Thursday, September 29, 2011


ಮಾರ್ಕೆಟಿಂಗ್ ಮಾತು:
ವಿಶೇಷವಾಗಿ ಮಹಿಳಾ ಧೂಮಪಾನಿಗಳ ಸಂಖ್ಯೆ `ಅಭಿವೃದ್ಧಿ ಹೊಂದುತ್ತಿರುವ ರಾಷ್ಟ್ರ'ಗಳಲ್ಲಿ ಮಾತ್ರ ಹೆಚ್ಚುತ್ತಿದೆ ಎಂದು ಆಧುನಿಕ ಸಂಶೋಧನೆ ಹೇಳಿದೆ. ಈ ನಿಟ್ಟಿನಲ್ಲಿ ಮಾರುಕಟ್ಟೆಗಳು ತಂಬಾಕು ಉತ್ಪನ್ನಗಳ ಮಾರಾಟಕ್ಕಾಗಿ ಮಹಿಳೆಯರ ಕಡೆಗೆ ವಿಶೇಷವಾಗಿ ಗಮನಹರಿಸಿವೆ. ಇದಕ್ಕಾಗಿ ವಿಶೇಷ ಜಾಹಿರಾತು, ಇತ್ತೀಚಿನ ಪೀಳಿಗೆಗಳ ಚಿತ್ತ ತನ್ನತ್ತ ಸೆಳೆದುಕೊಳ್ಳಲು ಅವಶ್ಯವಾಗಿರುವ ಎಲ್ಲಾ ಹೈಟೆಕ್ ಹೆಜ್ಜೆಗಳನ್ನು ತಂಬಾಕು ಕಂಪೆನಿಗಳು ತೆಗೆದುಕೊಳ್ಳಲಾಗುತ್ತಿದೆ.


