ ಭಾವ.
ಹಲವು ವರ್ಷಗಳಿಂದ ಎಲ್ಲರ ಗಮನ ತನ್ನತ್ತ ಸೆಳೆದಿದ್ದ `ನಮ್ಮ ಮೆಟ್ರೋ'ಗೆ ಕೊನೆಗೂ ಉದ್ಘಾಟನೆಯ ಭಾಗ್ಯ ಲಭಿಸಿದೆ. ವಿಧಾನಸೌಧ ಹಾಗೂ ಪರಪ್ಪನ ಅಗ್ರಹಾರ ನಡುವಣ ಸಂಬಂಧ  ಗಟ್ಟಿಗೊಳ್ಳುತ್ತಿರುವ ಜತೆಜತೆಗೆ ಈ ಬೆಳವಣಿಗೆ ನಡೆಯಿತು. ತಾನೇ ಮೆಟ್ರೋ ಉದ್ಘಾಟನೆ ನೆರವೇರಿಸಬೇಕು ಎಂಬ ವಾಂಛೆಯಲ್ಲಿದ್ದ ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡ್ಯೂರಪ್ಪ ಅವರ ಅನುಪಸ್ಥಿಯಲ್ಲಿಯೇ ಈ `ಐ-ಘಟನೆ' ನಡೆದು ಪರದೆಯತ್ತ ಸರಿಯಿತು. ಆಕಡೆ ಕಂಬಿಯ ಮೇಲೆ ಅಂಬೇಗಾಲಿಡುತ್ತಾ ಮೆಟ್ರೋ ಮುನ್ನೆದಿತ್ತು. ಈಕಡೆ ಕಂಬಿಯ ಹಿಂದೆ ಸಂಘಟನೆಯ ನಾಯಕ ಅಂಬ್ಯೂಲೆನ್ಸ್ನಿಂದ ಅಂಬ್ಯೂಲೆನ್ಸ್ಗೆ ಹಾರಿ ಆಸ್ಪತ್ರೆಯಿಂದ ಆಸ್ಪತ್ರೆಗೆ ಹಾರುವ ಯತ್ನದಲ್ಲಿದ್ದರು. ಮತ್ತೊಂದು ಕಡೆ ಇವರ ಆಪ್ತರೆನಿಸಿಕೊಳ್ಳುವ ಭಾಜಪ ಸದಸ್ಯರು ಖುಷಿಯ ಕ್ಷಣಗಳನ್ನು ಮೆಟ್ರೋ ರೈಲಲ್ಲಿ ಕಳೆಯುತ್ತಿದ್ದರು. ಇನ್ನೊಂದೆಡೆ ಕೇಂದ್ರವನ್ನೇ ಕದಲಿಸಿದ ಸೆಡ್ಯೂರಪ್ಪ ಹತಾಷೆಯ ನಡುವೆ ತನ್ನ ಕ್ಷಣಗಳನ್ನು `ಗಾಂಧೀ ಭಯಾಗ್ರಫಿ'ಯ ಪುಟಗಳನ್ನು ಭಕ್ತಿಪೂರ್ವಕವಾಗಿ ಎಣಿಸುವ ಪ್ರಯತ್ನದಲ್ಲಿದ್ದರು.
ನಾನು ಈ ಹಿಂದೆ `ಖರಾಬ್ ಟೈಂ' ಅನ್ನೋದರ ಬಗ್ಗೆ ಕೇಳಿದ್ದೆ. ಆದರೆ, ಹೀಗೂ ಇರಬಹುದು ಎಂದೂ ಎಂದೆಂದೂ ಊಹಿಸಿರಲಿಲ್ಲ. ಒಂದು ಟೈಂನಲ್ಲಿ ಕುಬೇರರಂತೆ ಮೆರದ ಇವರೆಲ್ಲ ಹೀಗೂ ಜೈಲಲ್ಲಿ ಕಾಲ ಕಳೆಯುತ್ತಾರೆ ಎಂದೆನಿಸಿರಲಿಲ್ಲ. ಇದೆಲ್ಲ ನೋಡುವಾಗ `ಉಪ್ಪು ತಿಂದವರು ನೀರು ಕುಡಿಯಲೇಬೇಕು' ಎಂಬ ಮಾತು ನೆನಪಾಯ್ತು.
ಏನೇ ಇರ್ಲಿ, `ಹತ್ತರ ಜತೆ ಹನ್ನೊಂದು' ಎಂಬಂತೆ ಪರ ರಾಜ್ಯದ ಮುಖ್ಯಮಂತ್ರಿ ಸಹ ಕೇಂದ್ರ ಕಾರಾಗ್ರಹಕ್ಕೆ ಬಂದು ವಿಸಿಟ್ ಕೊಟ್ಟು ಹೋಗೋ ರೇಂಜಿಗೆ ನಮ್ಮ ಕನರ್ಾಟಕ ಕಾರಾಗೃಹಗಳು ಬಂದಿವೆ ಅಂದ್ರೆ ಒಂದೊಂದು ಸಾರಿ `ಡೌಟ್' ಸ್ಟಾಟರ್್ ಆಗುತ್ತೆ! ನಮ್ಮ ಕಾರಾಗೃಹದ ದ್ವಾರಗಳಿಗೆ ಇಷ್ಟೊಂದು ಕಸುವು ಬಂದುದ್ದಾದ್ರು ಎಲ್ಲಿಂದ? ಲೋಕಾಯುಕ್ತ ವಿಶೇಷ ನ್ಯಾಯಾಲಯದ ನ್ಯಾಯಾಧೀಶರಿಗೆ ಇಷ್ಟೊಂದು ಆನೆಬಲ ಎಲ್ಲಿಂದ ಬಂತು. ಇದೆಲ್ಲಾ ಸಂತೋಷ ಹೆಡ್ಗೆ ಅವರು ನೀಡಿದ ಗಣಿ ವರದಿ ಬಳಿಕವೇ ಆದ ಪಾಸಿಟಿವ್ ಇಂಪೆಕ್ಟ್ ಅಲ್ವಾ..?
ಒಟ್ಟಲ್ಲಿ ನಮ್ಮ ನ್ಯಾಯಾಂಗ ವ್ಯವಸ್ಥೆಯ ಮೇಲೆ ಜನರಿಗೆ ನಂಬಿಕೆ ಉಲ್ಭಣಿಸಿದೆ. ಬೆಳಿಗ್ಗೆಯಿಂದ ರಾತ್ರಿವರಗೂ ಹಗರಣಗಳನ್ನು ನೋಡಿ ಜನ ಬೇಸತ್ತು ಹೋಗಿದ್ದರು. ರಾಜಕೀಯ ಎಂದರೆ, ವಾಕರಿಕೆ ಹುಟ್ಟಿಸುತಿತ್ತು. ಸಮ್ ಟೈಮ್ಸ್ ಅಂತು ನಾವು ಆರಿಸಿ ಕಳುಹಿದ ಜನನಾಯಕರು ಇವರೇನಾ ಎಂದೂ ಎನಿಸತೊಡಗಿತ್ತು. ಇವರು ಇಷ್ಟೊಂದು ಭ್ರಷ್ಟತೆಯಿಂದ ಮೆರೆದರೂ ಕಾನೂನು ದೇವತೆ ಮತ್ರ ಕನ್ಫ್ಯೂಷನ್ನಲ್ಲಿ ಏಕೆ ಕೂತಿದ್ದಾಳೆ ಎಂದೆನಿಸುತ್ತಿತ್ತು. ಇದರ ಫಲಶೃತಿ ಎಂಬಂತೆ ಅಣ್ಣಾಗಿರಿಯೂ ಆರಂಭವಾಯ್ತು. ಇದರಿಂದ ಯುವಶಕ್ತಿ ಒಗ್ಗಟ್ಟಿನಿಂದ, ಒಕ್ಕೊರಳಿನಿಂದ ಸಕರ್ಾರದ ಮೇಲೆ ಒತ್ತಡ ಹೇರಿತ್ತು. ಹೀಗೆ ಬೆಳಯುತ್ತಾ ಬಂದ ಕ್ರಾಂತಿಯ ಸೆಲೆ ವಿವಿಧ ರೂಪ ಪಡೆಯುತ್ತಾ ಇಂದು ಇಂಥ ಸ್ವರೂಪ ತಳೆದಿದೆ.
ಈ ಹಿಂದನಿಂದಲೂ ಪ್ರತಿಯೊನ್ನರೂ ಹೇಳುತ್ತಿದ್ದ ಸಾಮಾನ್ಯ ಮಾತಿನಂತೆ, ಕಾನೂನು ಶಿಕ್ಷಿಸುವುದು ಕೇವಲ ದುರ್ಬಲರನ್ನು ಎಂಬ ಮಾತು ಇಲ್ಲಿ ಸ್ವಲ್ಪ ಮಟ್ಟಿಗೆ ಸುಳ್ಳಾಗಿದೆ. ಇತ್ತೀಚೆಗೆ ಪ್ರಭಾವಿ ವ್ಯಕ್ತಿಗಳಿಗಾದ ಗತಿಯನ್ನು ನೋಡಿ ಜನರಿಗೆ ಕಾನೂನಿನ ಮೇಲಿದ್ದ ಅಪನಂಬಿಕೆಯ ಕಾಮರ್ೋಡ ಮಾಯವಾಗಿ ನಿರೀಕ್ಷೆಯ ಕಿರಣವೊಂದು ಟಿಸಿಲೊಡೆದಿದೆ. ಇದೆಲ್ಲಾ ಅಭಿವೃದ್ಧಿಯ ಪ್ರತೀಕವೇ ಅಥವಾ ಮಿಡಿಯಾ ಹಾಗೂ ರಾಜಕೀಯ ಪಕ್ಷಗಳ ಮಸಲತ್ತೇ ಎನ್ನುವ ವಿಷಯ ಇನ್ನು ಕೆಲವೇ ದಿನಗಳಲ್ಲಿ ಗೋಚರಿಸುವದರಲ್ಲಿ ಸಂದೇಹವಿಲ್ಲ.
ಮತ್ತಷ್ಟು ಗೋಮುಖವ್ಯಾಘ್ರರ ಸಾಚಾತನ ಬಯಲಿಗೆ ಬರಲಿದೆ.. ಇದೆಲ್ಲದರ ಹಿಂದೆ ಮಾಹಿತಿ ಹಕ್ಕು ಕಾಯ್ದೆ ಕಾರ್ಯವೈಖರಿಯನ್ನು ಎಂದೂ ಮರೆಯುವಂತಿಲ್ಲ.
ಆತೀಶ್ ಬಿ ಕೆ.