ದಂ ಮಾರೆ ದಂ...
ಮದಿರೆವಾಸಿ ಮಾನನಿಯರು

ಆಗ ತಾನೆ ಕಚೇರಿ ಕಾರುಬಾರು ಮುಗಿಸಿ ಬೆಂಗಳೂರಿನ ಪ್ರತಿಷ್ಟಿತ ರೆಸಿಡೆನ್ಸಿ ರಸ್ತೆಯಿಂದ ಮನೆಗೆ ಹೋಗುತ್ತಿದ್ದೆ. ಐ ಥಿಂಕ್ ಅದು ರಾತ್ರಿ 2 ಗಂಟೆ ಸಮಯ. ದಿನದಲ್ಲಿ ರೋಡ್ ಕ್ರಾಸ್ ಮಾಡೋದಕ್ಕೆ ಕನಿಷ್ಠ 15-20 ನಿಮಿಷ ಅವಶ್ಯವಾಗಿ ಬೇಕೆ ಬೇಕು.  ಆದರೆ, ಆ ಹೊತ್ತಲ್ಲಿ ಬರೀ ಬೀದಿನಾಯಿಗಳ ಕೂಗಾಟ ಹಾಗೂ ಸ್ಟ್ರೀಟ್ ಲ್ಯಾಂಪ್ ಬಿಟ್ರೆ ಬೇರೆ ಏನೂ ಇಲ್ಲ. ಅಂಥ ನಿಶಾಚರ ಮೌನದ ಮಧ್ಯೆ ಇಬ್ಬರು 24-25 ವಯೋಮಾನದ ಆಸುಪಾಸಿನ ಯುವತಿಯರು ಯಾವುದೇ ಭಯವಿಲ್ಲದೆ ಹೋಗುತ್ತಿದ್ದರು. ಅವರನ್ನು ನೋಡಿದ್ದೇ ಅಚ್ಚರಿಯೇನೋ ಆಯ್ತು. ಜತೆಗೆ ಪುಂಖಾನುಪುಂಖವಾಗಿ ಪ್ರಶ್ನೆಗಳು ಏಳುತ್ತಿದ್ದವು...
ಆ ಹೊತ್ತಿಲ್ಲದ ಹೊತ್ತಲ್ಲಿ ಹುಡುಗಿಯರಿಬ್ಬರು ಅಂಡೆಪಿಕರ್ಿಗಳಂತೆ ಅಡ್ಡಾಡುತ್ತಿದದ್ದನ್ನು ನೋಡಿದ್ದೇ, "ಎಂದು ಯುವತಿಯರು ಮಧ್ಯೆ ರಾತ್ರಿಯಲ್ಲಿ ಯಾವ ಸಮಸ್ಯೆ ಇಲ್ಲದೆ ಸಲೀಸಾಗಿ ಓಡಾಡುವಂತಾಗುತ್ತಾರೋ; ಅಂದು ನಮ್ಮ ರಾಷ್ಟ್ರ ನಿಜವಾಗಿಯೂ ಸ್ವತಂತ್ರ್ಯ ಹೊಂದಿದೆ ಎಂದರ್ಥ" ಎಂಬ ರಾಷ್ಟ್ರಪಿತರ ಮಾತು ನೆನಪಾಯ್ತು.
ಸ್ಟ್ರಿಟ್ ಲ್ಯಾಂಪ್ನ ಬೆಳಕಲ್ಲಿ ನಾನೂ ಅಲ್ಲೇ ಫುಟ್ಪಾತ್ ಮೇಲೆ ನಿಂತಿದ್ದ ಟೀ ಕುಡಿಯಲು ನಿಂತುಕೊಂಡೆ. ಅಷ್ಟ್ಟರಲ್ಲೇ ಅವರೂ ಆ ಕಡೆಗೆ ಬಂದು ನಿಂತರು. ಆಶ್ಚರ್ಯ ಅವರ ಕೈಯಲ್ಲಿ ರದ್ದಿಯಲ್ಲಿ ಸುತ್ತಿದ್ದ ಬಾಟಲ್ಗಳಿದ್ದವು. ಸಿಗಾರ್ ತೆಗೆದು ಸೇದಲಾರಂಭಿಸಿದರು. ಜತೆಗೆ ಕೈಯಲ್ಲಿದ್ದ ಬಾಟಲ್ಗಳನ್ನು ಓಪನ್ ಮಾಡಿ ಸಿನಿಮೀಯ ರೀತಿಯಲ್ಲಿ ನಿರರ್ಗಳವಾಗಿ ಬಾಟಲಿಬ್ರಹ್ಮನನ್ನು ಗಂಟಲಿಗಿಳಿಸಿ, ಸುರಾಧೀನರಾದರು.
ಆಗ ಯಾವ ರಾಷ್ಟ್ರಪಿತರ ಮಾತು ಕಿವಿಯಲ್ಲಿ ರೊಂಯ್.. ಎಂದು ಹೋಗ್ತಾ ಇತ್ತೋ ಅದರ ಬದಲು, ಯಾಕೋ ಸ್ವಲ್ಪ ಜಾಸ್ತಿನೇ ಸ್ವಾತಂತ್ರ್ಯ ಸಿಕ್ಕಿದೆ ಎಂದೆನಿಸುತ್ತಿತ್ತು. ಹೋಗ್ಲಿ ಊರು ಉಸಾಬರಿ ನನಗ್ಯಾಕೆ ಎಂದು ಸುಮ್ಮನಾದೆ. ಕೈಯಲ್ಲಿದ್ದ ಟೀ ಹೀರಿ, ಮನೆ ಕಡೆ ಕಾಲು ಕಿತ್ತಿದೆ. ಮನೆ ಏನೋ ರೀಚ್ ಆದೆ. ಆದ್ರೆ ಆ ದೃಶ್ಯ ಮಾತ್ರ ಮನಸೆಂಬ ಪ್ರಾಜೆಕ್ಟರ್ನಿಂದ ಸರಿಯುತ್ತಿಲ್ಲ. ಮತ್ತೆ-ಮತ್ತೆ ಆಗಂತುಕವಾಗಿ ಅದೇ ಆಲೋಚನೆ, ಛೇ ಇದೇನು ಎಂಥಾ ಪರಿಸ್ಥಿತಿ ಬಂತಲ್ಲ.. ಹೀಗೆ ಸೋ ಆನ್...
ಮಹಿಳೆ ದಾರಿದೀಪ:
ಕನ್ನಡದಲ್ಲಿ ಒಂದು ಪ್ರತಿಷ್ಠಿತ ಗಾದೆ ಇದೆ. ಅದರ ತಾತ್ಪರ್ಯ ಇಷ್ಟೆ; ರಕ್ಷಿಸಿ, ಉಳಿಸಿ ಬೆಳೆಸಬೇಕಾದವರೇ ಭಕ್ಷಕರಾದರೆ ಸಮಾಜದ ಸ್ವಾಸ್ಥ್ಯವನ್ನು ಕಾಯುವುದು ಕನಸಿನ ಮಾತೇ ಸರಿ. ಗಾದೆಯ ಪುನರ್ಮನನದ ಮೂಲ ಉದ್ದೇಶವೆಂದರೆ, ನಮ್ಮ ಹಿಂದೂಸ್ಥಾನದಲ್ಲಿ ಹಿಂದಿನಿಂದಲೂ ಮಹಿಳೆಯರಿಗೆ ಉನ್ನತ ಸ್ಥಾನ ನೀಡಲಾಗಿದೆ. ಸ್ತ್ರೀ ಮಾತೆ, ಮಮತೆಯ ಸಪ್ರತೀಕ, ಕುಟುಂಬವನ್ನು ಸರಿದಾರಿಗೆ ತರಬಲ್ಲವಳು ಹೀಗೆ ಹತ್ತು ಹಲವಾರು ರೀತಿಯಲ್ಲಿ ಹೊಗಳಿ ಉಪ್ಪರಿಗೆ ಮೇಲೆ ಕೂಡಿಸಲಾಗಿದೆ. ಅಷ್ಟೇ ಯಾಕೆ ಈಗಲೂ ಶಿಕ್ಷಣದ ವಿಚಾರಕ್ಕೆ ಬಂದಾಗ ಮಹಿಳೆಯೊಬ್ಬಳು ಕಲಿತರೇ ಇಡೀ ಕುಟುಂಬವೇ ಕಲಿತಂತೆ ಎಂಬ ಅತಿಶಯೋಕ್ತಿ ಅವಳ ಸುತ್ತ ಗಿರಕಿ ಹೊಡಿಯುತ್ತಲೇ ಇವೆ.
ಮಹಿಳೆಯ ಮರ್ಮದ ಕುರಿತು ಹೇಳಲಾಗದು. ಇತಿಹಾಸದ ಪುಟಗಳನ್ನು ಕಲಕಿದಾಗ ಹೊರಬೀಳುವ ಸತ್ಯಾಂಶ ಕೂಡ ಇದೇ ಆಗಿದೆ. ಅನೇಕ ಮಹಾನ್ ಪುರುಷರ ಹೆಸರುಗಳು ಸುವರ್ಣ ಅಕ್ಷರಗಳಲ್ಲಿ ಬರೆಯಲ್ಪಡಬೇಕಾದರೆ ಅಲ್ಲಿ ಮಹಿಳೆ ಪಾತ್ರ ಅನನ್ಯ. ಅದು ತಾಯಿಯ ರೂಪದಲ್ಲಾಗಿರಬಹುದು ಅಥವಾ ಹೆಂಡತಿ ಮತ್ತ್ಯಾವುದೋ ರೀತಿಯಲ್ಲಿ ಅವಳು ಸಾಧಿಸಲಾರದ್ದನ್ನು ಸಾಧಿಸಿದ್ದಾಳೆ. ಅದಕ್ಕಾಗಿಯೇ ಅಬ್ದುಲ್ ಕಲಾಂ ತಮ್ಮ `ಅಗ್ನಿಯ ರೆಕ್ಕಗಳು' ಪುಸ್ತಕದ ಪ್ರಿಫೇಸ್ನಲ್ಲೇ ಪದಗಳ ವರ್ಣವೆಗೆ ಸಿಗದ ತಾಯಿಯ ಕುರಿತು ಬರೆದಿದ್ದಾರೆ.
 ಅದಕ್ಕಾಗಿಯೇ ಹೆಣ್ಣು ಒಲಿದರೇ ನಾರಿ, ಮುನಿದರೆ ಮಾರಿ ಎಂದೂ ಹೇಳಲಾಗುತ್ತದೆ. ಅದಕ್ಕೆ ಹಲವು ನಿದರ್ಶನಗಳೂ ಇವೆ. ಆದರೆ, ಇಂದು ಇಂಥ ಮಹಿಳೆ ಯಾವ ಸ್ಟೆಟಸ್ಗೆ ಬಂದಿಳಿದಿದ್ದಾಳೆ ಎಂದರೆ, ಬೀದಿ ಪಕ್ಕದಲ್ಲಿ ಬಿಯರ್ ಬಾಟಲ್ ಹಿಡಿದು, `ದಂ' ಹೊಡಿಯುತ್ತಾ ಮಹಿಳಾ ಸಹಜ ಎಲ್ಲ ಗುಣಗಳನ್ನು ಗಾಳಿಗೆ ತೂರಿ, ಮಾನವನ್ನು ಮೂರು ಕಾಸಿಗೆ ಹರಾಜು ಮಾಡುತ್ತಿದ್ದಾಳೆ ಎಂದರೂ ತಪ್ಪಾಗಲಾರದು.
ಹಿಂದಿನ ಅಂಕಿಅಂಶಗಳ ಕಡೆ ಮೆಲುಕು ಹಾಕುವುದಾರೆ, 2008ರಲ್ಲಿ ಶೇ. 18.3 ಮಹಿಳೆಯರು ಧೂಮಪಾನದ ಸೇವಿಸುತ್ತಿದ್ದರು. ಅದೇ ರೀತಿ ಬೇರೆ ರಾಷ್ಟ್ರಗಳಾದ ಅಜರ್ೆಂಟಿನಾದಲ್ಲಿ ಶೇ.22.6 ಹಾಗೂ ಉರುಗ್ವೆಯಲ್ಲಿ ಶೇ. 25.1ರದಷ್ಟು ಮಹಿಳೆಯರು ಸ್ಮೋಕ್ ಮಾಡುತ್ತಾರೆ ಎಂದು ಸಂಖ್ಯಾಶಾಸ್ತ್ರ ಹೇಳುತ್ತದೆ. ಇದೇ ರೀತಿ ಮುಂದುವರೆದರೆ, 2025ರ ವೇಳೆಗೆ ಮಹಿಳಾ ಧೂಮಪಾನಿಗಳ ಸಂಖ್ಯೆಯಲ್ಲಿ ಶೇ. 20ರಷ್ಟು ಹೆಚ್ಚಳವಾಗಲಿದೆ ಎಂದು ಒಂದು ಸಂಶೋಧನೆ ಹೇಳುತ್ತದೆ.
ಅದೆಲ್ಲಾ ಬೇರೆ ವಿಚಾರ. ಆದರೆ, ನೈತಿಕತೆಯ ಗರಡಿಗೆ ಬಂದಲ್ಲಿ ಧೂಮಪಾನ ಸೇವನೆ ಎಂದರೆ ಅದು ಪಾಪ ಪ್ರಜ್ಞೆ ಎನ್ನುವಷ್ಟು ಉನ್ನತ ಆದರ್ಶವುಳ್ಳ ರಾಷ್ಟ್ರ ನಮ್ಮದು. ಇಂಥ ಪವಿತ್ರ ಭೂಮಿಯಲ್ಲಿ ಕಾಲ್ ಸೆಂಟರ್ನಲ್ಲಿ ರಾತ್ರಿ ಇಡೀ ಕೆಲಸ ನಿರ್ವಹಿಸಬೇಕಾದ ಅನಿವಾರ್ಯತೆ. ಹೀಗಾಗಿ ಮೈಂಡ್ ರಿಲ್ಯಾಕ್ಸೇಷನ್ ಎಂಬ ಕಾರಣವೊಡ್ಡಿ, ಈ ರೀತಿ ನೈತಿಕತೆಯನ್ನು ಅಧಃಪತನಗೊಳಿಸುವುದು ಯಾವ ಸೀಮೆ ನ್ಯಾಯ ಸ್ವಾಮಿ..?
ಒಟ್ಟಲ್ಲಿ ವಿದೇಶಿ ಸಂಸ್ಕೃತಿಯ ಆಗಮನದಿಂದ ನಾವು ಇಲ್ಲಿಯವರೆಗೂ ಉಳಿಸಿ ಬೆಳೆಸಿಕೊಂಡು ಬಂದಿರುವ ಸಂಸ್ಕೃತಿ ಹೊಳೆಯಲ್ಲಿ ಹಣಸೆ ಹಣ್ಣು ತೊಳೆದಂತೆ ಎಂಬಂತಾಗಿದೆ. ಇದರ ರಕ್ಷಣೆಗಾಗಿ ಮಹಿಳೆಯರೇ ಮನಸು ಮಾಡಬೇಕಷ್ಟೆ, ಬೆಂಗಳೂರಂಥ ಮೆಟ್ರೋ ಪಾಲಿಟಿಯನ್ ಸಿಟಿಗಳಲ್ಲಿ ಸ್ಮೋಕ್ ಮಾಡದಿರುವದೆಂದರೆ, ಅವರು ಒಂಥರಾ ಸಂಸ್ಕೃತಿಕರಣವಾಗದ ಗುಗ್ಗು ಎಂದು ಭಾವಿಸಲಾಗುತ್ತದೆ. ಇದಕ್ಕಾದರೂ ಬಗ್ಗಿ ಫ್ಯಾಷನ್ಗೊಸ್ಕರ ಮಾಮನಿ ಮದಿರೆಯ ಪಾಲಾಗುತ್ತಾಳೆ. ಮುಂದಾಗುವುದೆಲ್ಲಾ ಗೊತ್ತೇ ಇದೆ. ನೀವೆ ಹೇಳಿ ಇಂತಹರಿಂದ ಮುಂದೆ ಅವರು ಮಕ್ಕಳು ಏನನ್ನಾದರೂ ಸಮಾಜದ ಉದ್ಧಾರಕ್ಕಾಗಿ ಏನಾದರೂ ಮಾಡುತ್ತಾರೆ ಎನ್ನುವುದು ಪಳಗದ ಸಲಗವನ್ನು ನಂಬುವ ಮುಗ್ಧತನವೇ ಸರಿ. ಅಲ್ವಾ..?
http://www.ekanasu.com/2012/01/blog-post_01.html




ಹೀಗೊಂದು `ನೀರು+ಧಾರ=ನಿರ್ಧಾರ'
ತುಂಬಾ ಚೆನ್ನಾಗಿ ನೆನಪಿದೆ, ಬರೋಬ್ಬರಿ ಆರು ತಿಂಗಳು ಕಳೆದಿರಬಹುದು ಅನ್ಸುತ್ತೆ. ನಾನು ನನ್ನ ಬ್ಲಾಗ್ ಅನ್ನು ಬಳಕೆ ಮಾಡಲಾಗಲಿಲ್ಲ. ಅದಕ್ಕೆ ಲೇಖನಗಳನ್ನು ಬರೆಯಬೇಕೆಂದು ಹಲವುಬಾರಿ ಕುಳಿತುಕೊಂಡೆ, ಆದರೆ ಹಾಗೇ ಮಾಡಲಾಗಲಿಲ್ಲ. ಕಾರಣ, ಸ್ವಲ್ಪ ಬ್ಯೂಸಿ ಆಗಿದ್ದೆ. ಅದಕ್ಕಾಗಿ ಈಗ ಒಂದು ನಿರ್ಧಾರಕ್ಕೆ ಬಂದಿದ್ದೇನೆ. ಕನಿಷ್ಠ ತಿಂಗಳಲ್ಲಿ ಎರಡು ಬಾರಿಯಾದರೂ, ಬ್ಲಾಗ್ ಅನ್ನು ಬಳಸಲೇ ಬೇಕು.ಇದಕ್ಕಾಗಿ ನಿಮ್ಮ ಪ್ರೋತ್ಸಾಹ ಹಾಗೂ ಬೆಂಬಲ ನನಗೆ ಅವಶ್ಯ... ನೀವು ಹಾಗೇ ಮಾಡ್ತೀರಿ ಅನ್ನೋ ನಂಬಿಕೆ ನನಗಿದೆ.
ಎಲ್ಲರಿಗೂ ವಿಜಯ ದಶಮಿಯ ಹಾರ್ದಿಕ ಶುಭಾಷಯಗಳು.
ನಿಮ್ಮ ಸ್ನೇಹಿತ
ಆತೀಶ್

Saturday, July 16, 2011

Direct Word...

ಮತ್ತೆ ನಲುಗಿದ ಮುಂಬೈ...

ಹೈ ಸೋನೆ ಕಿ ಚಿಡಿಯಾ, ಅಬ್ ತೇರೆ ಬೇಟೆ ಹೋಗಯೆ ಹೈ ರಾಜನೀತಿಕಿ ಗುಡಿಯಾ(ಕೈಗೊಂಬೆ)!!!
"ನಾರೀಮನ್ ನರಳಾಟ, ತಾಜ್ ತಾಂಡವ ಇನ್ನೂ ಹಸಿ-ಬಿಸಿ. ಹೀಗಿರುವಾಗಲೇ ಏದುಸಿರು. ಲೆಟ್ಸ್ ಟುಗೆದರ್ ಇದು ಸರ್ವ ಭಾರತೀಯರು ಒಂದಾಗಲೇಬೇಕಾದ ಸಮಯ. ಈಗ ಒಂದಾಗದಿದ್ದಲ್ಲಿ ಮುಂದೆ ಅವಕಾಶ ದೊರಕದೆ ಹೋಗದಿರುವಲ್ಲಿ ಸಂದೇಹವಿಲ್ಲ. ಕಾರಣವಿಷ್ಟೆ, ಮುಂದೆ ಕಸಬ್ ನಿಮ್ಮ ಮನೆಗೂ ಬರಬಹುದು! ಅಲ್ಲಿಯೂ ರಕ್ತದೋಕುಳಿ ಹರಿಸಬಹುದು. ಇಲ್ಲಿ ರಾವಣನ ನಿನರ್ಾಮ ಖಚಿತ... (ರಾವಣ ಯಾರು ಎನ್ನುವುದು ಇನ್ನೂ ನಿಗೂಢ ಎನ್ನುವುದು ನಮ್ಮ ರಾಜಕೀಯ ವ್ಯಕ್ತಿಗಳ ಅಭಿಪ್ರಾಯ..!!)"
ಪದೇ-ಪದೆ ರಕ್ತದೋಕುಳಿಯಾಡುತ್ತಿರುವ ಈ ನರಹಂತಕರರಿಗೆ ಮೂಗುದಾರ ಹಾಕುವ ಸಾಮಥ್ರ್ಯ ಭಾರತಕ್ಕಾಗಲೀ, ವಿಶ್ವದ ಹಿರಿಯಣ್ಣನ ಸ್ಥಾನದಲ್ಲಿರುವ ಅಮೆರಿಕಕ್ಕಾಗಲಿ ಅಷ್ಟೇ ಯಾಕೆ ಖುದ್ದು ಪಾಕಿಸ್ತಾನಕ್ಕೇ ಇಲ್ಲ. ಅದರ ಪರಿಣಾಮವೇ ಈ ತ್ರಿವಳಿ ಬಾಂಬ್ ಸ್ಫೋಟಗಳು.
26/11 ಇನ್ನೂ ಕಣ್ಣೆದುರು ಹಸಿಹಸಿಯಾಗಿದೆ. ಅಷ್ಟರಲ್ಲೇ 13/7 ನಡೆದು ಪರದೆಯತ್ತ ಸರಿಯಿತು. ಈ ಪಾತಕಿಗಳ ಪಾಪಕೃತ್ಯಕ್ಕೆ 17 ಜನ ಬಲಿಯಾಗಿದ್ದಾರೆ. 131 ಜನ ಜೀವನ್ಮರಣದ ನಡುವೆ ಸೆಣಸುತ್ತಿದ್ದಾರೆ. ಇಂಥ ಕ್ರೌರ್ಯದಲ್ಲಿಯೇ ಸಂತೃಪ್ತಿ ಪಡುವ ಪಾಕಿಸ್ತಾನಿಗಳು ಜಿಹಾದ್ ಹೆಸರಿನಲ್ಲಿ ಇದೆಲ್ಲಾ ನಡೆಸುತ್ತಿರುವುದಕ್ಕೆ ಕಾರಣ ಹಲವಾದರೆ, ಉದ್ದೇಶ ಒಂದೇ ಅದು ಭಯ+ಉತ್ಪಾದನೆ. ಕಂಪನಿಯಲ್ಲಿ ವಸ್ತುಗಳ ಉತ್ಪಾದನೆ ಹಾಗೂ ಟಾಗರ್ೆಟ್ಗಳಿರುವಂತೆ ಇಲ್ಲಿಯೂ ಅವರಿಗಿರುವುದು ಭಯ ಹುಟ್ಟಿಸಲೇಬೇಕೆಂಬ ಟಾಗರ್ೆಟ್.
ಇಂಡಿಯನ್ ಮುಜಾಹಿದ್ದೀನ್, ಲಷ್ಕರ್ ಕೃತ್ಯ ಎಂದು ಹೇಳಲಾಗುತ್ತಿದೆ. ಆದರೂ ಇನ್ನೂ ಯಾರೂ ಇದರ ಹೊಣೆಹೊತ್ತುಕೊಂಡಿಲ್ಲ. ಯಾರು ಹೊಣೆ ಹೊತ್ತುಕೊಂಡರೆಷ್ಟು ಬಿಟ್ಟರೆಷ್ಟು ಏನೂ ಬದಲಾಗದು ಎಂಬ ಮಾತು ಮಾತ್ರ ಸ್ಪಟಿಕದಷ್ಟು ಸ್ಪಷ್ಟ.
ಈ ಘಟನೆಗಳನ್ನು ಗಮನಿಸುತ್ತಿರುವಾಗ ಒಂದು ಮಾತು ನೆನಪಾಗುತ್ತೆ, "ಹಿಂಸೆ ಕೊಡುವವರಿಗಿಂತ ಸಹಿಸಿಕೊಳ್ಳುವವನೇ ಹೆಚ್ಚು ಅಪರಾಧಿ..." ಹಾಗೇ ಇಲ್ಲಿಯೂ ಅಷ್ಟೆ. ಬೆಣ್ಣೆ ಕೈಲಿಟ್ಟುಕೊಂಡು ತುಪ್ಪಕ್ಕಾಗಿ ಅಲೆದಾಡಿದಂತಾಗಿದೆ. ನಮ್ಮೀ ರಾಷ್ಟ್ರದ ಸ್ಥಿತಿ, ಪರಿಸ್ಥಿತಿ... ಇದರ ಫಲಶ್ರುತಿ ಅಮಾಯಕರ ಪ್ರಾಣತ್ಯಾಗ.
ಈ ಉದಾಹರಣೆಗೆ ಇಷ್ಟೇ ಕಾರಣ, ಕಸಬ್ ಸಿಕ್ಕು ತಿಂಗಳುಗಳು ಸವೆಯುತ್ತಿವೆ. ವರ್ಷಗಳು ಘಟಿಸುತ್ತಿವೆ. ಆದರೆ, ಬೆಳವಣಿಗೆ ಮಾತ್ರ ಶೂನ್ಯ! ಬದಲಿಗೆ `ಪಾತಕಿಗಳ ಪತಿ'ಗೆ ರಾಜ ಸತ್ಕಾರ ಹಾಗೂ ಭೋಗದ ಜೀವನ ನೀಡಲಾಗುತ್ತಿದೆ. ಇರುವುದಕ್ಕೆ ಜೈಲು, ಓದುವುದಕ್ಕೆ ಪುಸ್ತಕಗಳು, ಸಮಯ-ಸಮಯಕ್ಕೆ ಬೇಕಾದ ಎಲ್ಲಾ ವಸ್ತುಗಳು ಹಾಗೂ ಇಲ್ಲಿಯವರೆಗೆ ಇವನ ಜೀವನ ನಿರ್ವಹಣೆಗೆ ಭಾರತ (ಅ)ಸಕರ್ಾರ ಕೋಟಿ ಕ್ರಾಸ್ ಮಾಡಿದೆ. ಬಹುಶಃ ಬೆಂಗಳೂರಿನಂಥ ನಗರದಲ್ಲಿ ದಿನವಿಡೀ ದುಡಿಯುವ ಕೂಲಿಯಾಳಿಗೂ ಆ ಜೀವನ ಅಲಭ್ಯವಾಗಿದೆ. ಇದನ್ನು ನಮ್ಮ ದೌಭರ್ಾಗ್ಯವೆಂದರೆ ಉತ್ಪ್ರೇಕ್ಷೆಯೇನಲ್ಲ.
ವಿಷಯವಸ್ತು ಇಷ್ಟೆ, 13 ಜುಲೈ ಮಿಸ್ಟರ್ ಪರಮ ಪಾತಕಿಯ ಹುಟ್ಟು ಹಬ್ಬ. ಆ ಹುಟ್ಟು ಹಬ್ಬದ ಉಡುಗೊರೆಯಾಗಿ ಅವನಿಗೆ ಭಾರತೀಯರ ರಕ್ತದ ಹವ್ವಿಸ್ಸು. ವಾಹ್ಹ ಎಂಥಾ `ದೇಶ ಪ್ರೇಮ.' ಅವರಿಗಾಗಿ ತಾಜ್ನಲ್ಲಿ ತಕರಾರಿಲ್ಲದೆ ತರಾತುರಿಯಲ್ಲಿ ಬುಲೆಟ್ ಸುರಿಸಿದ ಕಸಬ್ ಇಂದು (ನಿ)ರ್ಬಂಧಿ. ಅಂಥವನಿಗಾಗಿ ಇಂಥದ್ದೊಂದು ಕೊಡುಗೆ ನೀಡುವ ಉ(ದಾರ)ದ್ರಿ  ಮನೋಭಾವ. ಇವರ ತಮ್ಮ ಸ್ವಾರ್ಥಕ್ಕಾಗಿ, ಸೀಟು ರಕ್ಷಣೆಗಾಗಿ ತಿಪ್ಪರಲಾಗ ಹಾಕುವ ರಾಜಕೀಯ ಧುರಿಣರು.
ಇಷ್ಟೇಲ್ಲಾ ಹೇಳೋದರ ಪ್ರಮುಖ ಉದ್ದೇಶ ಒಂದೆ, ಸಾಯಂಕಾಲದ ಸುಂದರ ಗಾಳಿಯಲ್ಲಿ ಕುಟುಂಬದೊಂದಿಗೆ ಏನೋ ಖರೀದಿ ಮಾಡಬೇಕೆಂದು ಬಂದ ಮಕ್ಕಳು, ಪಾಲಕರು ಹೀಗೆ ಹತ್ತು ಹಲವಾರು ವರ್ಗದ ಜನ ನಿಭರ್ಿಡೆಯಿಂದ (ಬಹುಶಃ ಇದು ತಮ್ಮ ಮನೆಯೆಂದು) ತಿಳಿದೋ ಏನೋ ತಿರುಗಾಡುತ್ತಿದ್ದರು. ಅಂಥ ವೇಳೆ ನಡೆದುದ್ದೇ ಈ ನರಮೇಧ....
ಜಸ್ಟ್ ಈ ನರಮೇಧದ ಕಡೆ ಮೆಲುಕು ಹಾಕೋಣ:
mugdha aakrandana
ಅಪೇರಾ ಹೌಸ್, ಜವೇರಿ ಬಜಾರ್, ಚನರ್ಿರಸ್ತೆ ಹಾಗೂ ದಾದರ್ ಮತ್ತಿತರ ಸ್ಥಳಗಳಲ್ಲಿ ಒಟ್ಟು 9 ನಿಮಿಷಗಳಲ್ಲಿ ಅಂದರೆ, 6.51-7 ಆಸುಪಾಸಿನವರೆಗೆ ನಡೆದ ಈ ಡೀಲಿಂಗ್ ಮತ್ತೆ ಜನರಲ್ಲಿ ಎಲ್ಲಿಲ್ಲದ ಭಯ ಮೂಡಿಸಿದೆ. ವಿಶೇಷವೆಂದರೆ ಈ ಮೂರೂ ಸ್ಥಳಗಳು ಜನನಿಬಿಡ. ಇಂಥ ಸ್ಥಳದಲ್ಲಿ ಸ್ಫೋಟ ನಡೆಯಬೇಕಾದ್ದಲ್ಲಿ ಸಾಮಾನ್ಯವಾದುದ್ದೇನಲ್ಲ. ಇದೊಂದೆ ಅಲ್ಲ, ಯಾವ ಸ್ಫೋಟ ನಡೆಯಬೇಕಾದರೂ ಹಿಂದೆ ಪ್ರಭಾವಿ ವ್ಯಕ್ತಿಗಳ ಕೈ ಇರಲೇಬೇಕು. ಹೀಗಿದ್ದಾಗ ಮಾತ್ರ ಇದು ಸಾಧ್ಯ. ಈಗ ಪ್ರತಿಯೊಂದು ಪ್ರಾಬ್ಲಮ್ಗಳ ಎದುರಿರುವುದು ಒಂದೇ ಸವಾಲು, ಅದು ಈ ರಕ್ತದೋಕುಳಿ ಹಿಂದಿರುವ ಕೈಗಳನ್ನು ಪತ್ತೆ ಹಚ್ಚುವ ಕೆಲಸವಾಗಬೇಕು.
ಈ ವಿಷಯಗಳು ಸೈಡ್ಗಿಟ್ಟು, ಸರಣಿ ಸ್ಫೋಟಗಳ ಕುರಿತು ನಮ್ಮ ರಾಷ್ಟ್ರದ ಹೊಣೆಹೊತ್ತವರ ಅಭಿಪ್ರಾಯಗಳನ್ನು ನೋಡೋಣ;