Friday, October 14, 2011

ಮುಂದೂ+ಭಯ=ಮುಂಭಯ

ಇತ್ತೀಚೆಗೆ ನಮ್ಮ ಸುತ್ತಲೂ ನಡೆಯುತ್ತಿರುವ ದಗಲ್ಬಾಜಿ ಸುತ್ತ ಒಂದು Reವೀವ್...

Thursday, October 13, 2011

ಲೈಫ್ ಇಸ್ ಮ್ಯಾಜಿಕ್ ಬಾಕ್ಸ್..!

ರಾ ದರ್ಬಾರು
ಕುಛ್ ಖಟ್ಟಾ; ಕುಛ್ ಮಿಠಾ..

ನಿಮಗೆ ಯಾವತ್ತಾದ್ರು ಯಾಕಾದ್ರು ದೊಡ್ಡವರಾದ್ವಪ್ಪಾ ಚಿಕ್ಕವರಿದ್ದಾಗೆ ಲೈಫ್ ಚೆನ್ನಾಗಿತ್ತು. ಒಂಥರಾ ಖುಷಿ ಇತ್ತು. (ಕುಛ್ ಖಟ್ಟಾ; ಕುಛ್ ಮಿಠಾ) ಎಂದೆನಿಸಿದೇನಾ?
ನನಗೆ ಮೊನ್ನೆ ಹಾಗೇ ಅನಿಸ್ತು! ಆಫಿಸ್ಗೆನೋ ರಜೆ ಇರ್ಲಿಲ್ಲಾ. ಆದ್ರು ಈ ಬಾರಿ ನಮ್ಮೂರಲ್ಲೇ ವಿಜಯದಶಮಿ ಆಚರಣೆ ಮಾಡ್ಬೇಕು ಅನ್ಕೊಂಡು ಹೊಗಿದ್ದೆ, ಆದ್ರೆ ಅಲ್ಲಿ ಆದದ್ದೇ ಬೇರೆ. ಪ್ರತಿ ವರ್ಷ ಇರುತ್ತಿದ್ದ ಖುಷಿ, ಉನ್ಮಾದ, ಭಾವೋದ್ವೇಗ ಹಾಗೂ ಚೈತನ್ಯ ಈ ಬಾರಿ ಕಾಣಲೇ ಇಲ್ಲ.
ಊರಲ್ಲಿದ್ದದ್ದು ಕೇವಲ ಒಂದೇ ಒಂದು ವಾರ. ಅದೆಲ್ಲಾ ಕಳೆದದ್ದು, ಮನೆಯಲ್ಲೇ ಹೊರತು ಎಲ್ಲಿಗೂ ಹೋಗೋದಕ್ಕೆ ಮನಸಾಗಲ್ಲಿಲ್ಲ. ತಿರುಗಾಡೋದಕ್ಕೆ ಸ್ನೇಹಿತರೂ ಊರಿಗೆ ಬಂದಿರಲಿಲ್ಲ. ಕಾರಣ ಅವರಿಗ್ಯಾರಿಗೂ ಲೀವ್ ಸಿಕ್ಕಿರಲಿಲ್ವಂತೆ. ಹೀಗಾಗಿ ಈ ಬಾರಿ ಮನೆಯೇ ಎನ್ನ ಪಾಲಿಗೆ ಮಂತ್ರಾಲಯವಾಗಿತ್ತು.
ಡಿಶ್ ಡಿಶುಮ್: ಅಮ್ಮ ಮಾಡಿದ್ದ ಚಕ್ಕಲಿ, ಕರಜಿಕಾಯಿ ಹಾಗೂ ಒಬ್ಬಟ್ಟು ಸೋ ಆನ್ ತಿಂದು ತಿನ್ನುತ್ತಲೇ ಕಾಲ ಕಳೆದೆ. ಹಾಗೇ ಬೋರ್ ಆದಾಗಂತೂ ಇದೇ ಅಲ್ಲಾ ಆ(3ಖ)ರ ಪೆಟ್ಟಿಗೆ! ಅದರ ಮುಂದೆ ಕಾಲ ಕಳೆದೆ, ಹಾಗೇ ಓದೊದಕ್ಕೆ ಏನೋ ಪುಸ್ತಕ ತಗೊಂಡುಹೋಗಿದ್ದೆ ಅಂತಾ ಬಚಾವಾದೆ. ಸೋ ಪುಸ್ತಕನೂ ಓದಿ ಮುಗಿಸೋದಕ್ಕಾಯಿತು.
ಬಟ್ ಈ ಹಿಂದೆಂದಿಗಿಂತ ಈ ಬಾರಿ ಮನೇಲಿ ಅದ್ರಲ್ಲೂ ಸ್ಪೆಷಲ್ಲಿ ಅಮ್ಮನ ಜತೆ ಸ್ವಲ್ಪ ಜಾಸ್ತಿನೇ ಸಮಯ ಕಳೆಯೋದಕ್ಕೆ ಅವಕಾಶ ಸಿಕ್ತು. ಬೆಂಗಳೂರು ಊಟ ತಿಂದು ಸಾಕಾಗಿತ್ತು, ವ್ಹಾ ಅಮ್ಮನ ಕೈ ಊಟ ನೆನೆಸಿಕೊಂಡರೆ ಈಗಲೂ ಬಾಯಲ್ಲಿ ನೀರು ಬರುತ್ತೆ. ಒಂಥರಾ ಖುಷಿಯಲ್ಲಿ ಮನಸು ತೇಲಾಡುತ್ತೆ. ಅದ್ರಲ್ಲೂ ಜೋಳದ ರೊಟ್ಟಿ, ಶೇಂಗಾ ಚಟ್ನಿ ತಿನ್ನದೇ ತುಂಬಾನೇ ದಿನಗಳು ಕಳೆದಿದ್ವು. ಹಬ್ಬ ಇತ್ತು ಹೀಗಾ ರೊಟ್ಟಿ ಏನೂ ತಿನ್ನಕ್ಕಾಗಲಿಲ್ಲ. ಆದರೆ, ಹಬ್ಬದ ಮರುದಿನದಿಂದಂತೂ ರೊಟ್ಟಿಯದ್ದೇ ಪಾರುಪತ್ಯ.
ಮೊನ್ನೆ ಅಂದ್ರೆ ಸಂಡೇ ಮತ್ತೆ ಬೆಂಗಳೂರಿಗೆ ಬಂದಿದ್ದೀನಿ, ಲೆಟ್ಸ್ ಮತ್ತೆ ಅದೇ ಹೋರಾಟ, ಅದೇ ಬದುಕು ನಡೀತಾ ಇದೆ. ಬಹುಶಃ ದೀಪಾವಳಿಗೆ ಊರಿಗೆ ಹೋಗೋದಕ್ಕಾಗಲ್ಲ ಅನಸುತ್ತೆ. ಏನೆ ಇರಲಿ ಈ ಬಾರಿ ಮನೇಲಿ ಕಳೆದ ಟೈಮ್ ಮರೆಯಲಾಗದು.. ಅಮ್ಮನನ್ನು ಮಾತ್ರ ತುಂಬಾ ಮಿಸ್ ಮಾಡ್ಕೋತಿನಿ.. ಫ್ರೆಂಡ್ಸ್ ನಿಮ್ದು ಅದೇ ಕಥೆ ಅನ್ಕೋತಿನಿ.. ಇಸ್ ಇಟ್?

Thursday, September 29, 2011


ಮಾರ್ಕೆಟಿಂಗ್ ಮಾತು:
ವಿಶೇಷವಾಗಿ ಮಹಿಳಾ ಧೂಮಪಾನಿಗಳ ಸಂಖ್ಯೆ `ಅಭಿವೃದ್ಧಿ ಹೊಂದುತ್ತಿರುವ ರಾಷ್ಟ್ರ'ಗಳಲ್ಲಿ ಮಾತ್ರ ಹೆಚ್ಚುತ್ತಿದೆ ಎಂದು ಆಧುನಿಕ ಸಂಶೋಧನೆ ಹೇಳಿದೆ. ಈ ನಿಟ್ಟಿನಲ್ಲಿ ಮಾರುಕಟ್ಟೆಗಳು ತಂಬಾಕು ಉತ್ಪನ್ನಗಳ ಮಾರಾಟಕ್ಕಾಗಿ ಮಹಿಳೆಯರ ಕಡೆಗೆ ವಿಶೇಷವಾಗಿ ಗಮನಹರಿಸಿವೆ. ಇದಕ್ಕಾಗಿ ವಿಶೇಷ ಜಾಹಿರಾತು, ಇತ್ತೀಚಿನ ಪೀಳಿಗೆಗಳ ಚಿತ್ತ ತನ್ನತ್ತ ಸೆಳೆದುಕೊಳ್ಳಲು ಅವಶ್ಯವಾಗಿರುವ ಎಲ್ಲಾ ಹೈಟೆಕ್ ಹೆಜ್ಜೆಗಳನ್ನು ತಂಬಾಕು ಕಂಪೆನಿಗಳು ತೆಗೆದುಕೊಳ್ಳಲಾಗುತ್ತಿದೆ.