"ಈ ವಿಧ್ವಂಸಕ ಕೃತ್ಯದ ಹಿಂದಿರುವವರ ಹೆಸರು ಹೇಳಲಾರೆ ಹಾಗೂ ಇದರ ಹಿಂದಿರುವವರ ಸುಳಿವು ಸಿಕ್ಕಿಲ್ಲ"
ಪಿ. ಚಿದಂಬರಂ, ಗೃಹ ಸಚಿವ
"ಭಯೋತ್ಪಾದನೆಯನ್ನು ಬೇರು ಸಹಿತ ಕಿತ್ತೊಗೆಯಲು ಸಕರ್ಾರ ನೀತಿಯನ್ನು ರೂಪಿಸಬೇಕು. ವಿಫಲವಾಗಿರುವುದು ಗುಪ್ತಚರ ಸಂಸ್ಥೆಯಲ್ಲ ಸಕರ್ಾರ"
ಲಾಲ್ಕೃಷ್ಣ ಅಡ್ವಾಣಿ, ಬಿಜೆಪಿ ಹಿರಿಯ ನಾಯಕ.
ಉಗ್ರರ ಎಲ್ಲ ದಾಳಿಗಳನ್ನು ತಡೆಯುವುದು ಕಠಿಣ. ಅಮೆರಿಕದಲ್ಲೂ ಉಗ್ರರ ದಾಳಿಗಳು ನಡೆದಿದ್ದು, ಅದನ್ನು ತಡೆಯಲು ಅವರಿಂದಲೂ ಸಾಧ್ಯವಾಗಲಿಲ್ಲ."
ರಾಹುಲ್ ಗಾಂಧಿ, ಎಐಸಿಸಿ ಕಾರ್ಯದಶರ್ಿ.

ಹೀಗೆ ಹಲವರು ಹಲವು ರೀತಿಯಲ್ಲಿ ತಮ್ಮ ಅಭಿಪ್ರಾಯಗಳನ್ನು ತಿಳಿಸಿದ್ದಾರೆ. ಇದರಲ್ಲಿ ಕೆಲವರದ್ದು ಪಕ್ಷ ಉಳಿಸಿಕೊಳ್ಳುವ ಪ್ರಯತ್ನವಾದರೆ, ಇನ್ನೂ ಕೆಲವರದ್ದು ಪಕ್ಷ ಬೀಳಿಸುವುದಾಗಿದೆ. ಅವರ ಅಭಿಪ್ರಾಯಗಳಲ್ಲಿ ಪಾರದರ್ಶಕತೆ ಎನ್ನುವುದು ಮೈಲಿ ದೂರ!
ಸತ್ತವರು ಸುಮಾರು. ಆದರೆ ಆ ಸ್ಫೋಟದಲ್ಲಿ ಯಾರೂ ಪ್ರಭಾವಿ ವ್ಯಕ್ತಿಗಳಿಲ್ಲ. (ಇದು ಇಂಥರಾ ಗುಬ್ಬಿ ಮೇಲೆ ಬ್ರಹ್ಮಾಸ್ತ್ರ ಬಿಟ್ಟಂತೆ ಎಂದೆನ್ಸಲ್ವಾ?) ಇದರ ಒಳಾರ್ಥ ಸುಸ್ಪಷ್ಟ, ಕಸಬ್ ಬುಲೆಟ್ಗೆ ಕಾಣುವುದು ಕೇವಲ ಬಡವರು, ಅಬ್ಬೇಪಾರಿಗಳು ಹೊರತು ಪ್ರಭಾವಿ(ಸ್ಟ್ರಾಂಗ್) ವ್ಯಕ್ತಿಗಳಲ್ಲ. ಇದೆಲ್ಲಾ ಗಮನಿಸಿವುದಾದರೆ ಕಿತ್ತೂರು ರಾಣಿ ಚೆನ್ನಮ್ಮಳ ರಾಜ್ಯದಲ್ಲಾದ ದಗೇಬಾಜಿ ಏನಾದರೂ ನಮ್ಮಲ್ಲಿಯೂ ನಡೆಯುತ್ತಿರಬಹುದೇ ಎಂಬ ಪ್ರಶ್ನೆ ಏಳುವುದು ಸಾಮಾನ್ಯ... ಅಷ್ಟೆ ಯಾಕೆ ಇದು ಪ್ರತಿಯೋರ್ವ ಭಾರತೀಯನ ಆಂತರ್ಯದ ಕೂಗು.
ಆತೀಶ್ ಬಿ ಕೆ.

Sunday, April 24, 2011

ಫ್ರಾನ್ಸ್ಲ್ಲಿ ಘಮಲಿದ ಭಾರತದ ಕಮಲ

`ದೇವೀರಿ' ಮುಡಿಗೆ ಕಮಲ

ನಾನು ಏನೂ ಮಾಡಬೇಕಾಗಿಲ್ಲ; ಏನನ್ನೂ ಸಾಧಿಸಬೇಕಾಗಿಲ್ಲ. ಎಂತಹುದೇ ರಿಸ್ಕ್ ತೆಗೆದುಕೊಳ್ಳಬೇಕಾಗಿಲ್ಲ. ಒಂದು ವೇಳೆ ಯಾವುದರಲ್ಲಾದರೂ ಸೋಲುಂಟಾದರೆ, ಅದರಿಂದ ನುಣುಚಿಕೊಳ್ಳಬಹುದು. ಇತರರ ಸಹಾನುಭೂತಿ ಪಡೆಯಬಹುದು. ಜವಾಬ್ದಾರಿಯನ್ನು ಇತರರು ಹೊತ್ತುಕೊಳ್ಳುತ್ತಾರೆ. ಯಾರೊಂದಿಗೂ ಸ್ಪಧರ್ಿಸಬೇಕಾದ ಅಗತ್ಯವಿಲ್ಲ. ಎಲ್ಲವನ್ನು ಗಂಡ ನೋಡಿಕೊಳ್ಳುತ್ತಾನೆ; ವಯಸ್ಸಾದ ಮೇಲೆ ಮಕ್ಕಳಂತೂ ಇದ್ದೇ ಇರುತ್ತಾರಲ್ಲ! ಈ ರೀತಿ ನೇತ್ಯಾತ್ಮ ಹಾಗೂ ನಿಷ್ಕ್ರಿಯ ಆಲೋಚನೆಯಿಂದಾಗಿ ಸ್ತ್ರೀ ನಾಲ್ಕು ಗೋಡೆಗಳ ನಡುವಿನ ದೌಭರ್ಾಗ್ಯಲಕ್ಷ್ಮಿ, ಅಬಲೆ, ಹೆರಿಗೆ ಯಂತ್ರ, ಏನನ್ನೂ ಮಾಡಲು ಶಕ್ತಳಲ್ಲವೆಂಬ ಪಟ್ಟ ಕಟ್ಟಿಕೊಂಡು ಅಭಿವೃದ್ಧಿಯಿಂದ ವಂಚಿತಳಾಗುತ್ತಿದ್ದಾಳೆ.
ತನ್ನಲ್ಲಿ ನೂರಾರು ಕೌಶಲ್ಯಗಳಿದ್ದರೂ ಕ್ರಿಯಾಶೀಲತೆಯಿಂದ ಕಾರ್ಯ ನಿಭಾಯಿಸಿಕೊಂಡು ಹೋಗುವ ಚಾಕಚಕ್ಯತೆ, ನಾಯಕತ್ವದ ಗುಣಗಳಿದ್ದರೂ, ಶೈಕ್ಷಣಿಕ ಅರ್ಹತೆಗಳಿದ್ದರೂ ಅವುಗಳು ಅಡುಗೆಮನೆಗೆ ಸೀಮಿತ. ಸ್ತ್ರೀ ಇಂದಿಗೂ ಹಲವು ಕುಟುಂಬಗಳಲ್ಲಿ ಸ್ವತಂತ್ರಳಾಗಿ ನಿಧರ್ಾರಗಳನ್ನು ತೆಗೆದುಕೊಳ್ಳುವಂತಿಲ್ಲ. ಸ್ವಚ್ಚಂದವಾಗಿ ಬದುಕುವಂತಿಲ್ಲ; ದುಡಿದರೂ ಸ್ವತಂತ್ರವಿಲ್ಲ. ಯಾರೊಂದಿಗೂ ಮಾತನಾಡುವಂತಿಲ್ಲ; ಬೆರೆಯುವಂತಿಲ್ಲ. ಇದಕ್ಕೆ ಅವಳ ಸಕುಂಚಿತ ಮನೋಭಾವವೂ ಕಾರಣವಾಗಿದೆ!
ಬರೀ ಮಹಿಳೆಯ ಸಂಕುಚಿತ ಮನೋಭಾವವೇ ಆಕೆಯ ವ್ಯವಸ್ಥಿತ ಶೋಷಣೆಗೆ ಸಿಲುಕಿ ನಲುಗಲು ಕಾರಣವೆಂದರೆ ಪ್ರಾಯಶಃ ಮೂಗಿನ ನೇರಕ್ಕೆ ನುಡಿದಂತಾಗಬಹುದು. ಇದರ ಜತೆಗೆ ನಮ್ಮ ಸಮಾಜ ಕೂಡ ಅಷ್ಟೇ ಪ್ರಭಾವ ಬೀರುತ್ತಿದೆ.
`ಬಿಹೈಂಡ್ ಎವರಿ ಸಕ್ಸಸ್ಫುಲ್ ಮ್ಯಾನ್, ದೇರ್ ಇಸ್ ಎ ವುಮ್ಯಾನ್' ಎಂಬ ವಾಕ್ಯ ಕೇಳಿದ ತಕ್ಷಣ ಪ್ರತಿಯೊಬ್ಬ ಮಹಿಳೆ ಅಭಿಮಾನದಿಂದ ಹಿಗ್ಗಿ ಹೀರೆಕಾಯಿಯಾಗಬಹುದು. ಆದರೆ ಅದರಲ್ಲಿಯೇ ಅಡಕವಾಗಿರುವ ಮತ್ತೊಂದು ಅರ್ಥದ ಪರಿವೇ ಅವಳಿಗಿಲ್ಲ. ಇದರ ದ್ವಂದ್ವಾರ್ಥವೆಂದರೆ, ಮಹಿಳೆಯರು ಪುರುಷರ ಹಿಂದೆ ಇರಬೇಕೇ ವಿನಃ ಮುಂದೆ ಬಂದು ಹೆಸರಿಗಾಗಿ ಹೋರಾಟ ನಡೆಸುವಂತಿಲ್ಲ. ಸ್ವವರ್ಚಸ್ಸಿಗಾಗಿ ಸೆಣಸುವಂತಿಲ್ಲ. ಅಭಿವೃದ್ಧಿ ಏನಿದ್ದರೂ ಪುರುಷರಿಗೆ, ಮಹಿಳೆ ಪರದೆ ಹಿಂದಿನ ಕಲಾವಿದೆಯಷ್ಟೆ.


ಈ ಸಮಾಜದ ಅಂಕುಡೊಂಕು, ನಿಂದನೆಯ ಮಾತುಗಳಿಗೆ ಕಿವಿಗೊಟ್ಟು ತಮ್ಮ ಅಭಿವೃದ್ಧಿ ಮೇಲೆ ತಾವೇ ಕಲ್ಲುಹಾಕಿಕೊಳ್ಳುವುದು ಯಾವ ಸೀಮೆ ಸಂಸ್ಕೃತಿ? ಅಂದಿನ ಪುರುಷ ಪ್ರಧಾನ ಸಮಾಜಕ್ಕೆ ಸವಾಲಾಗಿ ನಿಂತವರು ಇಂದು ಇತಿಹಾಸದ ಪುಟಗಳಲ್ಲಿ ರಾರಾಜಿಸುತ್ತಿದ್ದಾರೆ. ಅಷ್ಟೇ ಯಾಕೆ ಪ್ರಸ್ತುತ ಸಮಾದಲ್ಲಿಯೂ ಅನೇಕ ಮಹಿಳೆಯರು ತಮ್ಮ ಸಾಧನೆಯಿಂದ ಮೆರೆದಿದ್ದಾರೆ. ಅದರಲ್ಲಿ ಬಾಲಿವುಡ್ ತಾರೆ ನಂದಿತಾದಾಸ್ ಕೂಡ ಒಬ್ಬರು.