ದಂ ಮಾರೆ ದಂ...
ಮದಿರೆವಾಸಿ ಮಾನನಿಯರು

ಆಗ ತಾನೆ ಕಚೇರಿ ಕಾರುಬಾರು ಮುಗಿಸಿ ಬೆಂಗಳೂರಿನ ಪ್ರತಿಷ್ಟಿತ ರೆಸಿಡೆನ್ಸಿ ರಸ್ತೆಯಿಂದ ಮನೆಗೆ ಹೋಗುತ್ತಿದ್ದೆ. ಐ ಥಿಂಕ್ ಅದು ರಾತ್ರಿ 2 ಗಂಟೆ ಸಮಯ. ದಿನದಲ್ಲಿ ರೋಡ್ ಕ್ರಾಸ್ ಮಾಡೋದಕ್ಕೆ ಕನಿಷ್ಠ 15-20 ನಿಮಿಷ ಅವಶ್ಯವಾಗಿ ಬೇಕೆ ಬೇಕು.  ಆದರೆ, ಆ ಹೊತ್ತಲ್ಲಿ ಬರೀ ಬೀದಿನಾಯಿಗಳ ಕೂಗಾಟ ಹಾಗೂ ಸ್ಟ್ರೀಟ್ ಲ್ಯಾಂಪ್ ಬಿಟ್ರೆ ಬೇರೆ ಏನೂ ಇಲ್ಲ. ಅಂಥ ನಿಶಾಚರ ಮೌನದ ಮಧ್ಯೆ ಇಬ್ಬರು 24-25 ವಯೋಮಾನದ ಆಸುಪಾಸಿನ ಯುವತಿಯರು ಯಾವುದೇ ಭಯವಿಲ್ಲದೆ ಹೋಗುತ್ತಿದ್ದರು. ಅವರನ್ನು ನೋಡಿದ್ದೇ ಅಚ್ಚರಿಯೇನೋ ಆಯ್ತು. ಜತೆಗೆ ಪುಂಖಾನುಪುಂಖವಾಗಿ ಪ್ರಶ್ನೆಗಳು ಏಳುತ್ತಿದ್ದವು...
ಆ ಹೊತ್ತಿಲ್ಲದ ಹೊತ್ತಲ್ಲಿ ಹುಡುಗಿಯರಿಬ್ಬರು ಅಂಡೆಪಿಕರ್ಿಗಳಂತೆ ಅಡ್ಡಾಡುತ್ತಿದದ್ದನ್ನು ನೋಡಿದ್ದೇ, "ಎಂದು ಯುವತಿಯರು ಮಧ್ಯೆ ರಾತ್ರಿಯಲ್ಲಿ ಯಾವ ಸಮಸ್ಯೆ ಇಲ್ಲದೆ ಸಲೀಸಾಗಿ ಓಡಾಡುವಂತಾಗುತ್ತಾರೋ; ಅಂದು ನಮ್ಮ ರಾಷ್ಟ್ರ ನಿಜವಾಗಿಯೂ ಸ್ವತಂತ್ರ್ಯ ಹೊಂದಿದೆ ಎಂದರ್ಥ" ಎಂಬ ರಾಷ್ಟ್ರಪಿತರ ಮಾತು ನೆನಪಾಯ್ತು.
ಸ್ಟ್ರಿಟ್ ಲ್ಯಾಂಪ್ನ ಬೆಳಕಲ್ಲಿ ನಾನೂ ಅಲ್ಲೇ ಫುಟ್ಪಾತ್ ಮೇಲೆ ನಿಂತಿದ್ದ ಟೀ ಕುಡಿಯಲು ನಿಂತುಕೊಂಡೆ. ಅಷ್ಟ್ಟರಲ್ಲೇ ಅವರೂ ಆ ಕಡೆಗೆ ಬಂದು ನಿಂತರು. ಆಶ್ಚರ್ಯ ಅವರ ಕೈಯಲ್ಲಿ ರದ್ದಿಯಲ್ಲಿ ಸುತ್ತಿದ್ದ ಬಾಟಲ್ಗಳಿದ್ದವು. ಸಿಗಾರ್ ತೆಗೆದು ಸೇದಲಾರಂಭಿಸಿದರು. ಜತೆಗೆ ಕೈಯಲ್ಲಿದ್ದ ಬಾಟಲ್ಗಳನ್ನು ಓಪನ್ ಮಾಡಿ ಸಿನಿಮೀಯ ರೀತಿಯಲ್ಲಿ ನಿರರ್ಗಳವಾಗಿ ಬಾಟಲಿಬ್ರಹ್ಮನನ್ನು ಗಂಟಲಿಗಿಳಿಸಿ, ಸುರಾಧೀನರಾದರು.
ಆಗ ಯಾವ ರಾಷ್ಟ್ರಪಿತರ ಮಾತು ಕಿವಿಯಲ್ಲಿ ರೊಂಯ್.. ಎಂದು ಹೋಗ್ತಾ ಇತ್ತೋ ಅದರ ಬದಲು, ಯಾಕೋ ಸ್ವಲ್ಪ ಜಾಸ್ತಿನೇ ಸ್ವಾತಂತ್ರ್ಯ ಸಿಕ್ಕಿದೆ ಎಂದೆನಿಸುತ್ತಿತ್ತು. ಹೋಗ್ಲಿ ಊರು ಉಸಾಬರಿ ನನಗ್ಯಾಕೆ ಎಂದು ಸುಮ್ಮನಾದೆ. ಕೈಯಲ್ಲಿದ್ದ ಟೀ ಹೀರಿ, ಮನೆ ಕಡೆ ಕಾಲು ಕಿತ್ತಿದೆ. ಮನೆ ಏನೋ ರೀಚ್ ಆದೆ. ಆದ್ರೆ ಆ ದೃಶ್ಯ ಮಾತ್ರ ಮನಸೆಂಬ ಪ್ರಾಜೆಕ್ಟರ್ನಿಂದ ಸರಿಯುತ್ತಿಲ್ಲ. ಮತ್ತೆ-ಮತ್ತೆ ಆಗಂತುಕವಾಗಿ ಅದೇ ಆಲೋಚನೆ, ಛೇ ಇದೇನು ಎಂಥಾ ಪರಿಸ್ಥಿತಿ ಬಂತಲ್ಲ.. ಹೀಗೆ ಸೋ ಆನ್...
ಮಹಿಳೆ ದಾರಿದೀಪ:
ಕನ್ನಡದಲ್ಲಿ ಒಂದು ಪ್ರತಿಷ್ಠಿತ ಗಾದೆ ಇದೆ. ಅದರ ತಾತ್ಪರ್ಯ ಇಷ್ಟೆ; ರಕ್ಷಿಸಿ, ಉಳಿಸಿ ಬೆಳೆಸಬೇಕಾದವರೇ ಭಕ್ಷಕರಾದರೆ ಸಮಾಜದ ಸ್ವಾಸ್ಥ್ಯವನ್ನು ಕಾಯುವುದು ಕನಸಿನ ಮಾತೇ ಸರಿ. ಗಾದೆಯ ಪುನರ್ಮನನದ ಮೂಲ ಉದ್ದೇಶವೆಂದರೆ, ನಮ್ಮ ಹಿಂದೂಸ್ಥಾನದಲ್ಲಿ ಹಿಂದಿನಿಂದಲೂ ಮಹಿಳೆಯರಿಗೆ ಉನ್ನತ ಸ್ಥಾನ ನೀಡಲಾಗಿದೆ. ಸ್ತ್ರೀ ಮಾತೆ, ಮಮತೆಯ ಸಪ್ರತೀಕ, ಕುಟುಂಬವನ್ನು ಸರಿದಾರಿಗೆ ತರಬಲ್ಲವಳು ಹೀಗೆ ಹತ್ತು ಹಲವಾರು ರೀತಿಯಲ್ಲಿ ಹೊಗಳಿ ಉಪ್ಪರಿಗೆ ಮೇಲೆ ಕೂಡಿಸಲಾಗಿದೆ. ಅಷ್ಟೇ ಯಾಕೆ ಈಗಲೂ ಶಿಕ್ಷಣದ ವಿಚಾರಕ್ಕೆ ಬಂದಾಗ ಮಹಿಳೆಯೊಬ್ಬಳು ಕಲಿತರೇ ಇಡೀ ಕುಟುಂಬವೇ ಕಲಿತಂತೆ ಎಂಬ ಅತಿಶಯೋಕ್ತಿ ಅವಳ ಸುತ್ತ ಗಿರಕಿ ಹೊಡಿಯುತ್ತಲೇ ಇವೆ.
ಮಹಿಳೆಯ ಮರ್ಮದ ಕುರಿತು ಹೇಳಲಾಗದು. ಇತಿಹಾಸದ ಪುಟಗಳನ್ನು ಕಲಕಿದಾಗ ಹೊರಬೀಳುವ ಸತ್ಯಾಂಶ ಕೂಡ ಇದೇ ಆಗಿದೆ. ಅನೇಕ ಮಹಾನ್ ಪುರುಷರ ಹೆಸರುಗಳು ಸುವರ್ಣ ಅಕ್ಷರಗಳಲ್ಲಿ ಬರೆಯಲ್ಪಡಬೇಕಾದರೆ ಅಲ್ಲಿ ಮಹಿಳೆ ಪಾತ್ರ ಅನನ್ಯ. ಅದು ತಾಯಿಯ ರೂಪದಲ್ಲಾಗಿರಬಹುದು ಅಥವಾ ಹೆಂಡತಿ ಮತ್ತ್ಯಾವುದೋ ರೀತಿಯಲ್ಲಿ ಅವಳು ಸಾಧಿಸಲಾರದ್ದನ್ನು ಸಾಧಿಸಿದ್ದಾಳೆ. ಅದಕ್ಕಾಗಿಯೇ ಅಬ್ದುಲ್ ಕಲಾಂ ತಮ್ಮ `ಅಗ್ನಿಯ ರೆಕ್ಕಗಳು' ಪುಸ್ತಕದ ಪ್ರಿಫೇಸ್ನಲ್ಲೇ ಪದಗಳ ವರ್ಣವೆಗೆ ಸಿಗದ ತಾಯಿಯ ಕುರಿತು ಬರೆದಿದ್ದಾರೆ.
 ಅದಕ್ಕಾಗಿಯೇ ಹೆಣ್ಣು ಒಲಿದರೇ ನಾರಿ, ಮುನಿದರೆ ಮಾರಿ ಎಂದೂ ಹೇಳಲಾಗುತ್ತದೆ. ಅದಕ್ಕೆ ಹಲವು ನಿದರ್ಶನಗಳೂ ಇವೆ. ಆದರೆ, ಇಂದು ಇಂಥ ಮಹಿಳೆ ಯಾವ ಸ್ಟೆಟಸ್ಗೆ ಬಂದಿಳಿದಿದ್ದಾಳೆ ಎಂದರೆ, ಬೀದಿ ಪಕ್ಕದಲ್ಲಿ ಬಿಯರ್ ಬಾಟಲ್ ಹಿಡಿದು, `ದಂ' ಹೊಡಿಯುತ್ತಾ ಮಹಿಳಾ ಸಹಜ ಎಲ್ಲ ಗುಣಗಳನ್ನು ಗಾಳಿಗೆ ತೂರಿ, ಮಾನವನ್ನು ಮೂರು ಕಾಸಿಗೆ ಹರಾಜು ಮಾಡುತ್ತಿದ್ದಾಳೆ ಎಂದರೂ ತಪ್ಪಾಗಲಾರದು.
ಹಿಂದಿನ ಅಂಕಿಅಂಶಗಳ ಕಡೆ ಮೆಲುಕು ಹಾಕುವುದಾರೆ, 2008ರಲ್ಲಿ ಶೇ. 18.3 ಮಹಿಳೆಯರು ಧೂಮಪಾನದ ಸೇವಿಸುತ್ತಿದ್ದರು. ಅದೇ ರೀತಿ ಬೇರೆ ರಾಷ್ಟ್ರಗಳಾದ ಅಜರ್ೆಂಟಿನಾದಲ್ಲಿ ಶೇ.22.6 ಹಾಗೂ ಉರುಗ್ವೆಯಲ್ಲಿ ಶೇ. 25.1ರದಷ್ಟು ಮಹಿಳೆಯರು ಸ್ಮೋಕ್ ಮಾಡುತ್ತಾರೆ ಎಂದು ಸಂಖ್ಯಾಶಾಸ್ತ್ರ ಹೇಳುತ್ತದೆ. ಇದೇ ರೀತಿ ಮುಂದುವರೆದರೆ, 2025ರ ವೇಳೆಗೆ ಮಹಿಳಾ ಧೂಮಪಾನಿಗಳ ಸಂಖ್ಯೆಯಲ್ಲಿ ಶೇ. 20ರಷ್ಟು ಹೆಚ್ಚಳವಾಗಲಿದೆ ಎಂದು ಒಂದು ಸಂಶೋಧನೆ ಹೇಳುತ್ತದೆ.
ಅದೆಲ್ಲಾ ಬೇರೆ ವಿಚಾರ. ಆದರೆ, ನೈತಿಕತೆಯ ಗರಡಿಗೆ ಬಂದಲ್ಲಿ ಧೂಮಪಾನ ಸೇವನೆ ಎಂದರೆ ಅದು ಪಾಪ ಪ್ರಜ್ಞೆ ಎನ್ನುವಷ್ಟು ಉನ್ನತ ಆದರ್ಶವುಳ್ಳ ರಾಷ್ಟ್ರ ನಮ್ಮದು. ಇಂಥ ಪವಿತ್ರ ಭೂಮಿಯಲ್ಲಿ ಕಾಲ್ ಸೆಂಟರ್ನಲ್ಲಿ ರಾತ್ರಿ ಇಡೀ ಕೆಲಸ ನಿರ್ವಹಿಸಬೇಕಾದ ಅನಿವಾರ್ಯತೆ. ಹೀಗಾಗಿ ಮೈಂಡ್ ರಿಲ್ಯಾಕ್ಸೇಷನ್ ಎಂಬ ಕಾರಣವೊಡ್ಡಿ, ಈ ರೀತಿ ನೈತಿಕತೆಯನ್ನು ಅಧಃಪತನಗೊಳಿಸುವುದು ಯಾವ ಸೀಮೆ ನ್ಯಾಯ ಸ್ವಾಮಿ..?
ಒಟ್ಟಲ್ಲಿ ವಿದೇಶಿ ಸಂಸ್ಕೃತಿಯ ಆಗಮನದಿಂದ ನಾವು ಇಲ್ಲಿಯವರೆಗೂ ಉಳಿಸಿ ಬೆಳೆಸಿಕೊಂಡು ಬಂದಿರುವ ಸಂಸ್ಕೃತಿ ಹೊಳೆಯಲ್ಲಿ ಹಣಸೆ ಹಣ್ಣು ತೊಳೆದಂತೆ ಎಂಬಂತಾಗಿದೆ. ಇದರ ರಕ್ಷಣೆಗಾಗಿ ಮಹಿಳೆಯರೇ ಮನಸು ಮಾಡಬೇಕಷ್ಟೆ, ಬೆಂಗಳೂರಂಥ ಮೆಟ್ರೋ ಪಾಲಿಟಿಯನ್ ಸಿಟಿಗಳಲ್ಲಿ ಸ್ಮೋಕ್ ಮಾಡದಿರುವದೆಂದರೆ, ಅವರು ಒಂಥರಾ ಸಂಸ್ಕೃತಿಕರಣವಾಗದ ಗುಗ್ಗು ಎಂದು ಭಾವಿಸಲಾಗುತ್ತದೆ. ಇದಕ್ಕಾದರೂ ಬಗ್ಗಿ ಫ್ಯಾಷನ್ಗೊಸ್ಕರ ಮಾಮನಿ ಮದಿರೆಯ ಪಾಲಾಗುತ್ತಾಳೆ. ಮುಂದಾಗುವುದೆಲ್ಲಾ ಗೊತ್ತೇ ಇದೆ. ನೀವೆ ಹೇಳಿ ಇಂತಹರಿಂದ ಮುಂದೆ ಅವರು ಮಕ್ಕಳು ಏನನ್ನಾದರೂ ಸಮಾಜದ ಉದ್ಧಾರಕ್ಕಾಗಿ ಏನಾದರೂ ಮಾಡುತ್ತಾರೆ ಎನ್ನುವುದು ಪಳಗದ ಸಲಗವನ್ನು ನಂಬುವ ಮುಗ್ಧತನವೇ ಸರಿ. ಅಲ್ವಾ..?
http://www.ekanasu.com/2012/01/blog-post_01.html