ಯಾರು ಈ ನಂದಿತಾದಾಸ್?
ನಂದಿತಾ ಭಾರತೀಯ ನಟಿ ಹಾಗೂ ನಿದರ್ೇಶಕಿ ಕೂಡ ಹೌದು. ಸಿನಿಮಾರಂಗದಲ್ಲಿ ತನ್ನದೇ ಆದ ಛಾಪನ್ನು ಮೂಡಿಸಿರುವ ಈಕೆ ಹಲವು ರಾಷ್ಟ್ರೀಯ ಹಾಗೂ ಅಂತಾರಾಷ್ಟ್ರೀಯ ಪ್ರಶಸ್ತಿಗಳನ್ನು ಗಿಟ್ಟಿಸಿಕೊಂಡಿದ್ದಾರೆ. ಇಂಡೋ ಫ್ರಾನ್ಸ್ ಸಹಕಾರದಿಂದ ಸಿನಿಮಾ ಅಭಿವೃದ್ಧಿಗಾಗಿ ಶ್ರಮಿಸಿ ಹಲವು ಕೊಡುಗೆಗಳನ್ನು ನೀಡಿದ್ದಾರೆ. ಕಲೆ, ಸಂಸ್ಕೃತಿ ಹಾಗೂ ಸಾಹಿತ್ಯ ಕ್ಷೇತ್ರದಲ್ಲಿ ಇವರು ನೀಡಿರುವ ಮಹತ್ತರ ಕೊಡುಗೆ ಮತ್ತು ಕ್ರಿಯಾಶೀಲತೆಯನ್ನು ಪರಿಗಣಿಸಿರುವ ಫ್ರಾನ್ಸ್ ಸಕರ್ಾರ ಸರ್ವಶ್ರೇಷ್ಠ ಫ್ರಾನ್ಸ್ ನಾಗರಿಕ (ಶೆವೆಲಿಯರ್ ಆಫ್ ದ ಆರ್ಡರ್ ಡೆಸ್ ಆಟರ್್ ಎಟ್ ಡೆಸ್ ಲೆಟರ್ಸ್) ಪ್ರಶಸ್ತಿ ನೀಡಿ ಗೌರವಿಸಿದೆ.
ಫೈರ(1996), ಅಥರ್್(1998), ಬವಾಂದರ್(2000) ಹಾಗೂ ಅಮಾರ್ ಭುವನ್(2002) ಚಲನಚಿತ್ರಗಳ ಮೂಲಕ ರಾಷ್ಟ್ರೀಯ ಹಾಗೂ ಅಂತಾರಾಷ್ಟ್ರೀಯ ಮಟ್ಟದಲ್ಲಿ ಚಿರಪರಿಚಿತರಾದರು ನಂದಿತಾ ದಾಸ್. ನಿದರ್ೇಶಕಿಯಾಗಿ ಹಲವು ಚಿತ್ರಗಳನ್ನು ನಿದರ್ೇಶಿಸಿರುವ ಪ್ರತಿಭಾವಂತೆ. ಅಲ್ಲಿಯವರೆಗೆ ಕ್ಯಾಮರಾ ಹಿಂದಿನ ಕಾರುಬಾರು ನೋಡಿಕೊಳ್ಳುತ್ತಿದ್ದ ಈಕೆ ಬಳಿಕ ತನ್ನ ಸೌಂದರ್ಯ, ನಟನೆ, ಮಾತಿನ ಶೈಲಿಯಿಂದ ವೀಕ್ಷಕರ ಮೆಚ್ಚುಗೆ ಗಳಿಸಿದ್ದಾರೆ.
ಅವರು ನಟಿಸಿದ ಚಿತ್ರ `ಫಿರಾಕ್' ಗಳಿಸಿದ ಖ್ಯಾತಿಗೆ ಪುಳಕಿತರಾದ ದಾಸ್ ಸಂಗ್ರಾಮ್ ರೇಡಿಯೋ ನಡೆಸಿದ ಸಂದರ್ಶನದಲ್ಲಿ ಅಭಿಮಾನಿ ದೇವರುಗಳಿಗೆ ಅಭಿನಂದಿಸಿ, ಅವರ ಪ್ರತಿಕ್ರಿಯೆಗಳನ್ನು ಒಪ್ಪಿಕೊಳ್ಳುವುದಾಗಿ ತಿಳಿಸಿದ್ದು ಅವರ ಸರಳ ಸಜ್ಜನಿಕತೆಗೆ ಉದಾಹರಣೆ.

ಬಹುಮುಖ ಪ್ರತಿಭೆ
ಇಂಗ್ಲಿಷ್, ಹಿಂದಿ, ಮಲಯಾಳಂ, ಬಂಗಾಳಿ, ತಮಿಳು, ಮರಾಠಿ, ಕನ್ನಡ, ಓರಿಯಾ ಮತ್ತು ಉದರ್ು ಹೀಗೆ ವಿಭಿನ್ನ ಭಾಷೆಗಳ ಚಿತ್ರಗಳಲ್ಲಿ ಅಭಿನಯಿಸಿ ಪ್ರತಿಭೆ ಮೆರೆದಿದ್ದಾರೆ. ಅಷ್ಟೇ ಅಲ್ಲದೆ ಹಲವು ಆಡಿಯೋ ಬುಕ್ಸ್ಗಳಿಗೆ ದನಿ ಕೂಡ ನೀಡಿದ್ದಾರೆ. ಕೃಷ್ಣವರ್ಣದ ಈ ಬೆಂಗಾಲಿ ಸುಂದರಿಯದು ಬಹುಮುಖ ಪ್ರತಿಭೆ.
ಅವರು ನೀಡಿರುವ ಧ್ವನಿಪುಸ್ತಕಗಳಲ್ಲಿ ಅಂಡರ್ ದ ಬನಿಯಾನ್, ವಂಡರ್ ಪೆಟ್ಸ್ ಆಸ್ ಎ ಬೆಂಗಾಲ್ ಟೈಗರ್ ಇವು ಮಕ್ಕಳ ಸಿರೀಸ್ಗಳಾಗಿವೆ. ಅದೇ ರೀತಿ ಮಹಾತ್ಮ ಗಾಂಧೀಜಿಯವರ ಆತ್ಮಚರಿತ್ರೆ `ದ ಸ್ಟೋರಿ ಆಫ್ ಮೈ ಎಕ್ಸ್ಪೆರಿಮೆಂಟ್ ವಿಥ್ ಟ್ರುಥ್' ಪ್ರಮುಖವಾದವುಗಳಾಗಿವೆ.


ವೈಯಕ್ತಿಕ ವಿಚಾರಗಳು:
ದಾಸ್ ಭಾರತೀಯ ಖ್ಯಾತ ಪೇಂಟರ್ ಜಟಿನ್ ದಾಸ್ ಹಾಗೂ ಲೇಖಕಿ ವರ್ಷ ಅವರ ಮಗಳಾಗಿ ಜನಿಸಿ, ದೆಹಲಿ ವಿವಿಯಿಂದ(ಮಿರಂದ್ ಹೌಸ್) ಜಿಯಾಗ್ರಫಿ ವಿಷಯದಲ್ಲಿ ಪದವಿ ಪಡೆದರು. ನಂತರ ಸಮಾಜಕಾರ್ಯ ವಿಷಯದಲ್ಲಿ ಸ್ನಾತಕೋತ್ತರ ಪದವಿಯನ್ನು ದೆಹಲಿ ಸ್ಕೂಲ್ನಿಂದ ಪಡೆದರು. ಶಿಕ್ಷಣ ಮುಗಿಸಿ ಕಲೆಯ ಕಡೆಗೆ ವಾಲಿದರು. ಇವರಲ್ಲಿದ್ದ ಕಲಾವಿದೆಯನ್ನು ಬೆಳೆಸಿ, ಪೋಷಿಸಿದ್ದು `ಜನನತ್ಯ ಮಂಚ ಥೇಟರ್ ಗ್ರೂಪ್', ಈ ಸಂಸ್ಥೆ ಮೂಲಕ ಅವರು ಕಲಾ ಜೀವನಕ್ಕೆ ಕಾಲಿಟ್ಟರು.
2002ರಲ್ಲಿ ಸೌಮ್ಯಸೇನ್ ಎಂಬುವವರನ್ನು ಮದುವೆಯಾಗಿ ಸಾಂಸಾರಿಕ ಜೀವನಕ್ಕೆ  ಕಾಲಿಟ್ಟ ನಂದಿತಾ ಜಾಹಿರಾತು ಸಂಸ್ಥೆಯೊಂದನ್ನು ತೆರೆದು ಅದರ ಮೂಲಕ ಹಲವು ಸಾಮಾಜಿಕ ಜಾಗೃತಿಯ ಆಡ್ಫಿಲ್ಮ್ಗಳನ್ನು ಮಾಡಿದರು. ಬಳಿಕ ಸಂಸಾರಿಕ ಜೀವನದಲ್ಲಿ ಯಾವುದೋ ವಿರಸದಿಂದಾಗಿ ವಿಚ್ಛೇದನ ನೀಡಿದರು. ಮತ್ತೆ 2010 ಜನವರಿ 2ರಂದು ಸುಭೋದ್ ಮಸ್ಕಾರ್ ಅವರನ್ನು ವಿವಾಹವಾದರು.
 ಪ್ರಶಸ್ತಿಗಳ ಮಹಾಪೂರ:
2001-ಅತ್ಯುತ್ತಮ ನಟಿ (ಬವಾಂದರ್ ಚಿತ್ರಕ್ಕೆ), 2002-ಅತ್ಯುತ್ತಮ ನಟಿ (ಅಮಾರ್ ಭುವಾನ್ ಚಿತ್ರಕ್ಕೆ), 2002-ಕನ್ನಾಥಿಲ್ ಮುತ್ತಾಮಿತ್ತಲ್, ವಿಶೇಷ ಪ್ರಶಸ್ತಿ ತಮಿಳುನಾಡು ಸಕರ್ಾರ, 2006-ಅತ್ಯುತ್ತಮ ನಟಿ (ಕಮಲಿ),
2008-ಏಷ್ಯನ್ ಫೆಸ್ಟಿವಲ್ ಆಫ್ ಫಸ್ಟ್ ಫಿಲ್ಮನಲ್ಲಿ; ಅತ್ಯುತ್ತಮ ಚಿತ್ರ-ಫಿರಾಕ್, ಅತ್ಯುತ್ತಮ ಚಿತ್ರಕಥೆ- ಫಿರಾಕ್ ಹಾಗೂ ಅತ್ಯುತ್ತಮ ಚಿತ್ರಕ್ಕಾಗಿ ಫಾರೆನ್ ಕರಸ್ಪಾಂಡೆಂಟ್ಸ್ ಅಸೋಸಿಯೇಷನ್ ಪರ್ಪಲ್ ಆಚರ್ಿಡ್ ಪ್ರಶಸ್ತಿ., 2008-ಶೆವೆಲಿಯರ್ ಆಫ್ ದ ಆರ್ಡರ್ ಡೆಸ್ ಆಟರ್್ ಎಟ್ ಡೆಸ್ ಲೆಟರ್ಸ್ ಪ್ರಶಸ್ತಿ, 2009- ತೀಪರ್ುಗಾರರ ವಿಶೇಷ ಬಹುಮಾನ(ಫಿರಾಕ್ ಚಿತ್ರಕ್ಕೆ), 2009-ಥೊಸೆಲೊನಿಕಿ ಫಿಲ್ಮ್ ಫೆಸ್ಟಿವಲ್ನಲ್ಲಿ ವಿಶೇಷ ಪ್ರಶಸ್ತಿ, 2010-ಫಿಲ್ಮ್ಫೆರ್ ಅವಾಡರ್್ನಲ್ಲಿ ಫಿರಾಕ್ ಚಿತ್ರಕ್ಕೆ ವಿಶೇಷ ಪ್ರಶಸ್ತಿ ಸಂದಿದೆ.
ಇಷ್ಟೊಂದು ಪ್ರಶಸ್ತಿಗಳನ್ನು ತಮ್ಮ ಮುಡಿಗೇರಿಸಿಕೊಡಿರುವ ಅಭೂತಪೂರ್ವ ಪ್ರತಿಭೆ ಇವರದ್ದಾಗಿದೆ.