ಹೀಗೊಂದು `ನೀರು+ಧಾರ=ನಿರ್ಧಾರ'
ತುಂಬಾ ಚೆನ್ನಾಗಿ ನೆನಪಿದೆ, ಬರೋಬ್ಬರಿ ಆರು ತಿಂಗಳು ಕಳೆದಿರಬಹುದು ಅನ್ಸುತ್ತೆ. ನಾನು ನನ್ನ ಬ್ಲಾಗ್ ಅನ್ನು ಬಳಕೆ ಮಾಡಲಾಗಲಿಲ್ಲ. ಅದಕ್ಕೆ ಲೇಖನಗಳನ್ನು ಬರೆಯಬೇಕೆಂದು ಹಲವುಬಾರಿ ಕುಳಿತುಕೊಂಡೆ, ಆದರೆ ಹಾಗೇ ಮಾಡಲಾಗಲಿಲ್ಲ. ಕಾರಣ, ಸ್ವಲ್ಪ ಬ್ಯೂಸಿ ಆಗಿದ್ದೆ. ಅದಕ್ಕಾಗಿ ಈಗ ಒಂದು ನಿರ್ಧಾರಕ್ಕೆ ಬಂದಿದ್ದೇನೆ. ಕನಿಷ್ಠ ತಿಂಗಳಲ್ಲಿ ಎರಡು ಬಾರಿಯಾದರೂ, ಬ್ಲಾಗ್ ಅನ್ನು ಬಳಸಲೇ ಬೇಕು.ಇದಕ್ಕಾಗಿ ನಿಮ್ಮ ಪ್ರೋತ್ಸಾಹ ಹಾಗೂ ಬೆಂಬಲ ನನಗೆ ಅವಶ್ಯ... ನೀವು ಹಾಗೇ ಮಾಡ್ತೀರಿ ಅನ್ನೋ ನಂಬಿಕೆ ನನಗಿದೆ.
ಎಲ್ಲರಿಗೂ ವಿಜಯ ದಶಮಿಯ ಹಾರ್ದಿಕ ಶುಭಾಷಯಗಳು.
ನಿಮ್ಮ ಸ್ನೇಹಿತ
ಆತೀಶ್