ಕಲಿಯಬೇಕಾದದ್ದು ತುಂಬಾ ಇದೆ:
ಮಹಿಳೆ ಅದು ಭಾರತದಲ್ಲಿಯೇ ಹುಟ್ಟು ಬೆಳೆದಿರುವ ದಾಸ್ ಇಷ್ಟೊಂದು ಸಾಧನೆಗಳನ್ನು ಮಾಡಿರುವಾಗ ನಮ್ಮಿಂದ ಏಕೆ ಸಾಧ್ಯವಿಲ್ಲ..? ಒಂದು ಮಾತಂತೂ ನಿಜ, ಪ್ರತಿಯೊಬ್ಬರಿಗೂ ನಂದಿತಾಳಿಗೆ ದೊರೆತ ಪ್ರೋತ್ಸಾಹ ಹಾಗೂ ಅನುಕೂಲಕರವಾದ ವಾತಾವರಣ ದೊರೆಯುವುದು ದುರ್ಲಭ. ಆದರೆ ತನ್ನಲ್ಲಿರುವ ಕ್ರಿಯಾಶೀಲತೆ, ಕೌಶಲ್ಯಗಳನ್ನು ಬೆಳೆಸಿಕೊಳ್ಳುವ ಅಪರೂಪ ಅವಕಾಶಗಳಂತೂ ಇದ್ದೇ ಇರುತ್ತವೆ. ಅವುಗಳನ್ನು ಸಮರ್ಪಕವಾಗಿ ಬೆಳೆಸಿಕೊಂಡಲ್ಲಿ ಏನನ್ನು ಬೇಕಾದರೂ ಸಾಧಿಸಬಹುದು ಎಂಬುದಕ್ಕೆ ನಂದಿತಾ ದಾಸ್ ಮಾದರಿಯಾಗಿ ನಿಲ್ಲಬಲ್ಲರು.


ಆತೀಶ್ ಬಿ ಕನ್ನಾಳೆ







Friday, April 8, 2011

ಡರ್ ಕೆ ಆಗೆ ಜೀತ್ ಹೆ, ಪರ್ ಯಂಹಾ ಮೌತ್ !

ಪುಕುಶಿಮಾ ಈಗ ಮತ್ತೆ ಪುಕುಪುಕು!
"ಯಾಕೆ ಈ ಪ್ರಕೃತಿ ಹೀಗೆ ಮಾಡುತ್ತೆ...? ಏನಾದ್ರು ಪೂರ್ವಜನ್ಮದ ಹಗೆತನ ಏನಾದ್ರು ಇದೆನಾ? ಅಥವಾ ಜಪಾನ್ ಅಂದ್ರೆ ಅಲಜರ್ಿನಾ....?"

ಜಪಾನ್ ಬಹುಶಃ ಆ ದಿನವನ್ನು ಮರೆಯಬೇಕೆಂದುಕೊಂಡರೂ ಮರೆಯಲಾಗದು. ಅದು ಅಂಥ ಕರಾಳ ದಿನ. ಇಡೀ ವಿಶ್ವವೇ ನಿಬ್ಬೆರಗಾಗಿ ಆ ಕಡೆಗೆ ನೋಡುತ್ತಿತ್ತು. ಇದೇನು ಪ್ರಳಯದ ಸೂಚನೆಯೇ ಅಥವಾ ವಿನಾಶದ ಅಂಕುರವೇ..? ಭಾರತದಲ್ಲಿಯೂ ಕೂಡ ಆ ಪುಕುಪುಕು ಪ್ರಾರಂಭವಾಗಿತ್ತು. ಅಂದು ಸುದ್ದಿ ವಾಹಿನಿ ವೀಕ್ಷಿಸಿದ ಪ್ರತಿಯೊಬ್ಬರು ಉದ್ಗಾರದಿಂದ ನುಡಿದದ್ದೊಂದೆ ಇಂಥ ಟೈಂ ಎಲ್ಲೂ ಬರಬಾರ್ದಪ್ಪಾ..! ಕೆಲವರಿಗಂತೂ ಈ ಘಟನೆ ಎಸ್ಎಂಎಸ್ ಜೋಕಾಗಿ ಮಾರ್ಪಟ್ಟಿತ್ತು. ಯಮ ಚಂದ್ರಗುಪ್ತನಿಗೆ `ಜಾ ಪಾನ್ ಲೇಕೆ ಆ..' ಎಂದು ಹೇಳಿದ್ದನಂತೆ, ಆದರೆ ಅವನು ಇಡೀ ಜಪಾನ್ನನ್ನೇ ಕೊಚ್ಚಿಕೊಂಡು ಹೋದ... ಅದೆಲ್ಲಾ ಬುರುಡೆ ಬಿಡಿ. ಆದ್ರೆ ಇಂತಹ ಕ್ರಿಟಿಕಲ್ ಕಂಡಿಷನ್ ಮಾತ್ರ ಯಾವ ವೈರಿಗೂ ಬರ್ಬಾರ್ದು.
ಐತಿಹ್ಯದ ಬೆನ್ನು ಬಾರಿಸುತ್ತಾ ಕೂಡುವುದಕ್ಕಿಂತ, ಪ್ರಸ್ತುತತೆಯ ಬಗ್ಗೆ ಗಮನ ಹರಿಸಲೇಬೇಕು. ಈಗ ಮತ್ತೆ ಜಪಾನಿನಲ್ಲಿ ಸುನಾಮಿಯಾಗುವ ಮುನ್ಸೂಚನೆ ಕಾಣಿಸಿಕೊಂಡಿದೆ. ಪ್ರಾಯಶಃ ಭೂಕಂಪ ಮತ್ತೆ ಬ್ಯಾಕ್ ಟು ಪೆವೆಲಿಯನ್ ಎಂಬಂತೆ ಮರಳಬಹುದೇನೊ? ಎಂಬ ಭಯ ಕಾಡುತ್ತಿದೆ. ಗುರುವಾರವಾದ ಲಘು ಭೂಕಂಪದಿಂದ ಹಾಲಿ ಅಳಿದುಳಿದಿರುವ ಜಪಾನ್ ಅಬ್ಬೇಪಾರಿಯಾಗಿದೆ.