Saturday, July 16, 2011

Direct Word...

ಮತ್ತೆ ನಲುಗಿದ ಮುಂಬೈ...

ಹೈ ಸೋನೆ ಕಿ ಚಿಡಿಯಾ, ಅಬ್ ತೇರೆ ಬೇಟೆ ಹೋಗಯೆ ಹೈ ರಾಜನೀತಿಕಿ ಗುಡಿಯಾ(ಕೈಗೊಂಬೆ)!!!
"ನಾರೀಮನ್ ನರಳಾಟ, ತಾಜ್ ತಾಂಡವ ಇನ್ನೂ ಹಸಿ-ಬಿಸಿ. ಹೀಗಿರುವಾಗಲೇ ಏದುಸಿರು. ಲೆಟ್ಸ್ ಟುಗೆದರ್ ಇದು ಸರ್ವ ಭಾರತೀಯರು ಒಂದಾಗಲೇಬೇಕಾದ ಸಮಯ. ಈಗ ಒಂದಾಗದಿದ್ದಲ್ಲಿ ಮುಂದೆ ಅವಕಾಶ ದೊರಕದೆ ಹೋಗದಿರುವಲ್ಲಿ ಸಂದೇಹವಿಲ್ಲ. ಕಾರಣವಿಷ್ಟೆ, ಮುಂದೆ ಕಸಬ್ ನಿಮ್ಮ ಮನೆಗೂ ಬರಬಹುದು! ಅಲ್ಲಿಯೂ ರಕ್ತದೋಕುಳಿ ಹರಿಸಬಹುದು. ಇಲ್ಲಿ ರಾವಣನ ನಿನರ್ಾಮ ಖಚಿತ... (ರಾವಣ ಯಾರು ಎನ್ನುವುದು ಇನ್ನೂ ನಿಗೂಢ ಎನ್ನುವುದು ನಮ್ಮ ರಾಜಕೀಯ ವ್ಯಕ್ತಿಗಳ ಅಭಿಪ್ರಾಯ..!!)"
ಪದೇ-ಪದೆ ರಕ್ತದೋಕುಳಿಯಾಡುತ್ತಿರುವ ಈ ನರಹಂತಕರರಿಗೆ ಮೂಗುದಾರ ಹಾಕುವ ಸಾಮಥ್ರ್ಯ ಭಾರತಕ್ಕಾಗಲೀ, ವಿಶ್ವದ ಹಿರಿಯಣ್ಣನ ಸ್ಥಾನದಲ್ಲಿರುವ ಅಮೆರಿಕಕ್ಕಾಗಲಿ ಅಷ್ಟೇ ಯಾಕೆ ಖುದ್ದು ಪಾಕಿಸ್ತಾನಕ್ಕೇ ಇಲ್ಲ. ಅದರ ಪರಿಣಾಮವೇ ಈ ತ್ರಿವಳಿ ಬಾಂಬ್ ಸ್ಫೋಟಗಳು.
26/11 ಇನ್ನೂ ಕಣ್ಣೆದುರು ಹಸಿಹಸಿಯಾಗಿದೆ. ಅಷ್ಟರಲ್ಲೇ 13/7 ನಡೆದು ಪರದೆಯತ್ತ ಸರಿಯಿತು. ಈ ಪಾತಕಿಗಳ ಪಾಪಕೃತ್ಯಕ್ಕೆ 17 ಜನ ಬಲಿಯಾಗಿದ್ದಾರೆ. 131 ಜನ ಜೀವನ್ಮರಣದ ನಡುವೆ ಸೆಣಸುತ್ತಿದ್ದಾರೆ. ಇಂಥ ಕ್ರೌರ್ಯದಲ್ಲಿಯೇ ಸಂತೃಪ್ತಿ ಪಡುವ ಪಾಕಿಸ್ತಾನಿಗಳು ಜಿಹಾದ್ ಹೆಸರಿನಲ್ಲಿ ಇದೆಲ್ಲಾ ನಡೆಸುತ್ತಿರುವುದಕ್ಕೆ ಕಾರಣ ಹಲವಾದರೆ, ಉದ್ದೇಶ ಒಂದೇ ಅದು ಭಯ+ಉತ್ಪಾದನೆ. ಕಂಪನಿಯಲ್ಲಿ ವಸ್ತುಗಳ ಉತ್ಪಾದನೆ ಹಾಗೂ ಟಾಗರ್ೆಟ್ಗಳಿರುವಂತೆ ಇಲ್ಲಿಯೂ ಅವರಿಗಿರುವುದು ಭಯ ಹುಟ್ಟಿಸಲೇಬೇಕೆಂಬ ಟಾಗರ್ೆಟ್.
ಇಂಡಿಯನ್ ಮುಜಾಹಿದ್ದೀನ್, ಲಷ್ಕರ್ ಕೃತ್ಯ ಎಂದು ಹೇಳಲಾಗುತ್ತಿದೆ. ಆದರೂ ಇನ್ನೂ ಯಾರೂ ಇದರ ಹೊಣೆಹೊತ್ತುಕೊಂಡಿಲ್ಲ. ಯಾರು ಹೊಣೆ ಹೊತ್ತುಕೊಂಡರೆಷ್ಟು ಬಿಟ್ಟರೆಷ್ಟು ಏನೂ ಬದಲಾಗದು ಎಂಬ ಮಾತು ಮಾತ್ರ ಸ್ಪಟಿಕದಷ್ಟು ಸ್ಪಷ್ಟ.
ಈ ಘಟನೆಗಳನ್ನು ಗಮನಿಸುತ್ತಿರುವಾಗ ಒಂದು ಮಾತು ನೆನಪಾಗುತ್ತೆ, "ಹಿಂಸೆ ಕೊಡುವವರಿಗಿಂತ ಸಹಿಸಿಕೊಳ್ಳುವವನೇ ಹೆಚ್ಚು ಅಪರಾಧಿ..." ಹಾಗೇ ಇಲ್ಲಿಯೂ ಅಷ್ಟೆ. ಬೆಣ್ಣೆ ಕೈಲಿಟ್ಟುಕೊಂಡು ತುಪ್ಪಕ್ಕಾಗಿ ಅಲೆದಾಡಿದಂತಾಗಿದೆ. ನಮ್ಮೀ ರಾಷ್ಟ್ರದ ಸ್ಥಿತಿ, ಪರಿಸ್ಥಿತಿ... ಇದರ ಫಲಶ್ರುತಿ ಅಮಾಯಕರ ಪ್ರಾಣತ್ಯಾಗ.
ಈ ಉದಾಹರಣೆಗೆ ಇಷ್ಟೇ ಕಾರಣ, ಕಸಬ್ ಸಿಕ್ಕು ತಿಂಗಳುಗಳು ಸವೆಯುತ್ತಿವೆ. ವರ್ಷಗಳು ಘಟಿಸುತ್ತಿವೆ. ಆದರೆ, ಬೆಳವಣಿಗೆ ಮಾತ್ರ ಶೂನ್ಯ! ಬದಲಿಗೆ `ಪಾತಕಿಗಳ ಪತಿ'ಗೆ ರಾಜ ಸತ್ಕಾರ ಹಾಗೂ ಭೋಗದ ಜೀವನ ನೀಡಲಾಗುತ್ತಿದೆ. ಇರುವುದಕ್ಕೆ ಜೈಲು, ಓದುವುದಕ್ಕೆ ಪುಸ್ತಕಗಳು, ಸಮಯ-ಸಮಯಕ್ಕೆ ಬೇಕಾದ ಎಲ್ಲಾ ವಸ್ತುಗಳು ಹಾಗೂ ಇಲ್ಲಿಯವರೆಗೆ ಇವನ ಜೀವನ ನಿರ್ವಹಣೆಗೆ ಭಾರತ (ಅ)ಸಕರ್ಾರ ಕೋಟಿ ಕ್ರಾಸ್ ಮಾಡಿದೆ. ಬಹುಶಃ ಬೆಂಗಳೂರಿನಂಥ ನಗರದಲ್ಲಿ ದಿನವಿಡೀ ದುಡಿಯುವ ಕೂಲಿಯಾಳಿಗೂ ಆ ಜೀವನ ಅಲಭ್ಯವಾಗಿದೆ. ಇದನ್ನು ನಮ್ಮ ದೌಭರ್ಾಗ್ಯವೆಂದರೆ ಉತ್ಪ್ರೇಕ್ಷೆಯೇನಲ್ಲ.
ವಿಷಯವಸ್ತು ಇಷ್ಟೆ, 13 ಜುಲೈ ಮಿಸ್ಟರ್ ಪರಮ ಪಾತಕಿಯ ಹುಟ್ಟು ಹಬ್ಬ. ಆ ಹುಟ್ಟು ಹಬ್ಬದ ಉಡುಗೊರೆಯಾಗಿ ಅವನಿಗೆ ಭಾರತೀಯರ ರಕ್ತದ ಹವ್ವಿಸ್ಸು. ವಾಹ್ಹ ಎಂಥಾ `ದೇಶ ಪ್ರೇಮ.' ಅವರಿಗಾಗಿ ತಾಜ್ನಲ್ಲಿ ತಕರಾರಿಲ್ಲದೆ ತರಾತುರಿಯಲ್ಲಿ ಬುಲೆಟ್ ಸುರಿಸಿದ ಕಸಬ್ ಇಂದು (ನಿ)ರ್ಬಂಧಿ. ಅಂಥವನಿಗಾಗಿ ಇಂಥದ್ದೊಂದು ಕೊಡುಗೆ ನೀಡುವ ಉ(ದಾರ)ದ್ರಿ  ಮನೋಭಾವ. ಇವರ ತಮ್ಮ ಸ್ವಾರ್ಥಕ್ಕಾಗಿ, ಸೀಟು ರಕ್ಷಣೆಗಾಗಿ ತಿಪ್ಪರಲಾಗ ಹಾಕುವ ರಾಜಕೀಯ ಧುರಿಣರು.
ಇಷ್ಟೇಲ್ಲಾ ಹೇಳೋದರ ಪ್ರಮುಖ ಉದ್ದೇಶ ಒಂದೆ, ಸಾಯಂಕಾಲದ ಸುಂದರ ಗಾಳಿಯಲ್ಲಿ ಕುಟುಂಬದೊಂದಿಗೆ ಏನೋ ಖರೀದಿ ಮಾಡಬೇಕೆಂದು ಬಂದ ಮಕ್ಕಳು, ಪಾಲಕರು ಹೀಗೆ ಹತ್ತು ಹಲವಾರು ವರ್ಗದ ಜನ ನಿಭರ್ಿಡೆಯಿಂದ (ಬಹುಶಃ ಇದು ತಮ್ಮ ಮನೆಯೆಂದು) ತಿಳಿದೋ ಏನೋ ತಿರುಗಾಡುತ್ತಿದ್ದರು. ಅಂಥ ವೇಳೆ ನಡೆದುದ್ದೇ ಈ ನರಮೇಧ....
ಜಸ್ಟ್ ಈ ನರಮೇಧದ ಕಡೆ ಮೆಲುಕು ಹಾಕೋಣ:
mugdha aakrandana
ಅಪೇರಾ ಹೌಸ್, ಜವೇರಿ ಬಜಾರ್, ಚನರ್ಿರಸ್ತೆ ಹಾಗೂ ದಾದರ್ ಮತ್ತಿತರ ಸ್ಥಳಗಳಲ್ಲಿ ಒಟ್ಟು 9 ನಿಮಿಷಗಳಲ್ಲಿ ಅಂದರೆ, 6.51-7 ಆಸುಪಾಸಿನವರೆಗೆ ನಡೆದ ಈ ಡೀಲಿಂಗ್ ಮತ್ತೆ ಜನರಲ್ಲಿ ಎಲ್ಲಿಲ್ಲದ ಭಯ ಮೂಡಿಸಿದೆ. ವಿಶೇಷವೆಂದರೆ ಈ ಮೂರೂ ಸ್ಥಳಗಳು ಜನನಿಬಿಡ. ಇಂಥ ಸ್ಥಳದಲ್ಲಿ ಸ್ಫೋಟ ನಡೆಯಬೇಕಾದ್ದಲ್ಲಿ ಸಾಮಾನ್ಯವಾದುದ್ದೇನಲ್ಲ. ಇದೊಂದೆ ಅಲ್ಲ, ಯಾವ ಸ್ಫೋಟ ನಡೆಯಬೇಕಾದರೂ ಹಿಂದೆ ಪ್ರಭಾವಿ ವ್ಯಕ್ತಿಗಳ ಕೈ ಇರಲೇಬೇಕು. ಹೀಗಿದ್ದಾಗ ಮಾತ್ರ ಇದು ಸಾಧ್ಯ. ಈಗ ಪ್ರತಿಯೊಂದು ಪ್ರಾಬ್ಲಮ್ಗಳ ಎದುರಿರುವುದು ಒಂದೇ ಸವಾಲು, ಅದು ಈ ರಕ್ತದೋಕುಳಿ ಹಿಂದಿರುವ ಕೈಗಳನ್ನು ಪತ್ತೆ ಹಚ್ಚುವ ಕೆಲಸವಾಗಬೇಕು.
ಈ ವಿಷಯಗಳು ಸೈಡ್ಗಿಟ್ಟು, ಸರಣಿ ಸ್ಫೋಟಗಳ ಕುರಿತು ನಮ್ಮ ರಾಷ್ಟ್ರದ ಹೊಣೆಹೊತ್ತವರ ಅಭಿಪ್ರಾಯಗಳನ್ನು ನೋಡೋಣ;