ಕನ್ಫೂಸ್ ಆಗೋ ಪ್ರಮೇಯವೇ ಇಲ್ಲ. ಇದೆಲ್ಲ ನಾವೇ ಮಾಡಿರೋದು ಈಗ ನಾವೆ ಅನುಭವಿಸಬೇಕು. ವಿಜ್ಞಾನ ಮುಂದುವರಿಯುವುದರಿಂದ ಏನೆನೋ ಆಗ್ತಾ ಇದೆ. ಅದನ್ನು ಅಲ್ಲಗೆಳೆಯಲಾಗದು. ಆದ್ರೆ ಆ ಏನೆನೋದಲ್ಲಿ ಇದು ಕೂಡ ಒಂದು...
"ನಮ್ ಕೈಯಲ್ಲಿರೋದು ಒಂದೇ, ಅದು ದೇವರಲ್ಲಿ ಅವರಿಗೋಸ್ಕರ ಪ್ರಾರ್ಥನೆ ಮಾಡುವುದು ಅಷ್ಟೆ ಅದನ್ನು ಬಿಟ್ಟು ಮತ್ತೇನನ್ನು ಮಾಡಲಾಗದು." ನಮ್ಮಲ್ಲಿಯೂ ಇಂಥ ಘಟನೆಗಳು ಆಗಬಾರದೆಂದರೆ ಸೃಷ್ಟಿಯ ಸಂರಕ್ಷಣೆಯಲ್ಲಿ ಎಲ್ಲರೂ ಟೊಂಕಕಟ್ಟಿ ನಿಲ್ಲಬೇಕು.. ಲೆಟ್ಸ್ ಜಾಯಿನ್ ಟುಗೆದರ್...

Wednesday, April 6, 2011

Bichu Matu...


ಒಂದು ಕಡೆ ಖುಷಿ,  
ಮತ್ತೊಂದು ಕಡೆ ನೈತಿಕತೆಯ ಅಧಃಪತನ!
ಮಿಸ್ ಪೂನಂ ಪಾಂಡೆ ನೀವ್ ಇರೋದು ಭಾರತದಲ್ಲಿ ಅದನ್ನು ಮರೀದೆ ಇದ್ರೆ ಸಾಕು.


ಭಾರತ ಶ್ರೀಲಂಕಾ ವಿರುದ್ಧ ಸಾಧಿಸಿದ ಜಯ ಪ್ರಾಯಶಃ ಪ್ರತಿಯೊಬ್ಬ ಭಾರತೀಯ ಎಂದೂ ಕೂಡ ಮರೆಯಲಾಗದು. ಅದೊಂದು ರೋಮಾಂಚಕ ಹಾಗೂ ವಿರೋಚಿತ ಜಯ. ಇಡೀ ವಿಶ್ವದೆದುರು ಸಿಂಹಳಿಯರನ್ನು ಸೆದೆಬಡಿದ ಬ್ಲೂ ಬಾಯ್ಸ್ಗಳ ಆಟದ ವೈಖರಿ ಕಣ್ಪರದೆ ಮೇಲಿಂದ ಅಳಿಸುವುದು ಅಸಾಧ್ಯವೇ ಸರಿ.
28 ವರ್ಷಗಳಿಂದ ಕಾಯುತಿದ್ದ ಆ ಕ್ಷಣ ಕೊನೆಗೂ ನಮ್ಮ ನೆಲೆದಲ್ಲೆ ಜನ್ಮ ತಳೆದದ್ದು ಮತ್ತೊಂದು ಖುಷಿಯ ವಿಚಾರ. ಈ ಹರುಷದ ವರುಷಕ್ಕೆ ಬರೀ ಪದಗಳಿಂದ ವಣರ್ಿಸುವುದು ತುಂಬಾ ಕಷ್ಟ. ಅದು ಬರೀ ಭಾರತೀಯರ ಜಯವಲ್ಲ! ಭಾರತದ ವಿಜಯ. ಧೋನಿ ಬಾರಿಸಿದ ಸಿಕ್ಸ್ಗೆ ವಾಂಖೆಡಾ ಗ್ರೌಂಡ್ ಅಷ್ಟೆ ಅಲ್ಲ, ಬದಲಿಗೆ ಇಡೀ ಭಾರತವೇ ಸಂತೋಷದಿಂದ ಕುಣಿದು ಕುಪ್ಪಳಿಸಿತು. ಬೆಂಗಳೂರಿನ ಎಂ.ಜಿ. ರೋಡ್ ಹಾಗೂ ಬ್ರಿಗೆಡ್ ರೋಡ್ನಲ್ಲಂತೂ ಹೇಳತೀರದ ಖುಷಿ ವ್ಯಕ್ತವಾಗುತ್ತಿತ್ತು.
ಹುಡುಗರಷ್ಟೆ ಅಲ್ಲ. ಹೆಂಗಳೆಯರೂ ಕೂಡ ರಾತ್ರಿ 2 ಗಂಟೆ ಆದರೂ ವಿಜಯೋತ್ಸವ ಆಚರಣೆಯಲ್ಲಿ ಫುಲ್ ಬಿಜಿ ಯಾಗಿದ್ದರು. ಏನೆ ಅನ್ನಿ ಆ ದೃಶ್ಯ ಸವಿಯಲು ಬರೀ ಎರಡು ಕಣ್ಣುಗಳು ಸಾಲವು.
ಇವೆಲ್ಲ ಒಂದು ಕಡೆ ಆದ್ರೆ ಮತ್ತೊಂದು ಕಡೆ, `ಭಾರತ ಏನಾದ್ರು ಟೂರ್ನಮೆಂಟ್ನಲ್ಲಿ ಶ್ರೀಲಂಕಾ ವಿರುದ್ಧ ಗೆದ್ದರೆ ತಾನು ಬೆತ್ತಲೆ ಪರೆಡ್ ಮಾಡುವೆ' ಎಂದು ಹೇಳಿದ್ದ ರೂಪದಶರ್ಿ ಪೂನಂ ಪಾಂಡೆಗೋಸ್ಕರ ಎಲ್ಲರೂ ಕಾಯ್ತಾ ಇದ್ರು. ಆದ್ರೆ ಪೂನಂ ಮಾತ್ರ ಕಾಣ್ಲೆ ಇಲ್ಲ :(
ಈಗಲೂ ಹಲವು ಕೊಟೇಷನ್ಗಳನ್ನು ನೀಡಿ ವಿವಾದದಲ್ಲಿದ್ದಾಳೆ ಈ ಬಿಚ್ಚಮ್ಮ. ತನ್ನ ಮೈಮಾಟದಿಂದ ಈಗಾಗಲೆ ಪಡ್ಡೆ ಹುಡುಗರಲ್ಲಿ ಹುಚ್ಚೆಬ್ಬಿಸಿರುವ ಪಾಂಡೆಗೆ ಶಿವಸೇನಾ, ಬಿಜೆಪಿ ಬೆದರಿಸಿದ್ದಕ್ಕೆ ಕ್ವೈಟ್ ಆಗಿದ್ದಾಳೆ. ಆದರೆ ಈಗಲೂ ಐಸಿಸಿ ಪಮರ್ಿಷನ್ ಕೊಟ್ರೆ ಭಾರತೀಯ ಕ್ರಿಕೆಟ್ ಆಟಗಾರರ ಮುಂದೆ ಬೆತ್ತಲಾಗುವುದಾಗಿ ಹೇಳಿದ್ದಾಳೆ. ಎಂಥಾ ಕಿಕ್ಕಿಂಗ್ ವಡ್ಸರ್್ ಅಲ್ವಾ!
ಬಡ್ಡಿಮಗುಂದು ಇಂಥವಳನ್ನು ನಮ್ಮ ಭಾರತೀಯಳೆನ್ನಲು ನಾಚಿಕೆ ಆಗುತ್ತೆ. ಶೀಲಕ್ಕಾಗಿ ಜೀವ ನೀಡುವ ಸಂಸ್ಕೃತಿ ನಮ್ಮದು ಆದರೆ ಇಂತಹ ಪವಿತ್ರ ಭಾರತ ಭೂಮಿಯಲ್ಲಿ ಜನ್ಮವೆತ್ತು ದೇಹ ತೋರಿಸುವುದಾಗಿ ಹೇಳುತ್ತಿರುವುದು ದೊಡ್ಡ ದುರಂತ. ಏನೆ ಅನ್ನಿ ಮೈತೋರಿಸಿಕೊಳ್ಳುವ ಷರತ್ತು ಮಾಡಿ, ಇಡೀ ಪರಿಸ್ಥಿತಿಯೇ ಅವಳ ಈ ನಿಧರ್ಾರಕ್ಕೆ ಎದುರಾದರೂ ಸುಮ್ಮನಾಗುವ ಬದಲು ತಾನು ಮಾತು ತಪ್ಪುವುದಿಲ್ಲವೆಂದು ಹೇಳಿಕೊಳ್ಳುತ್ತಿದ್ದಾಳೆ. ಇಂಥವರ ವಿರುದ್ಧ ಕಾನೂಕು ಕ್ರಮ ಕೈಗೊಂಡರೆ ಮುಂದಾಗುವ ಅವಘಡಗಳನ್ನು ತಪ್ಪಿಸಬಹುದೇನೊ..?
ಯಾಕೊ ನಮ್ಮ ಹುಡುಗಿಯರಿಗೆ ಸ್ವಲ್ಪ ಜಾಸ್ತಿನೇ ಸ್ವತಂತ್ರ ಸಿಕ್ಕಿದೆ ಎನೋ ಅನಸ್ತಾ ಇದೆ...

ಆತೀಶ್ ಬಿ ಕನ್ನಾಳೆ.