"ಈ ವಿಧ್ವಂಸಕ ಕೃತ್ಯದ ಹಿಂದಿರುವವರ ಹೆಸರು ಹೇಳಲಾರೆ ಹಾಗೂ ಇದರ ಹಿಂದಿರುವವರ ಸುಳಿವು ಸಿಕ್ಕಿಲ್ಲ"
ಪಿ. ಚಿದಂಬರಂ, ಗೃಹ ಸಚಿವ
"ಭಯೋತ್ಪಾದನೆಯನ್ನು ಬೇರು ಸಹಿತ ಕಿತ್ತೊಗೆಯಲು ಸಕರ್ಾರ ನೀತಿಯನ್ನು ರೂಪಿಸಬೇಕು. ವಿಫಲವಾಗಿರುವುದು ಗುಪ್ತಚರ ಸಂಸ್ಥೆಯಲ್ಲ ಸಕರ್ಾರ"
ಲಾಲ್ಕೃಷ್ಣ ಅಡ್ವಾಣಿ, ಬಿಜೆಪಿ ಹಿರಿಯ ನಾಯಕ.
ಉಗ್ರರ ಎಲ್ಲ ದಾಳಿಗಳನ್ನು ತಡೆಯುವುದು ಕಠಿಣ. ಅಮೆರಿಕದಲ್ಲೂ ಉಗ್ರರ ದಾಳಿಗಳು ನಡೆದಿದ್ದು, ಅದನ್ನು ತಡೆಯಲು ಅವರಿಂದಲೂ ಸಾಧ್ಯವಾಗಲಿಲ್ಲ."
ರಾಹುಲ್ ಗಾಂಧಿ, ಎಐಸಿಸಿ ಕಾರ್ಯದಶರ್ಿ.

ಹೀಗೆ ಹಲವರು ಹಲವು ರೀತಿಯಲ್ಲಿ ತಮ್ಮ ಅಭಿಪ್ರಾಯಗಳನ್ನು ತಿಳಿಸಿದ್ದಾರೆ. ಇದರಲ್ಲಿ ಕೆಲವರದ್ದು ಪಕ್ಷ ಉಳಿಸಿಕೊಳ್ಳುವ ಪ್ರಯತ್ನವಾದರೆ, ಇನ್ನೂ ಕೆಲವರದ್ದು ಪಕ್ಷ ಬೀಳಿಸುವುದಾಗಿದೆ. ಅವರ ಅಭಿಪ್ರಾಯಗಳಲ್ಲಿ ಪಾರದರ್ಶಕತೆ ಎನ್ನುವುದು ಮೈಲಿ ದೂರ!
ಸತ್ತವರು ಸುಮಾರು. ಆದರೆ ಆ ಸ್ಫೋಟದಲ್ಲಿ ಯಾರೂ ಪ್ರಭಾವಿ ವ್ಯಕ್ತಿಗಳಿಲ್ಲ. (ಇದು ಇಂಥರಾ ಗುಬ್ಬಿ ಮೇಲೆ ಬ್ರಹ್ಮಾಸ್ತ್ರ ಬಿಟ್ಟಂತೆ ಎಂದೆನ್ಸಲ್ವಾ?) ಇದರ ಒಳಾರ್ಥ ಸುಸ್ಪಷ್ಟ, ಕಸಬ್ ಬುಲೆಟ್ಗೆ ಕಾಣುವುದು ಕೇವಲ ಬಡವರು, ಅಬ್ಬೇಪಾರಿಗಳು ಹೊರತು ಪ್ರಭಾವಿ(ಸ್ಟ್ರಾಂಗ್) ವ್ಯಕ್ತಿಗಳಲ್ಲ. ಇದೆಲ್ಲಾ ಗಮನಿಸಿವುದಾದರೆ ಕಿತ್ತೂರು ರಾಣಿ ಚೆನ್ನಮ್ಮಳ ರಾಜ್ಯದಲ್ಲಾದ ದಗೇಬಾಜಿ ಏನಾದರೂ ನಮ್ಮಲ್ಲಿಯೂ ನಡೆಯುತ್ತಿರಬಹುದೇ ಎಂಬ ಪ್ರಶ್ನೆ ಏಳುವುದು ಸಾಮಾನ್ಯ... ಅಷ್ಟೆ ಯಾಕೆ ಇದು ಪ್ರತಿಯೋರ್ವ ಭಾರತೀಯನ ಆಂತರ್ಯದ ಕೂಗು.
ಆತೀಶ್ ಬಿ ಕೆ.